Tuesday, 13th May 2025

ಏಪ್ರಿಲ್ 9ರಿಂದ ಮೇ 30ರವರೆಗೆ ಐಪಿಎಲ್‌ 2021 ?

ನವದೆಹಲಿ: ಪ್ರಸಕ್ತ ಸಾಲಿನ (2021) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಏಪ್ರಿಲ್ 9ರಿಂದ ಮೇ 30ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ.

ಜಿಸಿ ಸಭೆಯಲ್ಲಿ ಅಂತಿಮ ಅನುಮೋದನೆ ನೀಡಲಾಗುವುದು. ಲೀಗ್ ಏಪ್ರಿಲ್ 9ರಂದು ಆರಂಭವಾಗಲಿದ್ದು, ಮುಂದಿನ ವಾರ ವೇದಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ’ ಎಂದಿದ್ದಾರೆ. ಪ್ರಸ್ತಾವನೆಯಂತೆ ಏಪ್ರಿಲ್ 9ರಿಂದ ಐಪಿಎಲ್ ನಡೆಯಲಿದ್ದು, ಮೇ 30ರಂದು ಫೈನಲ್ ಪಂದ್ಯ ನಡೆಯಲಿದೆ’ ಎಂದು ಜಿಸಿ ಸದಸ್ಯರು ತಿಳಿಸಿದ್ದಾರೆ.

2021ರ ಆವೃತ್ತಿಯ ಐಪಿಎಲ್ʼನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಾಲ್ಕು-ಐದು ನಗರಗಳಲ್ಲಿ ಲೀಗ್ ಆಡುವ ಆಯ್ಕೆಯನ್ನ ಅನ್ವೇಷಿಸುತ್ತಿದೆ. ಈ ಬಗ್ಗೆ ಮಂಡಳಿಯ ಹಿರಿಯ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ.  14ನೇ ಆವೃತ್ತಿಯ ಲೀಗ್ʼ ಅನ್ನು ಯೋಜನೆಯಂತೆ ನಡೆದರೆ, ಜಿಸಿ ಅನುಮೋದನೆ ನೀಡಿದರೆ, ಒಂದಕ್ಕಿಂತ ಹೆಚ್ಚು ನಗರದಲ್ಲಿ ಆಡಬಹುದು ಎಂದಿದ್ದಾರೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿರುವುದರಿಂದ ಇದನ್ನ ಹೆಚ್ಚಿನ ಅಭಿಮಾನಿಗಳ ಬಳಿ ತೆಗೆದುಕೊಂಡು ಹೋಗುವ ಉದ್ದೇಶವಿದೆ.

ಮುಂಬೈ, ಕೊಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದ್ʼನಲ್ಲಿ ಪಂದ್ಯಗಳನ್ನ ಆಯೋಜಿಸಬಹುದು ಎಂದು ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *