ತಾಜ್ ಮಹಲ್‌ಗಿಂತಲೂ ಪಟೇಲರ ಏಕತಾ ಪ್ರತಿಮೆಯ ಆದಾಯ ಹೆಚ್ಚಳವಾಗಿರುವುದನ್ನು ಬಹಳ ಖುಷಿಯಾಯಿತು. ಪಟೇಲರು ಮುಂದಾಲೋಚಿಸಿ ಈ ದೇಶ ಹರಿದು ಹಂಚಿ ಹೋಗುವುದನ್ನು ತಪ್ಪಿಿಸಲು ಶ್ರಮಿಸಿದವರು. ‘ಉಕ್ಕಿಿನ ಮನುಷ್ಯ’ ಎಂಬ ಅಭಿದಾನ ಅವರಿಗಲ್ಲದೇ ಇನ್ಯಾಾರಿಗೆ ಕೊಡಲು ಸಾಧ್ಯ? ಪಟೇಲರ ಪ್ರತಿಮೆ ಲೋಕಾರ್ಪಣೆಗೊಂಡಾಗ ಕೆಲವರು ಇದರಿಂದೇನು ಬಡವರ ಹೊಟ್ಟೆೆ ತುಂಬುತ್ತದೆಯಾ? ಇಂಥದ್ದಕ್ಕೆೆಲ್ಲಾ ಯಾಕೆ ಸರಕಾರದ ಹಣ ಸುರಿದಿದ್ದಾರೆ ಎಂದಿದ್ದರು. ಈಗ ಈ ಪ್ರತಿಮೆಯಿಂದ ಎಷ್ಟು ಲಾಭವಾಗುತ್ತಿಿದೆ ಎಂದು ಯಾರಾದರೂ ಚರ್ಚಿಸುತ್ತಿಿದ್ದಾರಾ? ಪಟೇಲರಿಗೆ ತಕ್ಕ ಗೌರವ ಕೊಡುವುದು ಹಾಗೂ ಸರಕಾರಕ್ಕೆೆ ಲಾಭವನ್ನೂ ತಂದುಕೊಳ್ಳುವುದು ಎರಡನ್ನೂ ಈ ಯೋಜನೆಯ ಅನುಷ್ಠಾಾನದ ಮೂಲಕ ಸರಕಾರ ಸಾಧಿಸಿದೆ. ಸರಕಾರ ಈ ತಾಣದ ನಿರ್ವಹಣೆಯನ್ನು ಈಗಿನ ರೀತಿಯಲ್ಲೇ ಮಾಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು.
ಹಲವಾಗಲ ಶಂಭು, ರಾಣಿಬೆನ್ನೂರು