ಶತಮಾನದ ಜಟಿಲ ಸಮಸ್ಯೆೆಗೆ ಪರಿಹಾರ ಸುಲಭ ಸಾಧ್ಯವಲ್ಲ. ಎಪ್ಪತ್ಮೂರು ವರ್ಷದ ಹಿಂದೆ ದೇಶ ಇಬ್ಭಾಾಗ ಸೂಕ್ತ ಪೂರ್ವ ಸಿದ್ಧತೆ ಇಲ್ಲದೆ ಚರಿತ್ರೆೆಯಲ್ಲಿ ಎಂದು ಅಳಿಸಲಾಗದ ಕರಾಳ ಕೃತ್ಯ ನಡೆದು ಹೋಗಿ ಎರಡು ಧರ್ಮಗಳ ಮಧ್ಯ ವಿಷ ಬೀಜ ಬಿತ್ತಲಾಗಿತ್ತು. ತಮ್ಮದೇ ಸ್ವಾಾರ್ಥಕ್ಕಾಾಗಿ ಅದನ್ನು ರಾಜಕೀಯ ಪಕ್ಷಗಳು ಸಮೃದ್ಧವಾಗಿ ಪೋಷಿಸಿಕೊಂಡು ಬಂದವು. ಬ್ರಿಿಟಿಷರ ಇಚ್ಛೆೆಯೂ ಇದಾಗಿರಬೇಕು. ಇದರಿಂದಾಗಿ ವಿಶ್ವಕ್ಕೆೆ ಮಾದರಿ ಆಗಬೇಕಾದ ಭಾರತ ಎರಡನೇ ದರ್ಜೆಯ ಪ್ರಜೆಯಂತೆ ಇತ್ತು. ಅಯೋಧ್ಯೆೆ ವಿವಾದ ಮತ್ತೆೆ ಇನ್ನೊೊಂದು ವಿಷಮ ಸ್ಥಿಿತಿಯನ್ನು ಸೃಷ್ಟಿಿಸುವುದೋ ಎನ್ನುವ ಆತಂಕ ಎಲ್ಲರನ್ನೂ ಕಾಡಿತ್ತು. ಆದರೆ ರಾಜಕೀಯ ಪಕ್ಷಗಳು ಇಲ್ಲಿ ಸಂಕುಚಿತ ಸ್ವಾಾರ್ಥ ಬಿಟ್ಟು ದೇಶಕ್ಕಾಾಗಿ ಒಂದಾಗಿ ಬಂಡೆಯಂತೆ ನಿಂತಿದ್ದು ಅವಿಸ್ಮರಣೀಯ. ಯಾವ ಬಾಹ್ಯ ಶಕ್ತಿಿಯ ಕುತಂತ್ರವೂ ನಡೆಯಲಿಲ್ಲ. ಇಡೀ ದೇಶದಲ್ಲಿ ಸಹಬಾಳ್ವೆೆಯ ಸಂವೇದನೆ ಎದ್ದು ಕಂಡಿತು. ಗುಡ್ದದಂತೆ ಆತಂಕ ತಂದಿದ್ದ ಸಮಸ್ಯೆೆ ಹೂ ಎತ್ತಿಿದಂತೆ ಪರಿಹಾರ ಕಂಡಿದ್ದು ಅಭೂತಪೂರ್ವ. ವಿಶ್ವವೇ ಬೆರಗಾಗುವಂತೆ ಮಾಡಿದೆ. ಒಡೆಯ ಬೇಕಾದ ಸಮಸ್ಯೆೆ ಎರಡು ಮನಸ್ಸನ್ನು ಒಂದುಗೂಡಿಸಿವೆ. ಇನ್ನು ಮುಂದೆ ಧರ್ಮ ಎಂದೂ ರಾಜಕೀಯವಾಗುವುದಿಲ್ಲ ಎನ್ನುವುದು ಎಲ್ಲರ ನಂಬಿಕೆ. ಈ ಪೋಷಿಸುವ ಜವಾಬ್ದಾಾರಿ ಎಲ್ಲರದು.
– ಸತ್ಯಬೋಧ ವ್ಯಾಾಸನ ಕೆರೆ, ಹೊಸಕೆರೆಹಳ್ಳಿಿ ಬಡಾವಣೆ