Monday, 12th May 2025

ಅನರ್ಹರ ರಕ್ಷಣೆ ನಮ್ಮ ಜವಾಬ್ದಾರಿಯಲ್ಲ

ಹುಬ್ಬಳ್ಳಿಿ: ‘ಕೆಲವು ಶಾಸಕರ ರಾಜೀನಾಮೆಯಿಂದ ಬಿಜೆಪಿ ಸರಕಾರ ಅಸ್ತಿಿತ್ವಕ್ಕೆೆ ಬಂದಿದೆ ಎಂಬುದು ಸತ್ಯ. ಆದರೆ, ಅವರ ರಕ್ಷಣೆಯ ಹೊಣೆ ನಮ್ಮದಲ್ಲ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ವೈಯಕ್ತಿಿಕ ಕಾರಣಗಳಿಂದಾಗಿ ಶಾಸಕರು ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಿ ಈಗ ಅನರ್ಹರಾಗಿದ್ದಾರೆ. ಅದರಿಂದ ಬಿಜೆಪಿಗೆ ಸರಕಾರ ನಡೆಸಲು ಅನುಕೂಲವಾಯಿತು. ಹಾಗಂತ ಅವರನ್ನು ರಕ್ಷಿಸುವ ಜವಾಬ್ದಾಾರಿ ನಮ್ಮದಲ್ಲ. ನಮ್ಮ ಮತ್ತು ಅವರ ನಡುವೆ ಸಾಕಷ್ಟು ರಾಜಕೀಯ ಅಂತರವಿದೆ’ ಎಂದರು. ‘ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅನರ್ಹರು ತಮ್ಮನ್ನು ತಾವು ಕಾಪಾಡಿಕೊಳ್ಳುವಷ್ಟು ಶಕ್ತರಿದ್ದಾರೆ’ ಎಂದು ಅಭಿಪ್ರಾಾಯಪಟ್ಟರು.
ಅನರ್ಹ ಶಾಸಕರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ್ದಾರೆ. ನ.4 ಅಥವಾ 5ರಂದು ತೀರ್ಪು ಬರುವ ಸಾಧ್ಯತೆಯಿದೆ. ಮುಂದೆ ಅವರು ಬಿಜೆಪಿ ಸೇರಿದಲ್ಲಿ ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೇ ಬೇಡವೇ ಎಂದು ಹೈಕಮಾಂಡ್ ನಿರ್ಧರಿಸಲಿದೆ ಎಂದರು.

ಬಿಜೆಪಿ ಸರಕಾರವನ್ನು ವಿರೋಧಿಸಲು ಯಾವುದೇ ವಿಷಯವಿಲ್ಲದ ಕಾರಣ ಕಾಂಗ್ರೆೆಸ್ ಸುಳ್ಳು ಆಡಿಯೊ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿಿದೆ. ಬಿಎಸ್‌ವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಿಡುಗಡೆ ಮಾಡಿದವರು ಯಾರು? ಅದನ್ನು ಸೃಷ್ಟಿಿಸಿದ ಬ್ರಹ್ಮ ಯಾರು? ಎಂಬುದನ್ನು ಕಾಂಗ್ರೆೆಸ್ ಸ್ಪಷ್ಟಪಡಿಸಬೇಕು. ಬಿಎಸ್‌ವೈ ಅವರ ಹಾಗೂ ಬಿಜೆಪಿ ಸರಕಾರದ ವಿರುದ್ಧ ಅಪಪ್ರಚಾರ ಮಾಡಲು ಸಿದ್ದರಾಮಯ್ಯ ಕುತಂತ್ರ ನಡೆಸಿದ್ದಾರೆ.
– ಜಗದೀಶ ಶೆಟ್ಟರ್
ಸಚಿವ

Leave a Reply

Your email address will not be published. Required fields are marked *