Monday, 12th May 2025

ಸೋಂಕು ಲಕ್ಷಣ ಇಲ್ಲದವರಿಗೆ ಅಂಬ್ಯುಲೆನ್ಸ್ ಅಗತ್ಯವಿಲ್ಲ: ಸುಧಾಕರ್‌

ಬೆಂಗಳೂರು:
ಕರೋನಾ ಸೋಂಕು ಲಕ್ಷಣ ಇಲ್ಲದವರಿಗೆ ಅಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಅಥವಾ ಕರೋನಾ ಕೇರ್ ಸೆಂಟರ್‌ಗೆ ತೆರಳಬೇಕಾದ ಅಗತ್ಯ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಅಂಬ್ಯುಲೆನ್ಸ್‌ ಕೊರತೆ ಇದೆ ಎಂಬ ಕುರಿತಾದ ಸುದ್ದಿಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಸೋಂಕು ಲಕ್ಷಣಗಳನ್ನು ಹೊಂದಿದವರಿಗೆ ಮಾತ್ರ ಅಂಬ್ಯುಲೆನ್ಸ್‌ ಅಗತ್ಯ ಇದೆ. ಉಳಿದವರು ಇತರ ವಾಹನಗಳಲ್ಲಿ ಬಂದು ತಪಾಸಣೆ ನಡೆಸಬಹುದು ಎಂದರು.
ಹೀಗಿದ್ದರೂ ಬೆಂಗಳೂರಿಲ್ಲಿ 500 ವಾಹನಗಳ ವ್ಯವಸ್ಥೆ ಕಲ್ಪಿಸಲಾಗುವುದು. ಸೋಂಕು ಪಾಸಿಟಿವ್ ಇದ್ದವರಿಗೆ ನೇರವಾಗಿ ಬಿಬಿಎಂಪಿ ಫೋನ್ ಮಾಡಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಲಿದೆ. ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ಕರೋನಾ ಸೋಂಕು ನಿರ್ವವಣೆಯನ್ನು ಮಾಡಲಾಗುತ್ತಿದೆ ಎಂದರು.
 ಈ ನಿಟ್ಟಿನಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಬುಧವಾರದ ತುರ್ತು ಸಭೆಯಲ್ಲಿ ಚರ್ಚೆ ನಡೆದಿದೆ. ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದ್ದೇವೆ. ಎಷ್ಟು ಹಾಸಿಗೆಯ ಲಭ್ಯತೆ ಇದೆ, ಮೂಲಭೂತ ಸೌಕರ್ಯ ಏನಿದೆ ಎಂಬ ಕುರಿತಾದ ವಿವರಣೆಯನ್ನು ನೀಡಿದ್ದೇವೆ ಎಂದರು. ಸದ್ಯ ಪೂರ್ಣ ಪ್ರಮಾಣದಲ್ಲಿ 2000 ಹಾಸಿಗೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದೆ. ಪ್ರತಿ ದಿನ 200 300 ಜನರು ದಾಖಲಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರದ ತಂಡದ ಅಧಿಕಾರಿಗಳ ಸಲಹೆ ಮೇರೆಗೆ ರಾಜ್ಯದಲ್ಲಿ ಕರೋನಾ ಟೆಸ್ಟ್ ಹೆಚ್ಚಳ ಮಾಡಲಾಗುತ್ತಿದೆ.ಕಂಟೈನ್‌ಮೆಂಟ್ ನಲ್ಲಿಯೂ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ವೈದ್ಯರ ಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು

Leave a Reply

Your email address will not be published. Required fields are marked *