ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಕಳೆದೊಂದು ದಶಕದ ಆಚೆಗೆ ಅಕ್ರಮ ಗಣಿಗಾರಿಕೆಯೆಂಬುವುದು ರಾಜ್ಯ ರಾಜಕಾರಣವನ್ನೇ ತಲ್ಲಣಗೊಳಿಸಿರುವುದಲ್ಲದೆ, ರಾಷ್ಟ್ರಮಟ್ಟದಲ್ಲೂ ಸಾಕಷ್ಟು ಸಂಚಲನ ಮೂಡಿಸಿತ್ತು. ಈ ವಿಚಾರವು ರಾಜ್ಯದ ಶಕ್ತಿ ಸೌಧದಲ್ಲೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದಲ್ಲದೆ, ಪ್ರಭಾವಿ ರಾಜಕಾರಣಿಗಳು ಕೂಡ ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ ಜೈಲುವಾಸ ಅನುಭವಿಸಿ ಹೊರಬಂದಿರುವುದು ಹಳೆ ಕಥೆ.
ಈ ಬಾರಿ ಸದ್ದು ಮಾಡುತ್ತಿರುವುದು ಅಕ್ರಮ ಕಲ್ಲು ಗಣಿಗಾರಿಕೆಯ ವಿಚಾರ. ಅಕ್ರಮ ಕಲ್ಲು ಗಣಿಗಾರಿಕೆಯ ತೀವ್ರತೆ ಎಷ್ಟರ ಮಟ್ಟಿಗೆ ವ್ಯಾಪಿಸಿದೆಯೆಂದರೆ ಕಳೆದ ವರ್ಷ ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದರ ಅಣತಿ ದೂರದಲ್ಲಿ ಅಕ್ರಮವಾಗಿ ಸೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಸಿರುವುದರಿಂದ ಇದರ ತೀವ್ರತೆಗೆ ಶಾಲೆಯೇ ಅದುರಿ ಹೋಗಿ ವಿದ್ಯಾರ್ಥಿಗಳು ಆತಂಕದ ಪಾಠ ಆಲಿಸಬೇಕಾದ ಸಂದಿಗ್ಧ ಸ್ಥಿತಿ ಬಂದೊದಗಿತ್ತು.
ಗಂಭೀರತೆ ಅರಿತ ಮುಖ್ಯೋಪಾಧ್ಯಾಯರು ಸಂಬಂಧಪಟ್ಟವರಿಗೆ ದೂರು ಸಲ್ಲಿಸಿದ ಬೆನ್ನ ದಂಧೆಯಲ್ಲಿ ತೊಡಗಿದ್ದ ಪ್ರಭಾವಿ ವ್ಯಕ್ತಿಗಳಿಂದ ಮತ್ತು ಗೂಂಡಾಗಳಿಂದ ಜೀವಬೆದರಿಕೆ ಎದುರಿಸಬೇಕಾಯಿತು. ದಕ್ಷಿಣ ಕನ್ನಡ ಜಿಯ ಅತಿ ಎತ್ತರದ
ಗುಡ್ಡ ಪ್ರದೇಶದ ಮೇಲಿರುವ ಇತಿಹಾಸ ಪ್ರಸಿದ್ಧ ಭೂಕೈಲಾಸನಾಥ ಪ್ರತೀತಿಯ ಕಾರೀಂಜೇಶ್ವರ ದೇವಾಲಯದ ಬಳಿ ಜಿಲೆಟಿನ್ ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ಇದರ ಸೊಟಕ್ಕೆ ದೇವಾಲಯದ ಸುತ್ತಮುತ್ತ ಬಿರುಕು ಉಂಟಾಗಿ ದೇವಾಲಯದ ಸ್ಥಿತಿ ಆತಂಕದಲ್ಲಿತ್ತು.
ಮಂಡ್ಯ ಜಿಯ ಮದ್ದೂರು, ಚಂದಳ್ಳಿ, ಕೋಳಿಗುಡ್ಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುವ ಈ ಕಲ್ಲು ಗಣಿಗಾರಿಕೆಯಿಂದ ಸುಂದರ ಇತಿಹಾಸ ಪ್ರಸಿದ್ಧ ಬೆಟ್ಟಗುಡ್ಡಗಳು ಬಗೆದು ನೆಲಸಮಗೊಂಡಿರುವುದು ಒಂದೆಡೆಯಾದರೆ ನದಿಗಳು ಮಲೀನಗೊಳ್ಳುವುದು, ಸೋಟಕ್ಕೆ ರಾಸಾಯನಿಕ ವಸ್ತುಗಳ ಬಳಕೆಯಿಂದ ಧೂಳು ಮುಂತಾದ ಕಾರಣಕ್ಕೆ ಕೃಷಿ ಚಟುವಟಿಕೆಗಳಿಗೆ ಹಾನಿಯಾಗುತ್ತಿರುವುದು ಕಂಡು ಬರುತ್ತಿದೆ.
ದಾವಣಗೆರೆ ಜಿಯಲ್ಲೂ ಪ್ರಭಾವಿ ರಾಜಕಾರಣಿಯೋರ್ವರ ಪುತ್ರ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದು, ಇವುಗಳ ಪೈಕಿ ಗುತ್ತಿಗೆ ಪಡೆದುಕೊಂಡಿದ್ದರೂ ಫಹಣಿಯಲ್ಲಿ ನಮೂದಾಗದಿರುವುದು ಅಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ದಂಧೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಕೆಲ ಜಿಡಳಿತ, ಅರಣ್ಯ, ಕಂದಾಯ, ಗಣಿ ಇಲಾಖೆಗಳ
ನೆರಳಿನಡಿಯ ಸಾಗಿ ಇಲಾಖೆಗಳು ಕಣ್ಣಿದ್ದೂ ಕುರುಡಾಗುತ್ತಿವೆ.
ಪ್ರಕೃತಿದತ್ತವಾಗಿ ಸಿಗುವ ಸಂಪನ್ಮೂಲಗಳಾದ ಕಾಡು ಭೂಮಿ, ನದಿ,ಕೆರೆ ಇವುಗಳನ್ನು ಒತ್ತುವರಿ ಮಾಡಿಕೊಂಡು ರಾಜಕಾರಣಿಗಳು ಇದ್ಯಾವುದನ್ನೂ ಬಿಡುತ್ತಿಲ್ಲ. ದೂರದ ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹೊರ ಜಿಯ ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಸ್ಫೋಟ ನಡೆಸುವಂತಹ ಅಪಾಯಕಾರಿ ಕಾರ್ಯಗಳಿಗೆ ಬಳಸಿಕೊಂಡು ತಮ್ಮ ಆಯುಷ್ಯವನ್ನು ಇಲ್ಲೇ ಕಳೆದುಕೊಳ್ಳುವ ಕಾರ್ಮಿಕರು ಜೀವನ ಭದ್ರತೆಯಿಲ್ಲದೆ ಸೋಟಕ್ಕೆ ಸಾವನ್ನಪ್ಪಿದ ನೂರಾರು ನಿದರ್ಶನಗಳಿವೆ.
ಇದಕ್ಕೆ ಪೂರಕವೆಂಬಂತೆ ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ ಹುಣಸೋಡು ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ನಡೆದ ದುರಂತವೇ ಸಾಕ್ಷಿ. ಈಗಾಗಲೇ ಹಲವೆಡೆ ನಡೆಯುತ್ತಿರುವ ಕಾನೂನು ಬಾಹಿರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ ಮತ್ತು ಎಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೋ ಅದನ್ನು ತಡೆಯಲು ಬಿಗಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಾದ ಹೊಣೆ ರಾಜ್ಯ ಸರಕಾರದ ಮೇಲಿದೆ. ಇಂತಹ ಚಟುವಟಿಕೆಯ ಹೆಸರಿನಲ್ಲಿ ನಡೆಯುವ ಗೂಂಡಾಗಿರಿ, ರೌಡಿಸಂ ಚಟುವಟಿಕೆಗಳಿಗೂ ಸರಕಾರ ಕಡಿವಾಣ ಹಾಕುವುದರೊಂದಿಗೆ ಅಪರಾಧ ಹಿನ್ನೆಯುಳ್ಳವರಿಗೆ ಇಂತಹ ಚಟುವಟಿಕೆಗಳಿಗೆ ಪರವಾನಗಿ ನೀಡದೆ, ಪ್ರಕೃತಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟು ಮಾಡುವ, ಪ್ರಾಣ ಹಾನಿ ಉಂಟು ಮಾಡುವ ಸ್ಫೋಟಕ ಬಳಕೆಗೆ ಸರಕಾರ ಅಗತ್ಯ ಕಡಿವಾಣ ಹಾಕಬೇಕಾಗಿದೆ.