Saturday, 10th May 2025

ವೈದ್ಯ ಸೇನಾನಿಗಳಿಗೊಂದು ನಮನ

ಅಭಿಮತ

ಮಾಲತಿ ಜೋಶಿ

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ತಂದೆ, ತಾಯಿ, ಬಂಧು – ಮಿತ್ರರು ಹೇಗೆ ಮುಖ್ಯವೋ ಹಾಗೆಯೇ ನಮ್ಮ ಜೀವಿತಾವಽಯ ಉದ್ದಕ್ಕೂ ವೈದ್ಯರ ಪಾತ್ರ ಅಷ್ಟೇ ಪ್ರಮುಖ. ತಮ್ಮ ವೃತ್ತಿ ಜೀವನದ ಬಹು ಸಮಯವನ್ನು ರೋಗಿಗಳ ಆರೈಕೆಯಲ್ಲಿಯೇ ಕಳೆಯುತ್ತಾರೆ ಎಂದರೆ ಆ ವೃತ್ತಿಗೆ ಇರುವ ಮಹತ್ವವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲೇಬೇಕು.

ವೈದ್ಯ ಎಂದರೆ ಕೇವಲ ರೋಗಕ್ಕೆ ತಕ್ಕ ಔಷಧಗಳನ್ನು ನೀಡಿ ಚಿಕಿತ್ಸೆ ಮಾಡುವವರಲ್ಲ, ಒಬ್ಬ ರೋಗಿಯ ಮಾನಸಿಕ, ಬೌದ್ಧಿಕ ಮನಸ್ಥಿತಿಯನ್ನು ಅರ್ಥೈಸಿಕೊಂಡು ಅವನ ನೋವುಗಳಿಗೆ ಪ್ರತಿಕ್ರಿಯಿಸುವ ನಿಜವಾದ ಸ್ನೇಹಿತ. ತಾಯಿಯಂತೆ ಮಕ್ಕಳ, ವೃದ್ಧರ, ಯುವಕರ ಸಮಸ್ಯಗಳಿಗೆ ಸ್ಪಂದಿಸುತ್ತಾರೆ. ಒಬ್ಬ ವೈದ್ಯ / ವೈದ್ಯೆ ತಾಯಿಯಾಗಿ, ಸ್ನೇಹಿತರಾಗಿ, ಪ್ರೀತಿ, ಮಮತೆಯಿಂದ ರೋಗಿಗಳ ಬಳಿ ಶಾಂತ ಸ್ವಭಾವದಿಂದ ವರ್ತಿಸುತ್ತಾರೆ. ಅವರ ಕಾಯಿಲೆಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸಿ ರೋಗಿಗೆ ಆತ್ಮಸ್ಥೆರ್ಯ ತುಂಬಿ ಜೀವನೋತ್ಸಾಹ ಉಕ್ಕಿಸುವ ವ್ಯಕ್ತಿ.

ಪ್ರತಿ ವೈದ್ಯರಿಗೆ ಪ್ರತಿಯೊಬ್ಬ ರೋಗಿಯ ಕಾಯಿಲೆ ಸವಾಲಿದ್ದಂತೆ. ಕಳೆದ ಹಿಂದಿನ ಇದೇ ಮಾರ್ಚ್ ತಿಂಗಳಲ್ಲಿ ಪ್ರಾರಂಭವಾದ ಕರೋನಾ ವೈರಸ್ ‌ನಿಂದಾಗಿ ವೈದ್ಯರು ತಮ್ಮ ಇಡೀ ಸಮಯವನ್ನು ವೈರಸ್ ತಗುಲಿದ ಜನರಿಗೆ ಚಿಕಿತ್ಸೆ ನೀಡುವಲ್ಲಿ ಹಗಲು ರಾತ್ರಿಯನ್ನದೇ ತಮ್ಮ ಇಡೀ ಸಮಯವನ್ನು ರೋಗಿಗಳ ಶುಶ್ರೂಷೆಯಲ್ಲಿ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕೇಂದ್ರ ಸರಕಾರವೇಬಿಡುಗಡೆ ಮಾಡಿದ ವರದಿ ಅನ್ವಯ ದೇಶದಲ್ಲಿ ಸುಮಾರು ೪೦೦ ವೈದ್ಯರು ಕರೋನಾ ಸೋಂಕಿಗೆ ಜೀವ ತೆತ್ತಿದ್ದಾರೆ.

ವೈದ್ಯರು ಸದಾ ಸಮಾಜದ ಉನ್ನತ ಬೆಳವಣಿಗೆಗೆ, ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಕರೋನಾ ವೈರಸ್‌ನ ಬಗ್ಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೂ ಸಾರ್ವಜನಿಕರಲ್ಲಿ ಇನ್ನೂ ವೈರಸ್‌ನ ಆತಂಕ ಮನೆ ಮಾಡಿದೆ. ಈ ಅವಧಿಯಲ್ಲಿ ಸಾಕಷ್ಟು ವೈದ್ಯರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ತಾಯಿ ಶಿಶುವಿಗೆ ಜನ್ಮ ನೀಡಬೇಕಾದರೆ ಅವಳಿಗೆ ವೈದ್ಯರ ಸಹಾಯವಿಲ್ಲದೆ ಪ್ರಸವವಾಗಲೂ ಸಾಧ್ಯವಿಲ್ಲ ಎನ್ನುವಂಥ ವಾತಾವರಣ ಇಂದು ನಿರ್ಮಾಣವಾಗಿದೆ.

ಜನನದ ನಂತರ ಮಗು ಮತ್ತು ಬಾಣಂತಿಯ ಆರೈಕೆ ವೈದ್ಯರ ಮಾರ್ಗದರ್ಶನದಲ್ಲಿಯೇ ನಡೆಯಬೇಕು. ಮಾನಸಿಕ ಅಸ್ವಸ್ಥ (ಬುದ್ಧಿಮಾಂಧ್ಯ) ಮಕ್ಕಳನ್ನು
ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವೈದ್ಯರ ಶ್ರಮ ಹೇಳತೀರದು. ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಕ್ಕೆ ಒಳಗಾದ ಯುವ ಜನತೆಯನ್ನು ವ್ಯಸನದಿಂದ ಹೊರತರಲು ಅವರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳಿಗೆ ಹಂತ – ಹಂತವಾಗಿ ಪರಿಹಾರ ದೊರೆಯುವಂತೆ ಮಾಡಿ ಅವರ ಮುಂದಿನ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.

‘ವೈದ್ಯೋ ನಾರಾಯಣೋ ಹರಿಃ’ ಎಂಬ ವಾಕ್ಯದಂತೆ ದೇವರು ಎಲ್ಲಾ ಕಡೆಯಲ್ಲೂ ನೆಲೆಸಲು ಸಾಧ್ಯವಿಲ್ಲವೆಂದೇ ವೈದ್ಯರನ್ನು ಸೃಷ್ಟಿಸಿದ್ದಾನೆ. ವೈದ್ಯರು ಜನ ಸಾಮಾನ್ಯರ ಜೀವನದಲ್ಲಿ ದೇವರ ಪಾತ್ರ ನಿರ್ವಹಿಸುತ್ತಾರೆ, ಜನರು ತಮ್ಮ ಜೀವನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳ ಬಗ್ಗೆ
ತಕ್ಷಣವೇ ವೈದ್ಯರ ಬಳಿಯೇ ಹೋಗುತ್ತಾರೆ. ಅದಕ್ಕೆ ಪರಿಹಾರವನ್ನು ಕೂಡ ವೈದ್ಯರಿಂದಲೇ ಪಡೆದುಕೊಳ್ಳುತ್ತಾರೆ.

ಕರೋನಾ ಸಂದರ್ಭದಲ್ಲಿ ಸಾಕಷ್ಟು ವೈದ್ಯರು, ದಾದಿಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕುಟುಂಬವನ್ನು ಲೆಕ್ಕಿಸದೇ ಜನಸಾಮಾನ್ಯರ ಜೀವದ ಅಳಿವು – ಉಳಿವಿಗಾಗಿ ಅವರ ಆರೈಕೆಯಲ್ಲಿಯೇ ತಮ್ಮ ಶಕ್ತಿ ಮೀರಿ ಹೋರಾಟ ನಡೆಸು ತ್ತಿದ್ದಾರೆ. ಇಂದಿನವರೆಗೂ ಈ ವೈರಸ್ ಜನಾಂಗ, ಜಾತಿ, ಮತ ಎಂಬ ಯಾವುದೇ ಭೇದವಿಲ್ಲದೇ ಎಲ್ಲರನ್ನೂ ತನ್ನ ಅಟ್ಟಹಾಸ್ಕಕೆ ಬಲಿಪಡೆಯುತ್ತಿ ದೆ. ಈ ಕರೋನಾ ವೈರಸ್‌ನ ಅಟ್ಟಹಾಸದೊಂದಿಗೆ ಯುದ್ಧ ಮಾಡಿ ಜನರ ಆರೈಕೆಯೇ ನಮ್ಮ ಗುರಿ ಎಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ದಿಟ್ಟ ಹೆಜ್ಜೆ ಸಫಲವಾ ಗಬೇಕಾದರೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ. ಇಂಥ ಸವಿಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಭಾರತ ದೇಶದ ವೀರಯೋಧ ವೈದ್ಯರಿಗೊಂದು ನಮನ.

Leave a Reply

Your email address will not be published. Required fields are marked *