ನವ ದೆಹಲಿ: ದೇಹದಲ್ಲಿನ ಹೆಚ್ಚು ಮಟ್ಟದ ಕೊಲೆಸ್ಟ್ರಾಲ್‌ನಿಂದಾಗಿ (Cholesterol) ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮ ಬೀಳಲಿದೆ. ಕೊಲೆಸ್ಟ್ರಾಲನ್ನು ಸರಿಯಾದ ರೀತಿಯಲ್ಲಿ ಕಂಟ್ರೋಲ್‌ನಲ್ಲಿಟ್ಟರೆ ಮಾತ್ರ ಆರೋಗ್ಯಯುತವಾಗಿ ಉತ್ತಮ ಜೀವನವನ್ನು ಸಾಗಿಸಬಹುದು. ಹಾಗಾಗಿ ಯಾವುದೇ ಔಷಧಿಗಳಿಲ್ಲದೇ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕರಗಿಸಿಕೊಳ್ಳಬೇಕಾದರೆ ಈ ಗಿಡಮೂಲಿಕೆ ಚಹಾ ಕುಡಿಯುವ ಮೂಲಕ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು.
ಗ್ರೀನ್ ಟೀ:
ಗ್ರೀನ್ ಟಿ ಕುಡಿಯುವ ಮೂಲಕ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಬಹುದು. ಗ್ರೀನ್ ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟ್ ಕ್ಯಾಟೆಚಿನ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಸಿಕೊಳ್ಳಿ. ಇದರಿಂದ ನಿಮ್ಮ ಆಹಾರದಿಂದ ಕಬ್ಬಿಣ ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಿ, ಬೊಜ್ಜಿನ ಅಂಶ ಕಡಿಮೆ ಮಾಡಲಿದೆ. ಆದ್ದರಿಂದ ಇದರ ಸೇವನೆಯ ಬಗ್ಗೆ ಹೆಚ್ಚಿನ ಗಮನವಹಿಸಿ.

ದಾಸವಾಳದ ಟೀ:
ದಾಸವಾಳದ ಹೂವಿನ ಒಣಗಿದ ದಳಗಳಿಂದ ತಯಾರಿಸಿದ ಚಹಾವು ಆರೋಗ್ಯಕ್ಕೆ ಬಹಳ ಒಳಿತು. ಇದು ಹೃದಯದ ಆರೋಗ್ಯವನ್ನು ವೃದ್ದಿಸುವ ಅತ್ಯುತ್ತಮ ಆಯ್ಕೆಯಾಗಿದೆ. ದಾಸವಾಳದ ಚಹಾವು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ಟೀ:
ಕೊಲೆಸ್ಟ್ರಾಲ್ ಮಟ್ಟವನ್ನು ಬೆಳ್ಳುಳ್ಳಿ ಟೀ ಮೂಲಕವು ಕಡಿಮೆಗೊಳಿಸಬಹುದು. ಬೆಳ್ಳುಳ್ಳಿ ಯಲ್ಲಿ ಅಲಿಸಿನ್‌ನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇರಲಿದ್ದು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇಂತಹ ಟೀ ಕುಡಿಯುದರಿಂದ ಹೃದಯದ ಆರೋಗ್ಯ ಕಾಪಾಡಬಹುದು. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್‌ನಂತಹ ಅಂಶವು ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪುದೀನಾ ಟೀ:
ಪುದೀನಾ ಚಹಾವು ರಿಫ್ರೆಶ್ ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಸಹ ಬೆಂಬಲಿಸುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಜೊತೆಗೆ ಜೀರ್ಣಕಾರಿ ಕ್ಷೇಮಕ್ಕೆ ಇದು ವಿಶೇಷವಾಗಿ ಉಪಯುಕ್ತವಾಗಿದೆ, ಈ ಚಹಾವನ್ನು ದಿನಕ್ಕೆ 1-2 ಬಾರಿ ಕುಡಿಯಿರಿ, ವಿಶೇಷವಾಗಿ ಊಟದ ನಂತರ ಕುಡಿದರೆ ಉತ್ತಮ.

ಅರಶಿನ ಟೀ:
ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿರುವ ಅರಶಿನವು ಕೊಲೆಸ್ಟ್ರಾಲ್ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಚಿಟಿಕೆ ಅರಶಿನವನ್ನು ಚಹಾಗೆ ಹಾಕಿಕೊಂಡು ಸೇವನೆ ಮಾಡಿದರೆ ಉತ್ತಮ. ಇದು ದೇಹದಲ್ಲಿ ಉರಿಯೂತ ವಿರುದ್ಧ ಹೋರಾಡುವುದು, ರಕ್ತ ಸಂಚಾರ ಸುಗಮ ವಾಗಿಸುವುದು ಮತ್ತು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಶುಂಠಿ ಟೀ:
ಶುಂಠಿ ಚಹಾವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುವ ಮತ್ತು ನಿಯಮಿತ ಸೇವನೆಯ ಮೂಲಿ ಕಡಿಮೆ LDL ಕೊಲೆಸ್ಟ್ರಾಲ್ ತಗ್ಗಿಸಲು ಮತ್ತು ಸುಧಾರಿತ ರಕ್ತ ಪರಿಚಲನೆಗೆ ಸಹಾಯ ಮಾಡಬಹುದು. ಇಂತಹ ನಿಯಮಿತ ಟೀ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ.

ಇದನ್ನು ಓದಿ:Cholestrole Controle Tips: ಕೆಟ್ಟ ಕೊಲೆಸ್ಟ್ರಾಲ್ ನೈಸರ್ಗಿಕವಾಗಿ ಕಡಿಮೆ ಮಾಡಲು ಈ ಬೀಜಗಳನ್ನು ಸೇವಿಸಿ