Wednesday, 14th May 2025

ಮಹಿಳೆಯರಂತೆ ಬಟ್ಟೆ ಧರಿಸಿ ಯುವತಿಯರ ಫೋಟೋ ಕ್ಲಿಕ್ಕಿಸುತ್ತಿದ್ದವನ ಬಂಧನ

ವಾಷಿಂಗ್ಟನ್:‌ ಮಹಿಳೆಯರಂತೆ ಬಟ್ಟೆ ಧರಿಸಿಕೊಂಡು ಶೌಚಾಲಯದಲ್ಲಿ ಯುವತಿಯರ ಫೋಟೋ ಕ್ಲಿಕ್ಕಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.  ಪೊಲೀಸರು ಬಂಧಿಸಿದ್ದಾರೆ.

ಟೆಕ್ಸಾಸ್‌ ಮೂಲದ 45 ವರ್ಷದ ಡೌಗ್ಲಾಸ್ ಈಗನ್ ಬಂಧಿತ ವ್ಯಕ್ತಿ. ಈತ ಮಹಿಳೆಯರಂತೆ ಬಟ್ಟೆಗಳನ್ನು ಧರಿಸಿ, ಥೇಟು ಮಹಿಳೆಯ ರಂತೆ ಕಾಣಿಸಿಕೊಂಡು ಮಾಲ್‌ ಗಳಲ್ಲಿ ಮಹಿಳಾ ಶೌಚಾಲಯಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ ಎಂದು ವರದಿ ತಿಳಿಸಿದೆ.

ಇತ್ತೀಚೆಗೆ ಮಹಿಳೆಯೊಬ್ಬರು ಶೌಚಾಯಲಯದ ಬಾಗಿಲಿನ ಕೆಳಗಿರುವ ಜಾಗದಲ್ಲಿ ಮೊಬೈಲ್‌ ಗಮನಿಸಿದ್ದಾರೆ. ಕೂಡಲೇ ಸಂಶಯಗೊಂಡು ಹೊರ ಬಂದು ನೋಡಿದಾಗ, ಹೆಣ್ಣಿನ ವೇಷ ಭೂಷಣ ತೊಟ್ಟಿರುವ ವ್ಯಕ್ತಿಯನ್ನುಗಮನಿಸಿದ್ದರು. ಮಹಿಳೆಯನ್ನು ನೋಡಿದ ತಕ್ಷಣ ಡೌಗ್ಲಾಸ್ ಈಗನ್ ಅಲ್ಲಿಂದ ಓಡಲು ಯತ್ನಿಸಿದ್ದಾನೆ.

ಜನ ನೋಡುತ್ತಿದ್ದಂತೆಯೇ ಡೌಗ್ಲಾಸ್ ಈಗನ್ ಓಡಲು ಯತ್ನಿಸಿದ್ದಾನೆ. ಭೀತಿ ಹುಟ್ಟಿಸಲು ತನ್ನಲ್ಲಿದ್ದ ಗನ್‌ ತೋರಿಸಿ ಹೆದರಿಸಿ ದ್ದಾನೆ. ನಂತರ ಪೊಲೀಸರು ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
Read E-Paper click here