Monday, 12th May 2025

ಎಪಿಎಂಸಿ ಮಾರುಕಟ್ಟೆೆ ಶುಲ್ಕ ಶೇ 0.35ಕ್ಕೆೆ ನಿಗದಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಾದ  ಸಿ.ಆರ್.ಜನಾರ್ಧನರವನ್ನೊಳಗೊಂಡ ನಿಯೋಗವು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರದಂದು ಭೇಟಿ ಮಾಡಿ ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇ 0.35ಕ್ಕೆ ನಿಗದಿಗೊಳಿಸಿದಕ್ಕಾಗಿ ಕರ್ನಾಟಕದಾದ್ಯಂತ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಸನ್ಮಾನಿಸಲಾಯಿತು.

ರಾಜ್ಯದಲ್ಲಿರುವ ಎಪಿಎಂಸಿ ವರ್ತಕರ ಬಹುವರ್ಷಗಳ ಬೇಡಿಕೆಯಾದ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಇಳಿಸಲು ಎಫ್.ಕೆ.ಸಿ.ಸಿ.ಐ. ಮಾಡಿದ್ದ ಮನವಿಯನ್ನು ಸರಕಾರವು ಪುರಸ್ಕರಿಸಿದ್ದು, ಇದರಿಂದ ರೈತರಿಗಷ್ಟೇ ಅಲ್ಲದೇ, ಎಪಿಎಂಸಿ ವರ್ತಕರು ಹಾಗೂ ಎಪಿಎಂಸಿ ಪ್ರಾಾಂಗಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತದೃಷ್ಠಿಯನ್ನು ಕಾಪಾಡುವಲ್ಲಿ ಈ ನಿರ್ಧಾರ ಸೂಕ್ತವಾಗಿದೆ ಎಂದು ಎಫ್.ಕೆ.ಸಿ.ಸಿ.ಐನ ಅಧ್ಯಕ್ಷರಾದ ಸಿ.ಆರ್. ಜನಾರ್ಧನ್ ತಿಳಿಸಿದರು.

 

Leave a Reply

Your email address will not be published. Required fields are marked *