Sunday, 11th May 2025

ದುರ್ಭಿಕ್ಷದಲ್ಲಿ ಅಧಿಕ ಮಾಸ

ತನ್ನಿಮಿತ್ತ

ಎನ್.ಶಂಕರ‌ ರಾವ್

ನಾವು ಚಿಕ್ಕವರಿದ್ದಾಗ ನಮ್ಮಮ್ಮ ಈ ಗಾದೆಯನ್ನು ಹೇಳ್ತಾ ಇದ್ದರು ದುರ್ಭಿಕ್ಷದಲ್ಲಿ ಅಧಿಕ ಮಾಸವೇ; ಯಾರಾರು ನೆಂಟ್ರು ತಿಂಗಳ ಕೊನೆಯಲ್ಲಿ ಮನೆಗ ಬಂದಾಗ. ಈಗ ದೇಶದಲ್ಲೆಲ್ಲಾ ಕರೋನಾ ಟೈಮ್‌ನಲ್ಲಿ ಜನರು ಇದೇ ಮಾತನ್ನು ಹೇಳಬಹುದು.

ಈ ಶಾರ್ವರಿ ನಾಮ ಸಂವತ್ಸರದಲ್ಲಿ ಅಧಿಕ ಆಶ್ವಯುಜ ಮಾಸ ಬಂದಿದೆ. ಈ ಅಧಿಕ ಮಾಸದ ವೈಜ್ಞಾನಿಕ/ ಅಧ್ಯಾತ್ಮಿಕ ಚಿಂತನೆ ಮಾಡೋಣ. ಯಾವ ಮಾಸದಲ್ಲಿ ಸಂಕ್ರಮಣ ಆಗುವುದಿಲ್ಲವೋ ಅಂದರೆ ಸೂರ್ಯನು ಒಂದೇ ರಾಶಿಯಲ್ಲಿದ್ದರೆ ಆ ಮಾಸವನ್ನು ಅಧಿಕ ಮಾಸ ಎನ್ನುವರು. ಈ ತಿಂಗಳಲ್ಲಿ ಕನ್ಯಾ ಸಂಕ್ರಮಣ ಸೆಪ್ಟೆೆಂಬರ್ 16ರಂದು ಮತ್ತು ಅಕ್ಟೋಬರ್ ತಿಂಗಳ 17 ರಂದು
ತುಲಾ ಸಂಕ್ರಮಣ. ಇವೆರಡರ ನಡುವೆ ಎರಡು ಅಮಾವಾಸ್ಯೆ ಒಳಗೆ ಆಶ್ವಯುಜ ಮಾಸ ಬರುವುದರಿಂದ ಅದನ್ನು ಅಧಿಕ ಮಾಸ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಅಧಿಕಮಾಸವು 32 ತಿಂಗಳು 16 ದಿನ ಕಳೆದ ನಂತರ ಅಂದರೆ ಮೂರು ವರ್ಷಕ್ಕೊಮ್ಮೆ ಬರುವುದು.

ಅಧಿಕಮಾಸವನ್ನು ಮಲಮಾಸ ಪುರುಷೋತ್ತಮ ಮಾಸ ಎಂದು ಕೂಡ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಸೌರಮಾನ ಮತ್ತು ಚಾಂದ್ರಮಾನ ಪಂಚಾಂಗದ ಪ್ರಕಾರ, ಸೂರ್ಯ ವರ್ಷವು 365 ದಿನ 6 ಘಂಟೆಗಳು ಆಗಿರುತ್ತದೆ. ಅದೇ ಚಾಂದ್ರಮಾನ ವರ್ಷವೂ 354 ಆಗಿರುತ್ತದೆ. ಈ 11 ದಿನಗಳ ಅಂತರ ಸರಿಪಡಿಸಲು, ಮೂರು ವರ್ಷದಲ್ಲಿ ಒಮ್ಮೆ ಚಾಂದ್ರಮಾನ ಪ್ರಕಾರ ಅಧಿಕ ಮಾಸ ಎಂದು ಪರಿಗಣಿಸಲಾಗುತ್ತದೆ.

ಅಧಿಕ ಮಾಸದಲ್ಲಿ ನಿತ್ಯ ನೈಮಿತ್ತಿಕ ಹಾಗೂ ಶ್ರಾದ್ಧ ಕರ್ಮಗಳನ್ನು ಮಾಡಲೇಬೇಕು . ಆದರೆ ಶುಭಕಾರ್ಯಗಳನ್ನು ಮಾಡಬಾರದು ಎಂದು ಶಾಸ್ತ್ರದಲ್ಲಿದೆ ಹೇಳಿದೆ.

ಈ ಅಧಿಕ ಮಾಸದ ವೈಜ್ಞಾನಿಕ ಅಧ್ಯಾತ್ಮಿಕ ಹಿನ್ನೆೆಲೆಯಲ್ಲಿ,

ಡಿ.ವಿ.ಜಿ.ಅವರ ಕಗ್ಗದ ಮಾತು ಇಲ್ಲಿ ಪ್ರಸ್ತುತ.

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ॥

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ

ಜಸವು ಜನ ಜೀವನಕೆ-ಮಂಕುತಿಮ್ಮ॥

Leave a Reply

Your email address will not be published. Required fields are marked *