Tuesday, 13th May 2025

ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ ತೀವ್ರ: ಹಿಂಸಾಚಾರ

ಕಾಬೂಲ್: ತಾಲಿಬಾನ್‌ ಉಗ್ರರ ದಾಳಿಯಿಂದ ಹೈರಾಣಾಗಿದ್ದ ಕಾಬೂಲ್ ನಲ್ಲಿ ಮಹಿಳಾ ಹಕ್ಕು ಹೋರಾ   ಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ.

ತಾಲೀಬಾನ್ ನ ಹೊಸ ಸರ್ಕಾರದ ಅಡಿಯಲ್ಲಿ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಹಿಳೆ ಯರು ಅಧ್ಯಕ್ಷೀಯ ಪ್ಯಾಲೆಸ್ ಗೆ ತೆರಳಲು ಯತ್ನಿಸಿ ದಾಗ ತಾಲೀಬಾನ್ ಉಗ್ರರು ಅವರನ್ನು ಒತ್ತಾಯ ಪೂರ್ವಕವಾಗಿ ತಡೆದು ನಿಲ್ಲಿಸಿದ್ದಾರೆ.

ತಾಲೀಬಾನ್ ವಿಶೇಷ ಉಗ್ರ ಸಂಘಟನೆಗಳು ಪ್ರತಿಭಟನಾ ನಿರತರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದು, ಅರಮನೆ ಪ್ರವೇಶಿಸುವುದಕ್ಕೆ ಯತ್ನಿಸಿದ್ದ ಮಹಿಳೆ ಯರನ್ನು ತಡೆದಿದ್ದಾರೆ.

ಹಕ್ಕುಗಳ ಹೋರಾಟ ಕಾರ್ಯಕರ್ತರು ಮಾತನಾಡಿ, ನಮ್ಮ ಹಕ್ಕುಗಳನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಮಹಿಳೆಯರ ತಂಡ ಜೊತೆಗೂಡಿ ಪ್ರತಿಭಟನೆ ನಡೆಸಲು ಅಧ್ಯಕ್ಷರ ಪ್ಯಾಲೆಸ್ ಗೆ ತೆರಳುತ್ತಿದ್ದಾಗ ತಾಲೀಬಾನ್ ನಮ್ಮ ಮೇಲೆ ದಾಳಿ ನಡೆಸಿದೆ, ಅಶ್ರುವಾಯು ಪ್ರಯೋಗಿಸಿದೆ, ಮಹಿಳೆಯರನ್ನು ಥಳಿಸಿದೆ” ಎಂದು ಆರೋಪಿ ಸಿದೆ.

ತಾಲೀಬಾನಿಗಳು ಮಹಿಳೆಯರನ್ನು ತಡೆಯಲು ಯತ್ನಿಸಿದರು, ಆದರೆ ಅದಕ್ಕೆ ಜಗ್ಗದ ಕಾರಣ ಅಶ್ರುವಾಯು ಪ್ರಯೋಗಿಸಲಾಗಿದೆ ಎಂದು ಮಾಧ್ಯಮ ಕಾರ್ಯಕರ್ತ ರಾದ ಅಬ್ದುಲ್ಲಾ ಇಮಾದ್ ಹೇಳಿದ್ದಾರೆ.

ಶನಿವಾರದ ಪ್ರತಿಭಟನೆ ಎರಡನೇಯ ಬಾರಿ ನಡೆಯುತ್ತಿರುವ ಪ್ರತಿಭಟನೆಯಾಗಿದ್ದು, ಕಾಬೂಲ್ ನಲ್ಲಿ ಕಳೆದ ವಾರ ಇಂಥಹದ್ದೇ ಪ್ರತಿಭಟನೆ ನಡೆದಿತ್ತು.

Leave a Reply

Your email address will not be published. Required fields are marked *