ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
drhsmohan@gmail.com
ಕೆಲವರಲ್ಲಿ ಹುಟ್ಟಿನಿಂದಲೇ ವಿವಿಧ ಕಾರಣಗಳಿಂದ ಕಾರ್ನಿಯದ ಮಧ್ಯ ಭಾಗ ಬಿಳಿಯ ಬಣ್ಣದ್ದಾಗಿ ಮಾರ್ಪಟ್ಟು ದೃಷ್ಟಿ ಸಂಪೂರ್ಣವಾಗಿ ಇರುವುದಿಲ್ಲ. ಎಲ್ಲಾ ಸಂದರ್ಭಗಳಲ್ಲಿ ಕಾಯಿಲೆಗೆ ಒಳಗಾದ ಕಾರ್ನಿಯವನ್ನು ತೆಗೆದು ದಾನ ಮಾಡಿದ ಕಾರ್ನಿಯವನ್ನು ಜೋಡಿಸಿ ಕಸಿ ಮಾಡಿದರೆ ದೃಷ್ಟಿ ಬರಲು ಸಾಧ್ಯ.
ಮರಣದ ನಂತರವೂ ಜಗತ್ತನ್ನು ಈಕ್ಷಿಸಬಹುದು – ಇದು ಕಣ್ಣನ್ನು ದಾನ ಮಾಡಿದಾಗ ಸತ್ಯವಾಗುತ್ತದೆ. ಇತ್ತೀಚೆಗೆ ಮಡಿದ ಕನ್ನಡದ ಜನಪ್ರಿಯ ನಟ ಪುನೀತ್ ರಾಜಕುಮಾರ್ ಅವರ ಎರಡು ಕಣ್ಣುಗಳು 4 ಜನ ಅಂಧರ ಕಣ್ಣುಗಳಿಗೆ ಬೆಳಕು ತಂದಿವೆ. ಪತ್ರಿಕೆಗಳಲ್ಲಿ ಈ ಸುದ್ದಿ ಓದಿದ ಹಲವರು ಇರುವ ಎರಡು ಕಣ್ಣುಗಳು ಹೇಗೆ 4 ಕಣ್ಣುಗಳಿಗೆ ದೃಷ್ಟಿ ತರುತ್ತವೆ ಎಂದು ಕೇಳಿದ್ದಾರೆ. ಕಣ್ಣಿನ ಕಸಿ ಚಿಕಿತ್ಸೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾದ ಅಗಾಧ ಪ್ರಮಾಣದ ಪ್ರಗತಿಯಿಂದ ಇದು ಸಾಧ್ಯ ವಾಗಿದೆ.
ಪುನೀತ್‌ರ ಕಣ್ಣಿನ ಹೊರಗಿನ ಕಪ್ಪು ಭಾಗ – ಪಾರದರ್ಶಕ ಪಟಲ ಕಾರ್ನಿಯಾವನ್ನು ಹೊರಗಿನ ತೆಳು ಪದರ ಮತ್ತು ಒಳಗಿನ ದಪ್ಪಗಿನ ಎಂಡೋಥೀಲಿಯಂ ಎಂದು 2 ಭಾಗವಾಗಿ ಮಾಡಿ 2 ಕಣ್ಣುಗಳ ಹೊರಗಿನ ತೆಳು ಪದರಗಳನ್ನು ಕಾರ್ನಿಯಾದ ಹೊರಭಾಗದ ಕಾಯಿಲೆ ಕಾರ್ನಿಯಲ್ ಡಿಸ್ಟ್ರೊಪಿ ಮತ್ತು ಕೆರಟೋಕೋನಸ್‌ನ 2 ರೋಗಿಗಳಲ್ಲಿ ಉಪಯೋಗಿಸಲಾಯಿತು. ಈ ರೀತಿಯ ಕಾಯಿಲೆ ಇರುವ ರೋಗಿಗಳಲ್ಲಿ ಕಪ್ಪು ಪಾರದರ್ಶಕ ಪಟಲ ಕಾರ್ನಿಯಾದ ಹೊರ ಭಾಗದಲ್ಲಿ ಮಾತ್ರ ಕಾಯಿಲೆ ಇದ್ದು ಅದರ ದೆಸೆಯಿಂದ ಆತ ಅಂಧನಾಗಿರುತ್ತಾನೆ. ಅಂದರೆ ಆತನ ಕಾರ್ನಿಯಾದ ಒಳಗಿನ ಮುಖ್ಯ ಭಾಗ ಎಂಡೋಥೀಲಿಯಂ ಆರೋಗ್ಯ ವಾಗಿರುತ್ತದೆ. ಹಾಗಾಗಿ ಬೆಳಕಿನ ಕಿರಣಗಳು ಸುಲಭವಾಗಿ ಒಳಸಾಗಬಲ್ಲವು.
ಪುನೀತ್‌ರ ಕಣ್ಣಿನ ಒಳಗಿನ ಭಾಗವನ್ನು ಕಾರ್ನಿಯಾದ ಒಳಗಿನ ಭಾಗ ಎಂಡೋಥೀಲಿಯಂ ವಿವಿಧ ಕಾಯಿಲೆ ಯಿಂದ ಹಾಳಾಗಿ ಅಂಧರಾದ 2 ಬೇರೆ ಬೇರೆ ರೋಗಿಗಳಲ್ಲಿ ಉಪಯೋಗಿಸಲಾಯಿತು. ಬೆಂಗಳೂರಿನ ನಾರಾ ಯಣ ನೇತ್ರಾಲಯದಲ್ಲಿ ಜರುಗಿದ ಈ ಶಸ್ತ್ರಕ್ರಿಯೆಗಳ ಬಗ್ಗೆ ವಿವರ ನೀಡುತ್ತಾ, 2 ಕಣ್ಣುಗಳಿಂದ 4 ಅಂಧರಿಗೆ ದೃಷ್ಟಿ ಬರುವಂತೆ ಮಾಡಿದ ಶಸ್ತ್ರಕ್ರಿಯೆ ಕರ್ನಾಟಕದಲ್ಲಿ ಪ್ರಥಮ ಎಂದು ಡಾ ಭುಜಂಗಶೆಟ್ಟಿಯವರು ನುಡಿದರು. ಈ ರೀತಿಯ ಶಸ್ತ್ರಕ್ರಿಯೆಯನ್ನು ನಡೆಸುವುದು ಸುಲಭವೇನಲ್ಲ. ಇದರಲ್ಲಿ ಕಾರ್ನಿಯಾ ಶಸಕ್ರಿಯೆಯಲ್ಲಿ ವಿಶೇಷ ಪರಿಣತಿ ಪಡೆದ 6 ಕಣ್ಣಿನ ತಜ್ಞ ವೈದ್ಯರುಗಳು 3 ಭಿನ್ನ ಶಸ್ತ್ರಕ್ರಿಯಾ ಗೃಹಗಳಲ್ಲಿ ಸುಮಾರು 8 ತಾಸು (ಗಂಟೆ)ಗಳ ಕಾಲ ಶಸ್ತ್ರಕ್ರಿಯೆ ನಡೆಸಿದರು ಅಂದರೆ ಅದರ ಸಂಕೀರ್ಣತೆಯನ್ನು ಊಹಿಸಿ.
ಹಾಗೆಯೇ ಪುನೀತ್ ರ ಎರಡೂ ಕಣ್ಣುಗಳ ಕಾರ್ನಿಯಾದ ಉಪಯೋಗಿಸದಿರುವ ಹೊರ ಭಾಗವನ್ನು ನಾರಾಯಣ ನೇತ್ರಾಲಯದ ಲ್ಯಾಬೋರೇಟರಿಗೆ ಕಳಿಸ ಲಾಗಿದೆ. ಅದರಲ್ಲಿನ ಆಕರ ಕೋಶಗಳನ್ನು (stem cells) ಆಮ್ಲ ಮತ್ತು ರಾಸಾಯನಿಕಗಳು ಕಣ್ಣಿಗೆ ಬಿದ್ದ ರೋಗಿಗಳಲ್ಲಿ ಹಾಗೂ ಇನ್ನೂ ಹಲವಾರು ಕಣ್ಣಿನ ತೊಂದರೆಗಳಲ್ಲಿ ಭವಿಷ್ಯದಲ್ಲಿ ಉಪಯೋಗಿಸಲಾಗುತ್ತದೆ.
ತಪ್ಪು ಕಲ್ಪನೆಗಳು: ಕಣ್ಣಿನ ಕಸಿ ಶಸಕ್ರಿಯೆಯ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಶವದಿಂದ ತೆಗೆದ ಕಣ್ಣನ್ನು ಅವಶ್ಯಕತೆ ಇರುವ ರೋಗಿಯ ಇಡೀ ಕಣ್ಣಿನ ಬದಲಾಗಿ ಜೋಡಿಸಲಾಗುತ್ತದೆ ಎಂದು ಹೆಚ್ಚಿನವರು ತಿಳಿದಿದ್ದಾರೆ. ಇದು ತಪ್ಪು ತಿಳಿವಳಿಕೆ. ಒಂದು ಬಾರಿ ಯಾವುದೇ ವ್ಯಕ್ತಿಯ ಇಡೀ ಕಣ್ಣಿನ್ನು ತೆಗೆದರೆ ಪುನಃ ಬೇರೆ ಕಣ್ಣನ್ನು ಜೋಡಿಸಲು ಸಾಧ್ಯವಿಲ್ಲ. ಏಕೆಂದರೆ ಹಾಗೆ ಕಣ್ಣನ್ನು ತೆಗೆಯುವಾಗ ನಮ್ಮ ಕಣ್ಣಿಗೆ ದೃಷ್ಟಿ ಕೊಡುವ ದೃಷ್ಟಿ ನರವಾದ ಆಪ್ಟಿಕ್ ನರವಾದ ಆಪ್ಟಿಕ್ ನರವನ್ನು ಕತ್ತರಿಸಲಾಗುತ್ತದೆ. ಈ ಶಸ್ತ್ರಕ್ರಿಯೆಯನ್ನು ಸಾಮಾನ್ಯವಾಗಿ ಕಾರ್ನಿಯಾವಲ್ಲದೆ ಇಡೀ ಕಣ್ಣು ಹಾಳಾಗಿ ಕಣ್ಣು ತುಂಬಾ ನೋವು ಬರುತ್ತಿದ್ದರೆ, ಬೇರೆ ಯಾವುದೇ ಚಿಕಿತ್ಸೆ ಸಾಧ್ಯವಿಲ್ಲ ಎಂದಾಗ ಮಾಡುವ ಅನಿವಾರ್ಯ ಶಸ್ತ್ರಕ್ರಿಯೆ.
ಹಾಗೆ ಇಡೀ ಕಣ್ಣುಗುಡ್ಡೆಯನ್ನೇ ತೆಗೆದಾಗ ಕೃತಕ ಪ್ಲಾಸ್ಟಿಕ್ ಕಣ್ಣು ಅಥವಾ ಇತ್ತೀಚಿನ ಹಲವು ರೀತಿಯ ಕೃತಕ ಕಣ್ಣುಗಳನ್ನು ಕೂರಿಸಲು ಸಾಧ್ಯ ಅಷ್ಟೇ. ಇವ್ಯಾವುದೂ ಆ ವ್ಯಕ್ತಿಗೆ ದೃಷ್ಟಿ ಕೊಡುವುದಿಲ್ಲ. ಆತನಿಗೆ ಕಣ್ಣಿದೆ ಎಂದು ಬೇರೆಯವರಿಗೆ ಗೊತ್ತಾಗುತ್ತದೆ ಅಷ್ಟೇ. ಹಾಗಾಗಿ ದಾನ ಪಡೆದ ಕಣ್ಣಿನ ಹೊರ ಭಾಗ ಕಣ್ಣಿನ ಪಾರದರ್ಶಕ ಪಟಲ ಕಾರ್ನಿಯಾ (ಹಿಂದೆ ಕಪ್ಪು ಬಣ್ಣದ ಐರಿಸ್ ಇರುವುದರಿಂದ ಇದು ಕಪ್ಪಾಗಿ ಕಾಣಿಸುತ್ತದೆ) ವನ್ನು ಮಾತ್ರ ಹೊರತೆಗೆದು, ರೋಗಿಯ ಕಾಯಿಲೆಗೆ ಒಳಗಾದ ಅಥವಾ ಅಪಾರ ದರ್ಶಕ ಕಾರ್ನಿಯಾ ತೆಗೆದು ಅದೇ ಜಾಗದಲ್ಲಿ ಈ ಕಾರ್ನಿಯಾ ಜೋಡಿಸಿ ಹೊಲಿಯಲಾಗುತ್ತದೆ.
ಮತ್ತೆ ಕೆಲವರು ಆಡಿನ ಅಥವಾ ಬೇರೆ ಇತರ ಪ್ರಾಣಿ ಗಳ ಕಣ್ಣನ್ನು ಮಾನವರ ಕಣ್ಣಿನ ಬದಲು ಜೋಡಿಸಲಾಗುತ್ತದೆ ಎಂದು ತಿಳಿದಿದ್ದಾರೆ. ( ಇದರ ಬಗ್ಗೆ ಮುಂದೆ ವಿವರಣೆ ಇದೆ.) ಇದೂ ಕೂಡ ಸತ್ಯವಲ್ಲ. ಈಗ ಈ ತರಹದ ಕಣ್ಣಿನ ಶಸ್ತ್ರಕ್ರಿಯೆಗಳ ಅವಶ್ಯಕತೆ ಏನು ? ಏಕಾಗಿ ಮಾಡಲ್ಪಡುತ್ತವೆ ಎಂಬುದರ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಕಣ್ಣಿನ ಹೊರಗಿನ ಪಾರದರ್ಶಕ ಪಟಲ ಕಾರ್ನಿಯಾ ( ಜನ ಸಾಮಾನ್ಯರ ಭಾಷೆಯಲ್ಲಿ ಕರಿಗುಡ್ಡೆ ಅಥವಾ ಕಪ್ಪು ಗುಡ್ಡೆ) ವಿವಿಧ ಕಾಯಿಲೆಗಳಿಗೆ ಒಳಗಾಗುತ್ತದೆ. ಸಣ್ಣ ಪ್ರಮಾಣದ ಕಾಯಿಲೆಗಳನ್ನು ಆರಂಭದಲ್ಲಿಯೇ ಸೂಕ್ತ ಕಣ್ಣಿನ ವೈದ್ಯರಲ್ಲಿ ಪರೀಕ್ಷಿಸಿ ಚಿಕಿತ್ಸೆ ಕೈಗೊಂಡರೆ ಅದು ತೀವ್ರ ಮಟ್ಟಕ್ಕೆ ಹೋಗುವು ದಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಕಳೆದ ೪೦ ವರ್ಷಗಳಲ್ಲಿ ನಾನು ಗಮನಿಸಿದಂತೆ ಹಳ್ಳಿಯ ರೈತರು, ಕೆಲಸಗಾರರು, ಕೆಲವೊಮ್ಮೆ ನಗರದ ಕೂಲಿ ಕಾರ್ಮಿಕರು ಸಹಿತ ಕಾರ್ನಿಯದಲ್ಲಿ ಗಾಯವಾಗಿ ಅಲ್ಸರ್ ಆದಾಗ ಆರಂಭದಲ್ಲಿ ತೀರಾ ನಿರ್ಲಕ್ಷ್ಯ ಮಾಡಿ ಹತ್ತಿರದ ಲಭ್ಯವಿರುವ ನಾಟಿ ಔಷಧ, ಸಸ್ಯಗಳ ರಸ – ಈ
ರೀತಿಯ ಅವೈಜ್ಞಾನಿಕ ಚಿಕಿತ್ಸೆಗಳನ್ನು ಕೈಗೊಂಡು ಕಾಯಿಲೆ ತೀರಾ ಉಲ್ಬಣಗೊಂಡು ನೋವು ಜಾಸ್ತಿಯಾಗಿ ಮೊದಲಿನ ಅವರ ಚಿಕಿತ್ಸೆಗಳೆ ವಿಫಲವಾದಾಗ ಕಣ್ಣಿನ ವೈದ್ಯರಲ್ಲಿ ಬರುತ್ತಾರೆ.
ಈ ಹಂತದಲ್ಲಿ ಕಣ್ಣಿನ ವೈದ್ಯ ಚಿಕಿತ್ಸೆ ಕೈಗೊಂಡಾಗ ಸಹಿತ ಪೂರ್ಣ ಪ್ರಮಾಣದ ಸಫಲತೆ ಸಿಗದೆ ಕಾರ್ನಿಯ ತನ್ನ ಪಾರದರ್ಶಕ ಗುಣವನ್ನು ಕಳೆದುಕೊಂಡು
ಅಪಾರದರ್ಶಕತೆ ಹೊಂದುತ್ತದೆ. ಬಿಳಿಯ ಬಣ್ಣದಾಗಿ ಹೊರಗಿನಿಂದ ಕಾಣುತ್ತದೆ. ಇದು ಸಂಪೂರ್ಣ ಅಂಧತ್ವ ಹೊಂದಿದ ಕಣ್ಣು ಎನ್ನಬಹುದು. ಈ ತರಹದ ಹಲವಾರು ಕಾಯಿಲೆಗಳು ಕಾರ್ನಿಯವನ್ನು ಅಪಾರದರ್ಶಕತೆ ಉಂಟು ಮಾಡಿ ಅಂಧತ್ವ ತರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ – ಮೇಲೆ ತಿಳಿಸಿದ ಕಾರ್ನಿಯದ ಅಲ್ಸರ್, ಕಾರ್ನಿಯದ ವಿವಿಧ ಸೋಂಕುಗಳು – ವೈರಸ್, ಫಂಗಸ್ , ಬ್ಯಾಕ್ಟೀರಿಯಾಗಳು, ಕೆಲವರಲ್ಲಿ ಹುಟ್ಟಿನಿಂದಲೇ ಇರುವ ಕಾರ್ನಿಯದ ಡಿಸ್ಟ್ರೊಪಿ
ಮತ್ತು ಡಿಜನರೇಷನ್‌ಗಳು, ಕಾರ್ನಿಯದ ಮುಂಭಾಗ ಮಾತ್ರ ಹೊರಚಾಚಿರುವ ಕಾರ್ನಿಯದ ಕಾಯಿಲೆ – ಕೆರಟೋಕೋನಸ್. ಕೆಲವರಲ್ಲಿ ಹುಟ್ಟಿನಿಂದಲೇ ವಿವಿಧ ಕಾರಣಗಳಿಂದ ಕಾರ್ನಿಯದ ಮಧ್ಯ ಭಾಗ ಬಿಳಿಯ ಬಣ್ಣದ್ದಾಗಿ ಮಾರ್ಪಟ್ಟು ದೃಷ್ಟಿ ಸಂಪೂರ್ಣವಾಗಿ ಇರುವುದಿಲ್ಲ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಕಾಯಿಲೆಗೆ ಒಳಗಾದ ಈ ತರಹದ ಕಾರ್ನಿಯವನ್ನು ತೆಗೆದು ದಾನ ಮಾಡಲ್ಪಟ್ಟ ಬೇರೆಯವರ ಕಾರ್ನಿಯವನ್ನು ಜೋಡಿಸಿ ಕಸಿ ಮಾಡಿ ಚಿಕಿತ್ಸೆ ಕೈಗೊಂಡರೆ ಮಾತ್ರ ಕಣ್ಣಿಗೆ ದೃಷ್ಟಿ ಬರಲು ಸಾಧ್ಯ. ಕಾರ್ನಿಯದ ಕಸಿ ಶಸ್ತ್ರಕ್ರಿಯೆಯ ಇತಿಹಾಸ -ನ್ಸಿನ ರೀಸಿಂಜರ್ ಎಂಬಾತ 1824 ರಲ್ಲಿ
ಮೊದಲ ಬಾರಿಗೆ ಕಾರ್ನಿಯ ಕಸಿ ಶಸ್ತ್ರಕ್ರಿಯೆ ಬಗ್ಗೆ ಪ್ರಸ್ತಾಪಿಸಿದ ದಾಖಲೆಗಳಿವೆ. ಈತ ಮೊಲದ ಕಣ್ಣುಗಳ ಮೇಲೆ ಪ್ರಯೋಗ ಪ್ರಯೋಗಗಳನ್ನು ನಡೆಸುತ್ತಿದ್ದ. ೧೮೪೪ ರಲ್ಲಿ ರಿಚರ್ಡ್ ಕಿಸ್ಸಮ್ ಎಂಬಾತ ನ್ಯೂಯಾರ್ಕ್‌ನಲ್ಲಿ ಮಾನವನ ಕಣ್ಣುಗಳ ಮೇಲೆ ಮೊದಲ ಬಾರಿಗೆ ಈ ಶಸ್ತ್ರಕ್ರಿಯೆ ಮಾಡಿದ ದಾಖಲೆಗಳಿವೆ. ಕಿಸ್ಸಮ್ ಕೂಡ ತನ್ನ ಹಿಂದಿನವರಂತೆ ಮೊದಲು ವಿವಿಧ ಪ್ರಾಣಿಗಳ ಅದರಲ್ಲಿಯೂ ಹಂದಿಗಳ ಕಣ್ಣನ್ನು ಕಸಿಗೆ ಉಪಯೋಗಿಸಿದಾಗ ವಿಫಲತೆ ಕಂಡುಕೊಂಡ.
ಅದರ ಮುಂದಿನ ಹಂತವಾಗಿ ಗಾಜಿನಂತಹ ಜಡವಸ್ತುಗಳನ್ನು ಉಪಯೋಗಿಸುವ ಪ್ರಯತ್ನ ನಡೆಯಿತು. ಫಲಿತಾಂಶವೆಂದರೆ ತೀವ್ರ ಪ್ರಮಾಣದ ಸೋಂಕು ಮತ್ತು ಕಸಿ ಸಂಪೂರ್ಣ ಹೊರಚೆಲ್ಲಲ್ಪಡುವುದು. ನಂತರದ ವರ್ಷಗಳಲ್ಲಿ ಬಹಳಷ್ಟು ಪ್ರಯೋಗಗಳು ನಡೆದು ವೈದ್ಯ ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದರು. ಬೇರೆ ಪ್ರಾಣಿಗಳಿಂದ ತೆಗೆದುಕೊಂಡ ಕಸಿ ಉಳಿಯುವುದಿಲ್ಲ. ಹಾಗಾಗಿ ಬೇರೆ ಮನುಷ್ಯರಿಂದ ತೆಗೆದ ಕಾರ್ನಿಯ ಮಾತ್ರ ಉಳಿಯಬಲ್ಲದು ಎಂಬ ಅಂಶ. ಆರಂಭ
ದಲ್ಲಿ ಇಡೀ ಕಾರ್ನಿಯ, ಕಂಜಂಕ್ಟೈವ ಮತ್ತು ಸ್ಲೀರದ ಜೊತೆಗೂಡಿ ಕಸಿ ಮಾಡಲಾಗುತ್ತಿತ್ತು.
ನಂತರದ ಶಸ್ತ್ರಕ್ರಿಯೆ ಎಂದರೆ ಆಂಶಿಕ ಕಾರ್ನಿಯದ ಕಸಿ – Lamellar transplants : 1840 ರಲ್ಲಿ ಮೂಲ್ ರ್ಬಾ ಮತ್ತು 1877 ರಲ್ಲಿ
ರ್ಧ ಇವರುಗಳಿಂದ ಇದು ಮೊದಲು ಪ್ರಸ್ತಾಪಿಸಲ್ಪಟ್ಟರೂ 1888 ರಲ್ಲಿ ವಾನ್ ಹಿಪ್ಪಲ್ ಸೂಕ್ತ ರೀತಿಯ ಟ್ರಿಫೈನ್ ಉಪಯೋಗಿಸಿ ಹೊಸ ತಂತ್ರಜ್ಞಾನವನ್ನು ಪ್ರಚಲಿತಗೊಳಿಸುವವರೆಗೆ ಇದು ಸಫಲವಾಗಿರಲಿಲ್ಲ. ಇದರಲ್ಲಿ ಹಲವು ರೀತಿಯ ಪ್ರಯೋಗಗಳು ನಡೆದು ಕಸಿಯಲ್ಲಿ ದೃಷ್ಟಿಯ ಮಟ್ಟ ನಿರೀಕ್ಷೆಯಷ್ಟು ಉತ್ತಮ ಗೊಳ್ಳದಿದ್ದಾಗ ಅದರ ಮುಂದಿನ ಹಂತ – ಪೂರ್ಣ ಪ್ರಮಾಣದ ಕಸಿಯ ಬಗ್ಗೆ ನೇತ್ರ ವಿಜ್ಞಾನಿಗಳು ಯೋಚಿಸತೊಡಗಿದರು.
ಇದರ ಆರಂಭದ ನೇತಾರ ಎಂದರೆ 1906 ರಲ್ಲಿಯೇ ಆರಂಭಿಸಿದ ಝಮ್‌ರ್ ಎಂಬಾತ. ಆದರೆ ಇದನ್ನು ಸರಳಗೊಳಿಸಿ, ಜನಪ್ರಿಯಗೊಳಿಸಿದ ಕೀರ್ತಿ ಎಲ್ಷನಿಗ್ ( 1920 – 30 ) ನಿಗೆ ಸಲ್ಲುತ್ತದೆ. ಆತ ವಾನ್ ಹಿಪ್ಲ್ ನ ಆಂಶಿಕ ಕಸಿಯ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಿದ. ಬೇರೆ ಕಣ್ಣಿನಿಂದ ತೆಗೆದ ಕಾರ್ನಿಯಕ್ಕೂ ಮತ್ತು ಕಸಿ ಮಾಡಲಾದ ಕಣ್ಣಿಗೂ ನೀರೇ ಹೋಗದಂತೆ ಸರಿಯಾದ ಜೋಡಣೆ ಇರಬೇಕು ಮತ್ತು ಕಾರ್ನಿಯದ ವಿವಿಧ ಪದರುಗಳು ಸರಿಯಾಗಿ ಬೆರೆತು ಮುಂಭಾಗದ ಗೂಡು ( anterior chamber) ಸರಿಯಾಗಿ ಏರ್ಪಡುವಂತಾದರೆ ಕಾರ್ನಿಯದ ಪಾರದರ್ಶಕತೆ ಉಳಿದು ಈ ಶಸ್ತ್ರಕ್ರಿಯೆ ಸಂಪೂರ್ಣ ವಾಗಿ ಸಫಲವಾಗುತ್ತದೆ ಎಂದು ಈತ ತೋರಿಸಿಕೊಟ್ಟ.
ಪುನೀತ್ ಕಣ್ಣುಗಳನ್ನು ಉಪಯೋಗಿಸಿ ಕೈಗೊಂಡ ಶಸ್ತ್ರಕ್ರಿಯೆಗಳ ಬಗ್ಗೆ ಗಮನ ಹರಿಸೋಣ. ಅವರ ಕಾರ್ನಿಯದ ಹೊರಗಿನ ತೆಳು ಪದರಗಳನ್ನು ಉಪಯೋಗಿಸಿ ಮಾಡಿದ ಶಸ್ತ್ರಕ್ರಿಯೆ & Deep Anterior Lamellar Keratoplasty (DALK) ) . ಈ ಶಸ್ತ್ರಕ್ರಿಯೆಯ ತಂತ್ರಜ್ಞಾನ ಕಳೆದ 40 ವರ್ಷಗಳಲ್ಲಿ ವಿವಿಧ ರೀತಿಯ ಅಭಿವೃದ್ಧಿ ಹೊಂದುತ್ತಾ ಬಂದಿದೆ. 1970 ರ ದಶಕದಲ್ಲಿ ಮಲ್ ಬ್ರಾನ್ ಮತ್ತು ಗಾಸೆಟ್ ಎಂಬ ವೈದ್ಯರುಗಳು ಕೆರಟೋಕೋನಸ್ ರೋಗಿಗಳಲ್ಲಿ ಕಾರ್ನಿಯದ ಹೊರಭಾಗದ ತುಂಬಾ ತೆಳುವಾದ ಪದರವನ್ನು ಬೇರ್ಪಡಿಸಿ ಹಲವಾರು ಶಸ್ತ್ರಕ್ರಿಯೆ ನಡೆಸಿದರು.
ಅವರಿಗೆ ಸುಮಾರು 80% ಸಫಲತೆ ದೊರಕಿ ಕಸಿ ಮಾಡಿಸಿಕೊಂಡ ರೋಗಿಗಳಲ್ಲಿ ಶೇ.55 – 60 ದೃಷ್ಟಿ ಲಭಿಸಿತು. ಅಂದರೆ ಎಲ್ಲಾ ರೋಗಿಗಳಲ್ಲಿ ಒಳ
ಮತ್ತು ಹೊರ ಪದರಗಳನ್ನು ನಿಖರವಾಗಿ ಬೇರ್ಪಡಿಸಲು ಸಾಧ್ಯವಾಗದೆ ಕೆಲವು ತೊಡಕುಗಳು ಎದುರಾದವು. 2002 ರಲ್ಲಿ ಅನ್ಸರ್ ಮತ್ತು ಟೀಕ್
ಮನ್ ಎಂಬ ನೇತ್ರ ವೈದ್ಯರುಗಳು ಗಾಳಿಯ ಒಂದು ದೊಡ್ಡ ಗುಳ್ಳೆಯನ್ನು ಹೊರಗಿನ ಮತ್ತು ಒಳಗಿನ ಕಾರ್ನಿಯದ ಪದರುಗಳನ್ನು ಬೇರ್ಪಡಿಸಲು Big Bubble Pneumodissection ಎಂಬ ಹೊಸ ತಾಂತ್ರಿಕತೆ ಅಭಿವೃದ್ಧಿ ಪಡಿಸಿದರು.
ಈ ತಾಂತ್ರಿಕತೆಯಲ್ಲೂ ಕೆಲವು ತೊಂದರೆ ಎದುರಾದರೂ ಜಗತ್ತಿನಾದ್ಯಂತ ಹಲವಾರು ಕಣ್ಣಿನ ಸರ್ಜನರುಗಳು ಫಲಪ್ರದವಾಗಿ ಇದನ್ನು ನಡೆಸಿ ಸಫಲತೆ ಕಂಡುಕೊಂಡಿದ್ದಾರೆ. ಹಾಗಾಗಿ ಕೆರಟೋಕೋನಸ್ ಮತ್ತು ಕಾರ್ನಿಯದಲ್ಲಿ ತೀವ್ರವಾದ ಗಾಯ ಅಥವಾ ಕಲೆ ಇದ್ದಾಗ ಈ DALK ಶಸ್ತ್ರಕ್ರಿಯೆ ಈಗಲೂ ಬಹಳಷ್ಟು ಉಪಯೋಗವಾಗುತ್ತಿದೆ. ಆದರೆ ಈ ಆಪರೇಷನ್‌ಗೆ ಬಹಳಷ್ಟು ಸುದೀರ್ಘವಾದ ಸಮಯ ಬೇಕಾಗುತ್ತದೆ. ಪುನೀತ್ ಕಾರ್ನಿಯದ ಒಳಪದರಗಳನ್ನು DSEK ಎಂಬ ಶಸ್ತ್ರಕ್ರಿಯೆ ಮಾಡಿ ಕಾರ್ನಿಯದ ಒಳಭಾಗದಲ್ಲಿ ತೊಂದರೆ ಇದ್ದ 2 ಬೇರೆ ಬೇರೆ ರೋಗಿಗಳಲ್ಲಿ ಜೋಡಿಸಲಾಯಿತು. ಇದರ ಹಿನ್ನೆಲೆಯನ್ನು ಕೆದಕಿದರೆ 2004 ರಲ್ಲಿ ಗೆರಿಟ್ ಮೆಲೆಸ್ ಎಂಬ ವೈದ್ಯರು ಕಾರ್ನಿಯದ ಒಳಪದರಗಳಾದ ಡೆಸ್ಮೆಟ್ ಮೆಂಬ್ರೇನ್ ಮತ್ತು ಎಂಡೋಥೀಲಿಯಂಗಳನ್ನು ಡೆಸ್ಮೆಟೋರೆಕ್ಸಿಸ್
ತಾಂತ್ರಿಕತೆ ಉಪಯೋಗಿಸಿ ಅವುಗಳನ್ನು ಹೊರ ತೆಗೆದು ದಾನ ಮಾಡಲ್ಪಟ್ಟ ಕಣ್ಣಿನ ಅದೇ ಪದರಗಳನ್ನು ಅಲ್ಲಿ ಜೋಡಿಸಿದರು.
ಆ ಶಸ್ತ್ರಕ್ರಿಯೆಯನ್ನು ಈಗ Descemet Stripping Endothelial Keratoplasty ಎನ್ನುತ್ತಾರೆ. ಆರಂಭದಲ್ಲಿ ಈ ಪದರಗಳನ್ನು ಬೇರ್ಪಡಿಸಲು ಸೂಕ್ಷ್ಮ ಬ್ಲೇಡ್ ಉಪಯೋಗಿಸಿ ಕಣ್ಣಿನ ಸರ್ಜನ್ ರೇ ಮಾಡಬೇಕಿತ್ತು. ಆದರೆ ಮಾರ್ಕ್ ಗೊರೊವೊ ಅವರು ಮೈಕ್ರೋ ಕೆರಟೋಮ್ ಉಪಕರಣ ಉಪಯೋಗಿಸಿ ಪದರ ಗಳನ್ನು ಕರಾರುವಾಕ್ಕಾಗಿ ಮತ್ತು ನಿಖರತೆಯಿಂದ ಮಾಡಲು ಅನುವು ಮಾಡಿಕೊಟ್ಟರು. ಆನಂತರ ಅದನ್ನು ಈಗ Descemet Stripping Automated
Endothelial Keratoplasty ( DSAEK) ಎಂದು ಕರೆಯುತ್ತಾರೆ. ಇದರಿಂದ ಶೇ.80 – 85 ರಷ್ಟು ದೃಷ್ಟಿ ಲಭ್ಯವಾದ್ದರಿಂದ ಇದು ಬಹಳ ಜನಪ್ರಿಯ ಗೊಂಡಿತು.
2006 ರಲ್ಲಿ ಮೆಲೆಸ್ DMEK ಎಂಬ ಮತ್ತೊಂದು ಹೊಸ ತಾಂತ್ರಿಕತೆ ಉಪಯೋಗಿಸಿ ಮೊದಲಿನ ಶಸ್ತ್ರಕ್ರಿಯೆಗಳಿಗಿಂತ ಹೆಚ್ಚು ಬೇಗ ದೃಷ್ಟಿ ಲಭ್ಯವಾಗುವಂತೆ ಮಾಡಿ ಅದನ್ನು ಮತ್ತಷ್ಟು ಜನಪ್ರಿಯಗೊಳಿಸಿದರು. ಮುಂದಿನ ವರ್ಷಗಳಲ್ಲಿ ತಾಂತ್ರಿಕತೆ ಇನ್ನೂ ಮುಂದುವರಿಯಬಹುದು.