Monday, 12th May 2025

ಜೀವರಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲು ಅಸಾಧ್ಯ

ಅಭಿಮತ

ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ

ನಮ್ಮ ದೈನಂದಿನ ಜೀವನದಲ್ಲಿ ರಸ್ತೆ ಅಪಘಾತ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿ, ಹೆರಿಗೆ ಸಂದರ್ಭದಲ್ಲಿ ತಾಯಿ ಅಥವಾ ಮಗುವಿನ ಆರೋಗ್ಯದಲ್ಲಿ ಏರುಪೇರು ಕಂಡಾಗ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಬೇಕಾದ ತುರ್ತು ಪರಿಸ್ಥಿತಿಯಲ್ಲಿ, ಮಾರಣಾಂತಿಕ ಹಯಿಂದ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿನ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬೇಕಾದ ಸಂದರ್ಭದಲ್ಲಿ ನಮಗೆ ಥಟ್ಟನೆ ಹೊಳೆಯುವ ಒಂದು ವ್ಯವಸ್ಥೆ ಅಥವಾ ವ್ಯಕ್ತಿಯಿದ್ದರೆ ಅದು ಆಂಬ್ಯುಲೆನ್ಸ್ ಮತ್ತು ಅದರ ಚಾಲಕ.

ಅದೊಂದು ದಿನ ಶಿವಮೊಗ್ಗ ಜಿಯ ಬಡಕೂಲಿ ಕಾರ್ಮಿಕಳಾದ ಕೆ.ಸುಜಾತ ಎಂಬುವರು ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ಜೀವನ್ಮರಣ ಸ್ಥಿತಿಯಲ್ಲಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ
ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಬೇಕೆಂದಾಗ ಶಿವಮೊಗ್ಗ ಮತ್ತು ಉಡುಪಿ ಜಿ ಪೊಲೀಸರ ಸಹಕಾರದಿಂದ ಝೀರೋ ಟ್ರಾಫಿಕ್‌ನಲ್ಲಿ ಸಮಯಕ್ಕೆ ಸರಿಯಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಕರ್ತವ್ಯ ಪ್ರಜ್ಞೆ ಮೆರೆದವರಲ್ಲಿ ಆಂಬ್ಯುಲೆನ್ಸ್ ಚಾಲಕರು ಕೂಡ ಒಬ್ಬರು. ಇದೇ ರೀತಿ ಮತ್ತೊಂದು ಘಟನೆ.

ಅದು 40 ದಿನದ ಮಗು. ಸಾವಿರದಲ್ಲಿ ಒಂದು ಮಗುವಿಗೆ ಬರಬಹುದಾದಂಥ ಹೃದಯ ಸಮಸ್ಯೆ ಆ ಮಗುವಿಗಿತ್ತು. ತುರ್ತು ಹೃದಯ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕಿತ್ತು. ಆ ಸಂದರ್ಭ ಆಂಬ್ಯುಲೆನ್ಸ್ ಸ್ಟಿಯ ರಿಂಗ್ ಹಿಡಿದು ಕೂತವರು ಮಂಗಳೂರು ಕೆಎಂಸಿ ಆಸ್ಪತ್ರೆ ಆಂಬ್ಯುಲೆನ್ಸ್ ಚಾಲಕ ಬಳಂಜದ ಹನೀ-. ಮಂಗಳೂರಿನಿಂದ ಬೆಂಗಳೂರಿನ 370 ಕಿ.ಮೀ ಗಳನ್ನು 6 ಗಂಟೆಗಳಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಕ್ರಮಿಸಿ ಜಯದೇವ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದರು.

ತೀರಾ ಇತ್ತೀಚೆಗೆ ಶ್ವಾಸಕೋಶ ಸಮಸ್ಯೆಯಿಂದ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದ ತೀರಾ ಬಡಕುಟುಂಬದ
ಯುವತಿ ಸುಹಾನಳನ್ನು ಉನ್ನತ ಚಿಕಿತ್ಸೆಗಾಗಿ ಬೆಂಗಳೂರು ವೈದೇಹಿ ಆಸ್ಪತ್ರೆಗೆ ದಾಖಲಿಸಬೇಕೆಂದಾಗ ಇದೇ ಹನೀಫ್‌ ಬಳಂಜ 4.05 ಗಂಟೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದರು.ಇದೇ ರೀತಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ್ದ ಭಕ್ತ ರೊಬ್ಬರಿಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದ ಸಂದರ್ಭ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ಸೂಕ್ತ ಸೌಲಭ್ಯವಿಲ್ಲದ ಕಾರಣ ವೈದ್ಯರು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಬೇಕೆಂದಾಗ ಸ್ಥಳೀಯರಿಗೆ ತಕ್ಷಣವೇ ಹೊಳೆದಿದ್ದು ಸುಳ್ಯ ಪಂಜದ ಪಂಚಶ್ರೀ ಆಂಬ್ಯುಲೆನ್ಸ್ ಮತ್ತು ಸ್ಥಳೀಯ ಚಾಲಕರಾದ ಪದ್ಮಕುಮಾರ್ ಮತ್ತು ನಿತಿನ್ ಭಟ್.

ಸವಾಲಾಗಿ ಸ್ವೀಕರಿಸಿದ ಇಬ್ಬರು ಚಾಲಕರು ಬದಲಿಯಾಗಿ ರಾತ್ರಿ ಎಂಟು ಗಂಟೆಗೆ ಸುಬ್ರಹ್ಮಣ್ಯದಿಂದ ಹೊರಟು ರಾತ್ರಿ 12.25ಕ್ಕೆ
ಬೆಂಗಳೂರಿಗೆ ಯಾವುದೇ ಶೂನ್ಯ ಟ್ರಾಫಿಕ್ ಇಲ್ಲದೆ ಕೇವಲ ೪ ಗಂಟೆಯಲ್ಲಿ ರೋಗಿಯನ್ನು ತಲುಪಿಸಿದ್ದರು.ಆಂಬ್ಯುಲೆನ್ಸ್
ಕಾರ್ಯಕರ್ತರ ಕರ್ತವ್ಯವೆಂದರೆ ಅದೊಂದು ರೀತಿಯ ಸವಾಲಿನದ್ದು. ರಾತ್ರಿ ಹಗಲೆನ್ನದೆ ಪ್ರಾಣದ ಹಂಗು ತೊರೆದು ರೋಗಿ ಯನ್ನು ನಿರ್ದಿಷ್ಟ ಜಾಗಕ್ಕೆ ತಲುಪಿಸುವುದೊಂದೆ ಗುರಿ. ಛಿದ್ರಗೊಂಡ ಶರೀರ, ರಕ್ತದ ಮಡುವಿನಲ್ಲಿ ಬಿದ್ದ ದೇಹವನ್ನು ಹೊತ್ತೊ ಯ್ಯುವ ದಾರಿ ಮಧ್ಯೆ ಹಲವಾರು ಜೀವಗಳ ಉಸಿರು ನಿಂತು ಪ್ರಾಣ ಬಿಟ್ಟ ನಿದರ್ಶನಗಳಿವೆ.

ಈ ಹಿಂದಿನ ಬಿಜೆಪಿ ಸರಕಾರವಿzಗ ಜಾರಿಗೆ ಬಂದ ೧೦೮ ಆಂಬ್ಯುಲೆನ್ಸ್ ರಕ್ಷಾಕವಚ ಸೇವೆಗಳು ಸಾಕಷ್ಟು ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರುತ್ತಿವೆ. ಆದರೆ ಇದರ ಚಾಲಕರಿಗೆ ಕೆಲವೊಂದು ಬಾರಿ ಮಾಸಿಕ ವೇತನಗಳಲ್ಲಿ ವ್ಯತ್ಯಯ, ಆಂಬ್ಯುಲೆನ್ಸ್ ದುರಸ್ತಿಗೆ ಸರಕಾರಗಳ ನಿರ್ಲಕ್ಷ್ಯ, ಕೆಲವೊಂದು ೧೦೮ ಆಂಬ್ಯುಲೆನ್ಸ್ ಚಾಲಕರೇ ತುರ್ತು ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರಲ್ಲಿ ಹಣಕ್ಕಾಗಿ ಪೀಡಿಸುವ, ರೋಗಿಗಳನ್ನು ದಾಖಲಿಸಲು ನಿರ್ಲಕ್ಷ್ಯ ತೋರುವ ಘಟನೆಗಳು ಮರುಕಳಿಸುತ್ತಿವೆ.

ಆದರೆ ಮೇಲೆ ತಿಳಿಸಿದ ಆಂಬ್ಯುಲೆನ್ಸ್ ಚಾಲಕರ ಮಾನವೀಯ ಮುಖಗಳ ಬಗ್ಗೆ ಸಾರ್ವಜನಿಕ ವಲಯ, ಸಾಮಾಜಿಕ ಜಾಲತಾಣ ಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗಿದೆ. ಸಾರ್ವಜನಿಕರಾದ ನಾವುಗಳು ರೋಗಿಯನ್ನು ಹೊತ್ತೊಯ್ಯುವ ವಾಹನದ ಹಿಂದೆ ಬೆಂಗಾ ವಲು ವಾಹನಗಳಂತೆ ಶಿಳ್ಳೆ, ಕೇಕೆ ಹಾಕಿ ಸಿನಿಮೀಯ ಶೈಲಿಯಲ್ಲಿ ವರ್ತಿಸುವುದು, ರೋಡ್ ಶೋ ನಡೆಸುವುದು ಜೀವರಕ್ಷಕರಿಗೆ ಮಾಡುವ ಅವಮಾನವೇ ಸರಿ. ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ತುರ್ತು ಸಂದರ್ಭದಲ್ಲಿ ಮಿಡಿಯುವ ಇಂತಹ ಜೀವ ರಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲು ಅಸಾಧ್ಯ.

Leave a Reply

Your email address will not be published. Required fields are marked *