Sunday, 11th May 2025

ಫ್ರಾನ್ಸ್‌ನ ರಾಷ್ಟ್ರೀಯ ದಿನ: ಮೋದಿ ವಿಶೇಷ ಅತಿಥಿ

ನವದೆಹಲಿ: ಫ್ರಾನ್ಸ್‌ನ ರಾಷ್ಟ್ರೀಯ ದಿನ (ಜುಲೈ ೧೪, ೨೦೨೩) ರಂದು ರಾಜಧಾನಿ ಪ್ಯಾರಿಸ್‌ ನಲ್ಲಿ ಆಯೋಜಿಸಲಾದ ಕಾರ್ಯ ಕ್ರಮದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪ್ರತಿ ವರ್ಷ ಜುಲೈ ೧೪ ರಂದು ಫ್ರಾನ್ಸ್‌ನಲ್ಲಿ ‘ಬಾಸ್ಟಿಲ್ ಡೇ ಪರೇಡ್’ ಅನ್ನು ಆಯೋಜಿಸ ಲಾಗುತ್ತದೆ. ಈ ಪರೇಡ್‌ನಲ್ಲಿ ಫ್ರೆಂಚ್ ಸೇನೆಯೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ಒಂದು ಗುಂಪು ಭಾಗವಹಿಸಲಿದೆ. ಈ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.