Saturday, 10th May 2025

Kalaburagi Breaking: ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪ್ರತಿಭಟನೆ: ಕಳಪೆ ಆಹಾರ ನೀಡಿಕೆ ಆರೋಪ, ಜೈಲಧಿಕಾರಿ ವಿರುದ್ಧ ಬಂಧಿಗಳ ಆಕ್ರೋಶ

ಕಲಬುರಗಿ: ಇತ್ತೀಚಿಗೆ ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹವು ಒಂದಿಲ್ಲೊಂದು ವಿಚಾರದಲ್ಲಿ ರಾಜ್ಯದಲ್ಲಿ ಸುದ್ದಿಯಾಗುತ್ತಿದ್ದು, ಈಗ ಕೈಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿದಲ್ಲದೇ, ಜೈಲು ಅಧೀಕ್ಷಕಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೈದಿಗಳು ಪ್ರತಿಭಟನೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೈದಿಗಳು ಕಾರಾಗೃಹದ ವ್ಯವಸ್ಥೆ ಆಕ್ರೋಶ ವ್ಯಕ್ತಪಡಿಸಿ, ಬೆಳಗಿನ ಉಪಹಾರ ಸೇವಿಸದೆ ಪ್ರತಿಭಟನೆ ನಡೆಸಿ, ಕಾರಾಗೃಹ ಆಡಳಿತ ವಿರುದ್ಧ ಸಿಡಿದ್ದೆದ್ದಾರೆ ಎಂದು ವರದಿಯಾಗಿದೆ. ಕೂಡಲೇ, ಸೆಂಟ್ರಲ್ ಜೈಲಿಗೆ ಕಾರಾಗೃಹ ಎಡಿಜಿಪಿ, ಜಿಲ್ಲಾಧಿಕಾರಿ, ನ್ಯಾಯಾಧೀಶರು ಆಗಮಿಸಿ ಸಮಸ್ಯೆ ಆಲಿಸಬೇಕು ಪಟ್ಟು ಹಿಡಿದು ಉಪವಾಸ ಕುಳಿತು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ ಮತ್ತು ಪಿಎ ಶ್ರೀಕಾಂತ್‌ ರಂಜೇರಿ ಅವರನ್ನು ಕೂಡಲೇ ವರ್ಗಾಯಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರಿಗೆ, ಹಲವು ಕೈದಿಗಳು ಸಹಿ ಹಾಕಿ ಬರೆದಿರುವ ಪತ್ರ, ಪ್ರತಿಭಟಿಸಿ ನಡೆಸಿದ್ದಾರೆ ಎನ್ನಲಾದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜೈಲಿನಲ್ಲಿ ಎಲ್ಲಾ ಕೈದಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇಲ್ಲಿನ ಕೆಲವೊಂದು ಸಮಸ್ಯೆಗಳನ್ನು ಮುಖ್ಯ ಅಧೀಕ್ಷಕಿ ಬಳಿ ಹೇಳಲು ಹೋದರೆ, ಅವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಗಳಿಗೂ ಅವರ ಪಿಎ ಶ್ರೀಕಾಂತ ಅವರಿಂದ ಹಣ ಬೇಡಿಕೆ ಇಡುತ್ತಾರೆ. ಹಣ ಕೊಡದೆ ಹೋದರೆ ಬೇರೆ ಜೆಲ್ಲಿಗೆ ಶಿಫ್ಟ್ ಮಾಡುತ್ತೇನೆ ಎಂದು ಬೇದರಿಕೆ ಹಾಕುತ್ತಾರೆ. ಲೈಂಗಿಕ ಆರೋಪ ಹೊರಸಿ ಎಫ್‌ಐಆ‌ರ್ ದಾಖಲಿಸಿ ಮತ್ತೊಂದು ಜೈಲಿಗೆ ವರ್ಗಾಯಿಸುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ಕೈದಿಗಳು ಉಲ್ಲೇಖಸಿದ್ದಾರೆ.

ಇದನ್ನೂ ಓದಿ: #KalaburagiBreaking