Sunday, 11th May 2025

ಮದ್ಯಪಾನ ಸಂಪೂರ್ಣ ನಿಷೇಧಿಸಿ

ಜೀವನವನ್ನೇ ನರಕ ಮಾಡುವ ಮದ್ಯವ್ಯಸನಕ್ಕೆೆ ಬಹಳ ಜನರು ಬಲಿಯಾಗಿದ್ದಾರೆ. ಅತಿಯಾದ ಮದ್ಯಪಾನದಿಂದ ಜನರಿಗೆ ಅನೇಕ ಆರೋಗ್ಯ ಸಮಸ್ಯೆೆಗಳು ಎದುರಾಗುತ್ತವೆ. ಇಂದು ನಮ್ಮ ರಾಜ್ಯದಲ್ಲಿ ಮದ್ಯಕ್ಕೆ ದಾಸರಾಗಿರುವ ವ್ಯಕ್ತಿಗಳ ಕುಟುಂಬಗಳು ಬೀದಿ ಪಾಲಾಗಿರುವುದನ್ನು ಕಾಣಬಹುದು. ಈ ಚಟಕ್ಕೆ ಬಲಿಯಾದ ವ್ಯಕ್ತಿಗಳ ಕುಟುಂಬಗಳು ಪ್ರತಿನಿತ್ಯದ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿವೆ. ಕುಡಿದು ಮನೆಗೆ ಬಂದು ಹೆಂಡತಿ ಮಕ್ಕಳನ್ನು ಹಿಂಸಿಸುವ ಸನ್ನಿವೇಶವನ್ನು ದಿನನಿತ್ಯ ನೋಡುತ್ತಿದ್ದೇವೆ. ಕುಡಿದ ಅಮಲಿನಲ್ಲಿ ಅತ್ಯಾಾಚಾರ, ಕೊಲೆ ಪ್ರಕರಣಗಳೂ ನಡೆದಿವೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಊರಿನಲ್ಲಿ ಮದ್ಯ ಮಾರಾಟದ ಅಂಗಡಿಗಳಿಗೆ ಹೆಚ್ಚುತ್ತಿದ್ದು, ಸರಕಾರ ಮದ್ಯದ ಅಂಗಡಿಗಳಿಗೆ ಪರವನಾಗಿಯನ್ನು ನೀಡುವುದನ್ನು ಕಡಿಮೆ ಮಾಡಬೇಕು ಹಾಗೆಯೇ ಕಾಲಕ್ರಮೇಣ ಸಂಪೂರ್ಣ ನಿಷೇಧಿಸಬೇಕು.
– ಅಮರೇಶ್ ಬೆಂಗಳೂರು

Leave a Reply

Your email address will not be published. Required fields are marked *