Sunday, 11th May 2025

ವಾಣಿಜ್ಯ ಸಿಲಿಂಡರ್ ದರ 99.75 ರೂಪಾಯಿ ಇಳಿಕೆ…

CommercialGas

ನವದೆಹಲಿ: ದರ ಏರಿಕೆ ಬಿಸಿಯ ಮಧ್ಯೆ ವಾಣಿಜ್ಯ ಬಳಕೆ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​​ ಬೆಲೆಯನ್ನು ಇಳಿಕೆ ಮಾಡ ಲಾಗಿದೆ.

ಆಗಸ್ಟ್​ 1 ರಿಂದಲೇ ಜಾರಿಗೆ ಬರುವಂತೆ 19 ಕೆಜಿ ಗಾತ್ರದ ಸಿಲಿಂಡರ್ ದರದಲ್ಲಿ 99.75 ರೂಪಾಯಿಯನ್ನು ತೈಲ ಮಾರುಕಟ್ಟೆ ಕಂಪನಿಗಳು ಕಡಿತ ಮಾಡಿವೆ.

100 ಕಡಿತದ ಬಳಿಕ 1780 ರೂಪಾಯಿ ಇದ್ದ ಸಿಲಿಂಡರ್​ ಬೆಲೆ 1680 ಕ್ಕೆ ಸಿಗಲಿದೆ. ದೆಹಲಿಯಲ್ಲಿ 99.75 ರೂ. ಇಳಿಕೆ ಮಾಡಲಾಗಿದ್ದರೆ, ಇತರ ಮಹಾನಗರಗಳಲ್ಲಿ 93 ರೂಪಾಯಿಯಷ್ಟು ಕಡಿತ ಮಾಡಲಾಗಿದೆ.

ದೇಶಾದ್ಯಂತ 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ 99.75 ರೂಪಾಯಿ ಇಳಿಸಲಾಗಿದೆ. ಇತರ ಮಹಾನಗರಗಳಲ್ಲಿ 93 ರೂಪಾಯಿಗಳ ಕಡಿತವನ್ನು ಮಾಡಲಾಗಿದೆ. ಈಗ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ 1680 ರೂಪಾಯಿಗೆ ಲಭ್ಯವಿರುತ್ತದೆ.

ಇದುವರೆಗೆ, ಅದು 1780 ರೂಪಾಯಿ ದರ ಇತ್ತು. ದರ ಇಳಿಕೆ ಆದೇಶ ಇಂದಿನಿಂದಲೇ (ಆಗಸ್ಟ್ 1) ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತನ್ನ ವೆಬ್‌ಸೈಟ್‌ನಲ್ಲಿ ಹೊಸ ದರಗಳನ್ನು ನವೀಕರಿಸಿದ ಬಗ್ಗೆ ಮಾಹಿತಿ ನೀಡಿದೆ.

ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ 1895.50 ರೂ. ಇದ್ದು, ಈಗ 1802.50 ರೂ.ಗೆ ಸಿಗಲಿದೆ. ಮುಂಬೈನಲ್ಲಿ 1733.50 ರೂ.ಗೆ ಬದಲಾಗಿ 1640.50 ರೂ.ಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ 1945 ರೂ. ಬದಲಿಗೆ 1852.50 ರೂ. (ರೂ. 92.50 ಇಳಿಕೆ) ಆಗಿದೆ. ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 93 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ಈ ವರ್ಷ ಜುಲೈ 4 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು.

14.2 ಕೆಜಿ ಗಾತ್ರದ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಾಗಿಲ್ಲ. ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಈ ವರ್ಷದ ಮಾರ್ಚ್ 1 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು.

Leave a Reply

Your email address will not be published. Required fields are marked *