Sunday, 11th May 2025

40 ಓವರ್‌ಗಳ ಏಕದಿನ ಪಂದ್ಯ ಆಯೋಜಿಸುವುದು ಸೂಕ್ತ: ಉಸ್ಮಾನ್ ಖವಾಜ

ಸಿಡ್ನಿ:  ಆಸ್ಟ್ರೇಲಿಯಾದ ಆಟಗಾರ ಉಸ್ಮಾನ್ ಖವಾಜ ಏಕದಿನ ಕ್ರಿಕೆಟ್ ನಿಧಾನಕ್ಕೆ ಸಾಯುತ್ತಿದೆ ಎಂದು ಖವಾಜ ಅಭಿಪ್ರಾಯ ಪಟ್ಟಿದ್ದರು.

ಏಕದಿನ ಮಾದರಿಯ ರೋಚಕತೆ ಹೆಚ್ಚಿಸಲು ಐವತ್ತು ಓವರ್‌ಗಳ ಪಂದ್ಯದ ಬಲದಾಗಿ 40 ಓವರ್‌ಗಳ ಪಂದ್ಯ ವನ್ನು ಆಯೋಜಿಸುವುದು ಸೂಕ್ತ ಎಂದಿದ್ದಾರೆ. ಈ ಮೂಲಕ ಹೆಚ್ಚು ಪ್ರಸ್ತುತ ಹಾಗೂ ಕುತೂಹಲಕಾರಿಯಾದ ಮಾದರಿಯಾಗಿ ಏಕದಿನ ಕ್ರಿಕೆಟ್‌ಅನ್ನು ಉಳಿಸಿಕೊಳ್ಳಬಹುದು ಎಂದಿದ್ದಾರೆ ಉಸ್ಮಾನ್ ಖವಾಜ.

ಈಗ 50 ಓವರ್‌ಗಳ ಪಂದ್ಯ ಎಂಬುದು ಸುದೀರ್ಘ ಎನಿಸುತ್ತದೆ ಎಂದಿರುವ ಖವಾಜ 40 ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯನ್ನು ನಾನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ 40 ಲೀಗ್‌ನಲ್ಲಿ ಆನಂದಿಸಿದ್ದೇನೆ ಎಂದಿದ್ದಾರೆ. ಓವರ್‌ಗಳನ್ನು ಕಡಿತಗೊಳಿಸುವುದು ಈ ಮಾದರಿಯನ್ನು ಕುತೂಹಲಕಾರಿ ಯಾಗಿಸಲು ಇರುವ ಸೂಕ್ತ ದಾರಿ ಯಾಗಿದೆ ಎಂದಿದ್ದಾರೆ. ಆಡಂ ಜಂಪಾ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿ ದರು. ಈ ಸಂದರ್ಭದಲ್ಲಿ ಸ್ಟೋಕ್ಸ್ ಮೂರು ಮಾದರಿಯಲ್ಲಿಯೂ ಆಡುವುದು ತನ್ನಿಂದ ಅಸಾಧ್ಯ ಎಂಬುದನ್ನು ಹೇಳಿಕೊಂಡಿದ್ದರು.