Sunday, 11th May 2025

ನೋವಿಗೆ ಕ್ಷಮೆ ಕೋರುತ್ತೇನೆ…

ನನ್ನ ಪರಿಚಯದವರಿಗೆ ಮತ್ತು ನನ್ನ ತಾಯಿ ತೀರಿಕೊಂಡಾಗ ಪುರೋಹಿತರು ನನ್ನ ಕುಟುಂಬದೊಂದಿಗೆ ನಡೆದುಕೊಂಡ ವ್ಯವಹಾರಿಕ ರೀತಿಯಿಂದ ಮನನೊಂದು ಲೇಖನ ಬರೆದಿದ್ದು, ಹಿಮದಿನ ತಿಂಗಳಲ್ಲಿ ಅಕ್ಟೋೋಬರ್ 22, ರಂದು ವಿಶ್ವ ವಾಣಿಯಲ್ಲಿ ಪ್ರಕಟವಾಗಿತ್ತು. ನಂತರ ನಡೆದ ಘಟನೆಗಳು ದುದೃಷ್ಟಕರ. ನಾನು ಅವಲೋಕಿಸಿದಾಗ ಪೌರೋಹಿತ್ಯದ ಉಗಮ ಮತ್ತು ವಿಕಾಸ, ನಡೆದುಬಂದ ದಾರಿ, ಅದರಲ್ಲಿನ ಸಮಸ್ಯೆೆಗಳು ಹಾಗೂ ಆ ಸಮಸ್ಯೆೆಗಳನ್ನು ಪರಿಹರಿಸಲು ಗಣ್ಯರು, ವೈದಿಕ ವಿದ್ವಾಾಂಸರು, ಯತಿಗಳು ಕಾಲಕಾಲಕ್ಕೆೆ ತೆಗೆದುಕೊಂಡ ಕ್ರಮಗಳು ನಡೆಸಿದ ಚರ್ಚೆ, ಈ ಎಲ್ಲದರ ವಿಷಯ ಅರಿವಾಯಿತು. ಆ ಕುರಿತು ಅಧ್ಯಯನ ಮಾಡಿರದ ನಾನು ಸಮಾಜದ ಎಲ್ಲ ಸ್ತರಗಳಲ್ಲಿ ಇರುವ ಭ್ರಷ್ಟತೆ ಇಲ್ಲಿ ಮೂಲವನ್ನು ಮಸುಕಾಗಿಸಿದೆ ಎಂಬುದು ತಿಳಿಯಿತು. ನೇತ್ಯಾಾತ್ಮಕ ವಿಚಾರಗಳನ್ನು ನನ್ನ ತಿಳುವಳಿಕೆಗೆ ಮೀರಿದ್ದನ್ನು ಲೇಖನದಲ್ಲಿ ಬರೆದಿದ್ದೆೆ.
ಇದರಿಂದ ಸಮುದಾಯದಲ್ಲಿ ಪ್ರಾಾಮಾಣಿಕವಾಗಿ ದುಡಿಯುತ್ತಿಿರುವವರಿಗೂ ಮತ್ತು ದ್ವೇಷಕಾರಲು ಕಾರಣ ಹುಡುಕುವ ಸಮಾಜಘಾತಕರಿಗೂ ಇಂಬು ಕೊಟ್ಟಂತಾಗಿದೆ. ನನ್ನ ತಪ್ಪುು ಈಗ ನನಗೆ ಅರಿವಾಗಿದೆ. ಇದಕ್ಕಾಾಗಿ ನಾನು ಸಮುದಾಯದ ಬೇಷರತ್ ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ತಪ್ಪುು ನಡೆಯದಂತೆ ಎಚ್ಚರ ವಹಿಸುತ್ತೇನೆ. ಹಾಗೆಯೇ ಇತಿಹಾಸವನ್ನು ಕೀರ್ತಿ ಶೇಷ ವಿದ್ವನ್ಮಣಿಗಳ ಕಾರ್ಯವನ್ನು ಅರಿತು ವಿನಮ್ರವಾಗಿ ಎಲ್ಲರ ಒಳಿತಿಗೆ ಶ್ರಮಿಸುತ್ತೇನೆಂದು ಪ್ರಮಾಣ ಮಾಡುತ್ತೇನೆ. ಸಜ್ಜನರ ಕ್ಷಮೆ ಇರಲಿ.
ಶ್ರೀ ಸಾಯಿ ದತ್ತ ರಘುನಾಥ ಗುರೂಜಿ

Leave a Reply

Your email address will not be published. Required fields are marked *