Monday, 12th May 2025

ಬಾಹ್ಯಾಕಾಶಕ್ಕೆ ಕಾಲಿಟ್ಟ ಯೂರಿ ಗಗಾರಿನ್‌: ತುಂಬಿತು 60 ವರ್ಷ

ಮಾಸ್ಕೊ: ಅಂತರಿಕ್ಷಯಾನ ಮಾಡಿದ ಪ್ರಥಮ ಮಾನವ ಎಂಬ ಕೀರ್ತಿಗೆ ಪಾತ್ರರಾದ ದಂತಕಥೆ ಯೂರಿ ಗಗಾರಿನ್‌ ಬಾಹ್ಯಾ ಕಾಶಕ್ಕೆ ಕಾಲಿಟ್ಟು ಇಂದಿಗೆ 60 ವರ್ಷಗಳು ತುಂಬಿದ್ದು, ರಷ್ಯಾದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು.

ರಷ್ಯಾದ ಬಾಹ್ಯಾಕಾಶ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಹಲವು ಅವಘಡಗಳನ್ನು ಎದುರಿಸಿ, ಸರಣಿ ವೈಫಲ್ಯಗಳನ್ನು ಅನು ಭವಿಸುತ್ತಿದೆ. ಆದರೆ 1961ರ ಏಪ್ರಿಲ್ 12ರಂದು ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಹಿರಿಮೆಗೆ ಸೋವಿಯತ್ ಒಕ್ಕೂಟ ಪಾತ್ರವಾಗಿದೆ.

ಗಗಾರಿನ್ ನಡೆಸಿದ ಅಂತರಿಕ್ಷಯಾನದ ದಿನವನ್ನು ರಷ್ಯಾದಲ್ಲಿ ಪ್ರತಿವರ್ಷ ಕಾಸ್ಮೊನಾಟಿಕ್ಸ್ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷ 60ನೇ ವಾರ್ಷಿಕೋತ್ಸವ ನಿಮಿತ್ತ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನೌಕೆಯಿಂದ ನಾಲ್ವರು ರಷ್ಯಾದ ಗಗನಯಾತ್ರಿಗಳು, ನೆಲದ ದೇಶವಾಸಿ ಗಳಿಗೆ ವಂದಿಸಿದ್ದು, ದೇಶ ಬಾಂಧವರ ಸಾಧನೆಯನ್ನು ಶ್ಲಾಘಿಸಿ ಭೂಮಿಗೆ ಸಂದೇಶ ರವಾನಿಸಿದ್ದಾರೆ.

 

Leave a Reply

Your email address will not be published. Required fields are marked *