Thursday, 15th May 2025

ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವವಿಲ್ಲ: ಅಬಕಾರಿ ಸಚಿವ ಕೆ.ಗೋಪಾಲಯ್ಯ.

ಬೆಂಗಳೂರು: ಕಳೆದ ತಿಂಗಳಷ್ಟೇ ಅಬಕಾರಿ ಇಲಾಖೆ ವಹಿಸಿಕೊಂಡಿದ್ದು, ನಾನು ಬಂದ ನಂತರ ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ ಹಾಗೂ ನಕಲಿ ಮದ್ಯ ದೊರಕಿಲ್ಲ ಎಂದು ಸುದ್ದಿಗಾರರಿಗೆ ಸಚಿವ ಕೆ. ಗೋಪಾಲಯ್ಯ ಸ್ಪಷ್ಟನೆ ನೀಡಿದರು.

ವಿಧಾನ ಸೌಧದ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವರು ನಾನು ಅಬಕಾರಿ ಇಲಾಖೆ ವಹಿಸಿ ಕೊಂಡು 22 ದಿನ ಕಳೆದಿದೆ. ಸರ್ಕಾರಕ್ಕೆ ಜಿ ಎಸ್ ಟಿ ನಂತರ ಹೆಚ್ಚು ರಾಜಸ್ವ ತರುವ ಇಲಾಖೆ ಯೆಂದರೆ ಅದು ನಮ್ಮ ಅಬಕಾರಿ ಇಲಾಖೆಯಾಗಿದ್ದು,ಇಲಾಖೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಅಂಕಿ, ಅಂಶಗಳನ್ನು ಆಧರಿಸಿ ಮುಂಬರುವ ಎರಡು ಮೂರು ತಿಂಗಳಲ್ಲಿ ಇಲಾಖೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಅಬಕಾರಿ ಇಲಾಖೆಯನ್ನು ಮೆಲಸ್ಥರಕ್ಕೇ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಇನ್ನೂ ರಾಜ್ಯದಲ್ಲಿ ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ, ಈಗಾಗಲೇ ಹಳೆ ನಿಯಮದಂತೆ CL-07 ಲೈಸೆನ್ಸ್ ನೀಡುತಿದ್ದು, ಕಾನೂನು ಮೀರಿ ಹಾಗೇನಾದರೂ ಲೈಸೆನ್ಸ್ ನೀಡಿದ್ದರೆ ಅಂತ ಲೈಸೆನ್ಸ್ ಕ್ಯಾನ್ಸಲ್ ಮಾಡಿ, ಹಾಗೇ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವೆ, ಎಂದ ಸಚಿವರು ಜೊತೆಗೆ ಸುದ್ದಿಗಾರರು ಒಂದು ಲೈಸೆನ್ಸ್ ಪಡೆದು ಮೂರ್ನಾಲ್ಕು ಬಾರ್ ಗಳನ್ನು ನಡೆಸುತ್ತಿರುವ ವಿಚಾರವನ್ನು ಸಚಿವರ ಗಮನ ಸೆಳೆದಾಗ ಸಚಿವರು ಆ ರೀತಿ ಯಾವುದೇ ಕಂಪ್ಲೈಂಟ್ ನನ್ನ ಗಮನಕ್ಕೆ ಬಂದಿಲ್ಲ.

ತಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ ನೀಡಿದರೆ ತಕ್ಷಣೆವೇ ಯಾವುದೇ ಜಿಲ್ಲೆ ಇರಲಿ ಅಲ್ಲಿರುವ ಸಂಬಂಧಪಟ್ಟ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿ ಗಳ ಗಮನಕ್ಕೆ ತಂದು ಅಮಾನತ್ ಮಾಡಲಾಗುವುದು, ಎಂಥ ಪ್ರಭಾವಿಗಳು ಇದ್ದರು ಯಾವುದೇ ಒತ್ತಡಕ್ಕೆ ಮಣಿಯದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ. ನನಗೆ ಸಮಯಾವಕಾಶ ಕೊಟ್ಟು ನೋಡಿ ಇಲಾಖೆಯನ್ನು ಹೇಗೆ ನಿರ್ವಸುತ್ತೇನೆ ಎಂದು ನೀವೇ ನೋಡಿ ಎಂದ ಅವರು ಪುನರುಚ್ಚರಿಸಿದರು.

ಇಲಾಖೆಯಲ್ಲಿ ನಾನು ಬಂದ ಮೇಲೆ ಯಾವುದೇ ವರ್ಗಾವಣೆ ನಡೆದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ 18 ರಿಂದ 25 ವರ್ಷ ವಯಸ್ಸಿನ ಹೈಸ್ಕೂಲ್ ವಿದ್ಯಾಬ್ಯಾಸ ಮಾಡುತ್ತಿರುವ ಹದಿ ಹರೆಯದ ಯುವಕ ಯುವತಿ ಯರು ಮಾದಕ ವಸ್ತುಗಳಾದ ಗಾಂಜಾ ಚಟಕ್ಕೆ ಬಿದ್ದು ವ್ಯಸನರಾಗುತಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ಹತೋಟಿಗೆ ತರಲು ಸ್ವಲ್ಪ ಕಾಲಾವಕಾಶ ನೀಡಿ ನಂತರ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಸಚಿವ ಕೆ ಗೋಪಾಲಯ್ಯ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ನಾನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಫೆ.10ರಂದು ಕೊವಿಡ್ ಸಂದರ್ಭದಲ್ಲಿ ಸಹ ಆಹಾರ ಇಲಾಖೆಯಿಂದ ಯಾವುದೇ ಫುಡ್ ಕಿಟ್ ವಿತರಣೆ ಮಾಡಿಲ್ಲ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಡುತ್ತಿರುವ ಪಡಿತರ ವ್ಯವಸ್ಥೆಯಲ್ಲಿ ಏಪ್ರಿಲ್ 1 ತಾರಿಖಿನಿಂದ ನವೆಂಬರ್ 30 ತಾರೀಖಿನ ವರೆಗೂ ಈ ರಾಜ್ಯದ ಇರುವ 19000 ಸಾವಿರಕ್ಕಿಂತ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳ ಮುಖೇನ ಆಹಾರ ಇಲಾಖೆಯಿಂದ ಕೇಂದ್ರ ಸರ್ಕಾರದಿಂದ 05 kg ಅಕ್ಕಿ ಹಾಗೂ ರಾಜ್ಯ ಸರ್ಕಾರದಿಂದ ನೀಡುವ 5 ಕೆಜಿ ಅಕ್ಕಿ,ಒಟ್ಟಿಗೆ 10 ಕೆಜಿ ಅಕ್ಕಿ, 1 ಕೆಜಿ ಬೇಳೆ, ಮೂರು ತಿಂಗಳು, ನಂತರ ಐದು ತಿಂಗಳು 10ಕೆಜಿ ಅಕ್ಕಿ, 1 ಕೆಜಿ ಕಡಲೇ ಕಾಳು, ಮತ್ತು ಒಂದು ಕುಟುಂಬಕ್ಕೆ 2ಕೆಜಿ ಗೋಧಿಯನ್ನು ವಿತರಣೆ ಮಾಡಲಾಗಿದೆ.

ಕರೋನ ಸಂದರ್ಭದಲ್ಲಿ ನಾನು ಆಹಾರ ಸಚಿವನಾಗಿದ್ದ ಸಮಯದಲ್ಲಿ ನಮ್ಮ ನಾಯಕರು ಹಾಗೂ ಈ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪನವರ ಆದೇಶದಂತೆ ರಾಜ್ಯದ ಬೀದರ್ ಜಿಲ್ಲೆಯಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆಗೆ ಯಾರೇ ಆಹಾರದ ಸಮಸ್ಯೆ ಹೇಳಿಕೊಂಡು ನನಗೆ ಹಾಗೂ ಕಚೇರಿಗೆ ಫೋನ್ ಕರೆ ಮಾಡಿದಾಗ ನಮ್ಮ ಇಲಾಖೆ ಅಧಿಕಾರಿಗಳು ಸೇರಿದಂತೆ ನಾನು ತಕ್ಷಣವೇ ಸ್ಪಂದಿಸಿ ಅವರಿಗೆ ಬೇಕಾದ ಆಹಾರದ ಫುಡ್ ಕಿಟ್ ಗಳನ್ನ ನೀಡುವು ದಕ್ಕೆ ವ್ಯವಸ್ಥೆ ಮಾಡಿ ಇಲಾಖೆಯ ಜವಾಬ್ದಾರಿಯನ್ನೂ ನಿರ್ವಹಿಸಿದ ತೃಪ್ತಿ ನಮಗಿದೆ ಎಂದರು.

 

Leave a Reply

Your email address will not be published. Required fields are marked *