Friday, 16th May 2025

ಮಿಠಾಯಿ ತಿಂದು 4 ಮಕ್ಕಳ ಸಾವು

ಕುಶಿನಗರ: ಮನೆಯ ಬಾಗಿಲಲ್ಲಿ ಎಸೆದ ಮಿಠಾಯಿ ತಿಂದು 4 ಮಕ್ಕಳು ಮೃತ ಪಟ್ಟಿದ್ದಾರೆ.

ಉತ್ತರ ಪ್ರದೇಶದ ಕುಶಿನಗರದ ಕಸಾಯ ಪೊಲೀಸ್ ಠಾಣಾ ವ್ಯಾಪ್ತಿಯ ಸಿಸಾಯಿ ಗ್ರಾಮದ ಲಾತೂರ್ ತೋಲಾ ಎಂಬಲ್ಲಿ ನಡೆದಿದೆ.

ಅಪರಿಚಿತ ದುಷ್ಕರ್ಮಿಗಳು ಮನೆ ಬಾಗಿಲಲ್ಲಿ ಎಸೆದಿದ್ದ ಮಿಠಾಯಿ ತಿಂದು ಘಟನೆ ನಡೆದಿರುವುದು ಇಡೀ ಪ್ರದೇಶದಲ್ಲಿ ಸಂಚಲನ ಮೂಡಿತ್ತು. ಈ ವೇಳೆ ಕರೆ ಮಾಡಿದರೂ ಆಂಬ್ಯುಲೆನ್ಸ್ ಬರದ ಕಾರಣ ಜನರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಆಂಬ್ಯುಲೆನ್ಸ್ ಸ್ಥಳಕ್ಕೆ ಬಾರದೆ ಮನೆಯವರು ಬೈಕ್ ನಲ್ಲಿ ನಾಲ್ವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಮಕ್ಕಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತಪಟ್ಟ ನಾಲ್ವರು ಮಕ್ಕಳಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.

ಘಟನೆಯ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ಮಕ್ಕಳ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.