Tuesday, 13th May 2025

ಕರೋನಾ ಬ್ರೇಕಿಂಗ್: 11 ಸಾವಿರದ 850 ಪ್ರಕರಣ ದೃಢ

covid

ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾ ಶನಿವಾರ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 11 ಸಾವಿರದ 850 ಮಂದಿಯಲ್ಲಿ ಪ್ರಕರಣಗಳು ದೃಢಪಟ್ಟಿದ್ದು, 555 ಮಂದಿ ಮೃತಪಟ್ಟಿದ್ದಾರೆ.

ಸಕ್ರಿಯ ಸೋಂಕಿತರ ಸಂಖ್ಯೆ 1 ಲಕ್ಷದ 36 ಸಾವಿರದ 308 ಇದ್ದು, ಕಳೆದ 274 ದಿನ ಗಳಲ್ಲಿಯೇ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಜನರಿಗೆ ನೀಡುವ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 111.40 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ 19 ರಾಜ್ಯಗಳ ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಇಲಾಖೆ 8 ಸಾವಿರದ 453.92 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ.

Leave a Reply

Your email address will not be published. Required fields are marked *