Wednesday, 14th May 2025

ನೈಟ್ ಕರ್ಪ್ಯೂ ಇಲ್ಲ, ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಶೀಘ್ರ

Basavaraj Bommai

ಬೆಂಗಳೂರು: ಕ್ರಿಸ್ ಮಸ್, ಹೊಸ ವರ್ಷಗಳ ಆಚರಣೆ ಬಗ್ಗೆ ಒಂದು ವಾರದ ನಂತರ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸದ್ಯಕ್ಕೆ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾಹಿತಿಯಂತೆ ಒಮಿಕ್ರಾನ್ ವೈರಸ್ ಪ್ರಕರಣಗಳು ಭಯ ಹುಟ್ಟಿಸುವಂತೆ ಇಲ್ಲ. ಹೀಗಾಗಿ ಸದ್ಯಕ್ಕೆ ನೈಟ್ ಕರ್ಪ್ಯೂ ಬಗ್ಗೆ ಯಾವುದೇ ನಿರ್ಧಾರವಿಲ್ಲ.

ಪಾಸಿಟಿವಿಟಿ ದರ ನೋಡಿದಾಗ ಬಹಳ ಗಾಬರಿಯಾಗುವಂತದ್ದೇನಿಲ್ಲ. ಹಾಸ್ಟೆಲ್ ಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿ ದ್ದಾರೆ. ಅಡುಗೆ ಸಿಬ್ಬಂದಿಗಳಿಗೆ ಎರಡು ಡೋಸ್ ಲಸಿಕೆ ನೀಡೋದು ಸೇರಿದಂತೆ ಈಗಾಗಲೇ ಪ್ರಕಟಿತ ಮಾರ್ಗಸೂಚಿಯನ್ನು ಮುಂದುವರೆಸಿಕೊಂಡು ಹೋಗುವುದು ಎಂದು ತಿಳಿಸಿದ್ದಾರೆ.

ಗಡಿ ಭಾಗದಲ್ಲಿ ಕಟ್ಟೆಚ್ಚರ ಮುಂದುವರೆಯಲಿದೆ. ಕೇರಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಗೂ ಕೋವಿಡ್ ಟೆಸ್ಟ್ ಮಾಡಿಸುವ ಆದೇಶ ಮುಂದುವರೆಯಲಿದೆ ಎಂದರು.