ರಾಜ್ಯ ಸರಕಾರವು ರಾಜ್ಯದಲ್ಲಿ ರೈತರು ಬಿತ್ತಿರುವ ಬೆಳೆಗಳ ಕುರಿತು ನಿಖರ ಮಾಹಿತಿ ಕಲೆ ಹಾಕಲು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಹೊಸ ಆ್ಯಪ್‌ವೊಂದನ್ನು ಈಗಾಗಲೇ ಅಭಿವೃದ್ಧಿಪಡಿಸಿವೆ.
ತರು ಈ ಆ್ಯಪ್ ಬಳಸುತ್ತಿದ್ದಾರೆ. ಈ ಆ್ಯಪ್ ಮೂಲಕ ನಡೆಸಲಾಗುತ್ತಿರುವ ಸಮೀಕ್ಷೆ ಹೇಗಿದೆ ಎಂದರೆ, ರೈತರು ತಮ್ಮ ಹೊಲಗಳಲ್ಲಿ ತಾವು ಬೆಳೆಯುತ್ತಿರುವುದು ಏನನ್ನು ಎಂಬುದರ ಪೂರ್ಣ ಮಾಹಿತಿಯನ್ನು ಇಂಟರ್ನೆಟ್ ಸಂಪರ್ಕ ಲಭ್ಯವಿರುವ ಮೊಬೈಲ್ ಮೂಲಕ ತಿಳಿಸಬಹುದು.
ರೈತರು ತಮ್ಮ ಹೊಲಕ್ಕೆ ಮೊಬೈಲ್ ಒಯ್ದು, ಆ್ಯಪ್‌ನಲ್ಲಿ ಕೇಳಲಾಗುವ ಸರ್ವೆ ನಂಬರ್, ಸಂಪೂರ್ಣ ವಿವರ ನೀಡುವುದು ಅತ್ಯಗತ್ಯ. ಹೊಲದ ಮಾಹಿತಿ ತಿಳಿಯಲು ಅವಧಿ ಕೂಡ ಮುಗಿಯುತ್ತಾ ಬಂದರೂ ಸಮೀಕ್ಷೆ ಯಲ್ಲಿ ಶೇ. 33ರಷ್ಟು ಮಾತ್ರವೇ ಪ್ರಗತಿಯನ್ನು ಸಾಧಿಸಲಾಗಿದೆ. ಹೊಲದಲ್ಲಿ ಏನು ಬೆಳೆಯಲಾಗುತ್ತಿದೆ ಎನ್ನುವುದು ರೈತರ ಪಹಣಿಗಳಲ್ಲಿ ಸರಿಯಾಗಿ ನಮೂದಾಗದಿದ್ದರೆ ಪ್ರವಾಹ, ಬರಗಾಲದ ಸಂದರ್ಭಗಳಲ್ಲಿ ಪರಿಹಾರವಾಗಲೀ, ಬೆಳೆ ವಿಮೆಯಾಗಲೀ, ಅವರಿಗೆ ಸಿಗುವುದು ವಂಚನೆಯಾಗಬಹುದು. ಅದರಲ್ಲೂ ಹಲವು ರೈತರಿಗೆ ಮೊಬೈಲ್ ಆ್ಯಪ್‌ಗಳನ್ನು ಬಳಸುವಷ್ಟು ತಾಂತ್ರಿಕ ಅರಿವು ಇರುವುದಿಲ್ಲ ಮತ್ತು ಹಳ್ಳಿಗಳಲ್ಲಿ
ಗುಣ ಮಟ್ಟದ ಇಂಟರ್ನೆಟ್ ಸಂಪರ್ಕ ಸಿಗದಿರುವುದು ಇನ್ನೊಂದು ದೋಷ.
ಬೆಳೆ ಸಮೀಕ್ಷೆಯ ಆ್ಯಪ್ ತುಸು ಸಂಕೀರ್ಣವಾಗಿದ್ದು, ರೈತರು ಸುಲಭವಾಗಿ ಬಳಸಲು ಅನುವಾಗುವಂತೆ ಅದನ್ನು ಇನ್ನಷ್ಟು ಸರಳಗೊಳಿಸಬಹುದಿತ್ತು ಎಂಬ ಮಾತೂ ಸಹ ಜನರಿಂದ ಕೇಳಿಬರುತ್ತಿದೆ. ಇಲಾಖೆ ಸಿಬ್ಬಂದಿಯು ತಪ್ಪು ಮಾಹಿತಿಯನ್ನು ನೀಡುವುದಕ್ಕೆ ಕಡಿವಾಣ ಹಾಕಲು ಬೆಳೆ ಸಮೀಕ್ಷೆಯಲ್ಲಿ ಸ್ವತಃ ರೈತರನ್ನು ಒಳಗೊಳ್ಳುವ ಯತ್ನವೇನೋ ಒಳ್ಳೆಯ ನಡೆ. ಆದರೆ, ಅದರಲ್ಲಿನ ಲೋಪಗಳನ್ನು ಮೊದಲು ಸರಿಪಡಿಸಬೇಕು. ಜಿಪಿಎಸ್ ಆಧಾರದ ಮೇಲೆ ಈ ಸಮೀಕ್ಷೆ ನಡೆಯುವುದರಿಂದ ಹೋಬಳಿ, ಗ್ರಾಮ, ಸರ್ವೇ ಸಂಖ್ಯೆೆ, ರೈತನ ಹೆಸರು ಇತ್ಯಾದಿ ವಿವರಗಳು ಮೊದಲೇ ಆ್ಯಪ್‌ನಲ್ಲಿ ದಾಖಲಾಗಿರುವಂಥ ವ್ಯವಸ್ಥೆ ರೂಪಿಸಬೇಕು. ಆಗ ರೈತರಿಗೆ ಆಗುವ ಹೆಚ್ಚಿನ ತೂಂದರೆ ಆಗುವುದು ಮತ್ತು ಅಧಿಕಾರಿಗಳಿಂದ ಲೋಪವಾಗು ವುದು ಸಹ ತಪ್ಪುತ್ತದೆ.
ಆಸ್ತಿಗಳ ವಿವರ ಒದಗಿಸಲು ಈ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ ‘ದಿಶಾಂಕ್’ ಆ್ಯಪ್‌ನಲ್ಲಿ ಅಂತಹ
ಸೌಲಭ್ಯವಿತ್ತು. ಅದರಂತೆಯೆ ಈ ಆ್ಯಪ್ ಅಭಿವೃದ್ಧಿಪಡಿಸಬೇಕಿದೆ. ಜತೆಗೆ ಹಳ್ಳಿಗಳಲ್ಲಿ ಇಂಟರ್ನೆಟ್
ದೋಷದಿಂದ ವಿವರ ನೀಡಲು ಆಗುವುದಿಲ್ಲ. ಇದರಿಂದ ಹಳ್ಳಿಿಯಲ್ಲಿರುವ ರೈತರು ಈ ಆ್ಯಪ್ ಬಳಕೆಗೆ
ಸಾಧ್ಯವಾಗುವುದಿಲ್ಲ.
ಈ ಹಿಂದೆ ಅಭಿವೃದ್ಧಿಪಡಿಸಲಾಗಿದ್ದ ದಿಶಾಂಕ್ ಆ್ಯಪ್‌ನಲ್ಲಿ ರೈತರ ಹೂಲದ ವಿವರ ಸಂಪೂರ್ಣವಾಗಿ ದೊರೆಯುತ್ತಿತ್ತು. ಅಂತಹ ಸರಳವಾಗಿರುವ ರೈತರಿಗೆ ಅನುಕೂಲವಾಗುವಂತೆ ಆ್ಯಪ್‌ನ್ನು ಹೊಸದಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಗಮನಹರಿಸಬೇಕು. ಆಗ ಮಾತ್ರ ಯಾವ ರೈತನು ಸಹ ಸಮೀಕ್ಷೆಯಿಂದ ದೂರವಿರುವುದಿಲ್ಲ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸರಕಾರ ಸರಳವಾಗಿ ಆ್ಯಪ್ ಅಭಿವೃದ್ಧಿಪಡಿಸಲಿ.
-ಬಿ.ಆರ್. ಸಂತೋಷ ಜಾಬೀನ್ ಸುಲೇಪೇಟ