Saturday, 10th May 2025

Viral Video: ಚಳಿಯಿಂದ ನಡುಗುತ್ತಿದ್ದ ಬೆಕ್ಕಿನ ಮರಿಗೆ ಚೀನಾದ ಹುಡುಗಿ ಮಾಡಿದ್ದೇನು? ವಿಡಿಯೊ ನೋಡಿ

Viral Video

ಬೀಜಿಂಗ್‌: ಸೋಶಿಯಲ್‌ ಮೀಡಿಯಾದಲ್ಲಿ ಕೆಲವರು ಸಾಕುಪ್ರಾಣಿಗಳ ಜೊತೆ ಕಾಲ ಕಳೆಯುವ, ಮುದ್ದಾಡುವ ವಿಡಿಯೊಗಳು ವೈರಲ್‌ ಆಗುತ್ತಿರುತ್ತವೆ. ಅದರಲ್ಲೂ ಮಕ್ಕಳು ಸಾಕುಪ್ರಾಣಿಗಳ ಜೊತೆ ಆಟ ಆಡುವುದು, ಕಾಳಜಿ ವಹಿಸುವುದು ಮತ್ತಷ್ಟು ಹೆಚ್ಚು ಗಮನ ಸೆಳೆಯುತ್ತವೆ. ಹಾಗೆಯೇ ಇಲ್ಲೊಬ್ಬಳು ಹುಡುಗಿ ಚಳಿಯಿಂದ ನಡುಗುತ್ತಿರುವ ಬೆಕ್ಕನ್ನು ಆರೈಕೆ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮ ಸಖತ್‌ ವೈರಲ್‌ (Viral Video) ಆಗಿದೆ. ಆ ಹುಡುಗಿ ಬೆಕ್ಕು ಚಳಿಯಿಂದ ನಡುಗುತ್ತಿರುವುದನ್ನು ನೋಡಲಾಗದೆ ಅತ್ತಿದ್ದಾಳೆ. ಬಳಿಕ ತನ್ನ ಹೇರ್‌ ಡ್ರೈಯರ್‌ ಬಳಸಿ ಬೆಕ್ಕನ್ನು ಬೆಚ್ಚಗಿಡಲು ಪ್ರಯತ್ನಿಸಿದ್ದಾಳೆ. ಈ ನಿಸ್ವಾರ್ಥ ಪ್ರೀತಿ ಹಲವರ ಹೃದಯ ಗೆದ್ದಿದೆ.

ಚೀನಾದ ಹುಬೈನಲ್ಲಿ ಈ ಘಟನೆ ನಡೆದಿದ್ದು, ವಿಪರೀತ ಚಳಿಯಿಂದಾಗಿ ಬೆಕ್ಕಿನ ಮರಿ ಸಾವಿನ ಅಂಚಿನಲ್ಲಿತ್ತು. ಅದೃಷ್ಟವಶಾತ್ ಚೀನೀ ಹುಡುಗಿಯೊಬ್ಬಳು ಅದಕ್ಕೆ ಸಹಾಯ ಮಾಡಿದ್ದಾಳೆ. ಚಳಿಯಿಂದ ನಡುಗುತ್ತಿರುವ ಬೆಕ್ಕಿನ ಜೀವವನ್ನು ಉಳಿಸಲು ಹೇರ್ ಡ್ರೈಯರ್ ಅನ್ನು ಬಳಸಿದ್ದಾಳೆ. ಈಗ ವೈರಲ್ ಆಗಿರುವ ವಿಡಿಯೊ ಕ್ಲಿಪ್‌ನಲ್ಲಿ ಅವಳು ಮೇಜಿನ ಮೇಲೆ ಚಲನೆಯಿಲ್ಲದೇ ಮಲಗಿರುವ ಬೆಕ್ಕಿನ ಮರಿಯ ಮೇಲೆ ಬೆಚ್ಚಗಿನ ಗಾಳಿಯನ್ನು ಬೀಸುತ್ತಿರುವುದು ಸೆರೆಯಾಗಿದೆ.

ಹೇರ್‌ ಡ್ರೈಯರ್‌ ಬಳಸಿ ಬೆಕ್ಕನ್ನು ಬೆಚ್ಚಗಿಡಲು ಪ್ರಯತ್ನಿಸುವಾಗ ಆಕೆ ಜೋರಾಗಿ ಅತ್ತಿದ್ದಾಳೆ. ಬೆಕ್ಕನ್ನು ಕಳೆದುಕೊಳ್ಳುವ ಭಯ ಆಕೆಯಲ್ಲಿರುವುದು ವ್ಯಕ್ತವಾಗಿದೆ. ಇದು ಆ ಬೆಕ್ಕಿನ ಬಗ್ಗೆ ಆಕೆಗಿರುವ ಪ್ರೀತಿ, ಸಹಾನುಭೂತಿಯನ್ನು ತೋರಿಸುತ್ತದೆ.

ಕೊನೆಗೂ ಆಕೆಯ ನಿಸ್ವಾರ್ಥ ಪ್ರಯತ್ನ ಫಲ ಕೊಟ್ಟಿದೆ. ಬೆಕ್ಕು ಎದ್ದು ಹಾಲು ಕುಡಿದಿದೆ. ಆಕೆ ಬಳಿಕ ಆ ಬೆಕ್ಕಿಗೆ ಸಣ್ಣ ಸ್ವೆಟರ್‌ ಕೂಡ ಹಾಕಿದ್ದಾಳೆ. ಚೀನಾದ ಬಾಲಕಿಯ ತಂದೆ ರೆಕಾರ್ಡ್ ಮಾಡಿದ ಈ ಕ್ಲಿಪ್ ಅನ್ನು ದೇಶದ ಸಾಮಾಜಿಕ ಮಾಧ್ಯಮ ಫ್ಲಾಟ್‌ಫಾರ್ಮ್‌ ಡೌಯಿನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಎರಡು ಗಂಟೆಗಳ ನಿರಂತರ ಪ್ರಯತ್ನದಿಂದ ಆ ಹುಡುಗಿ ಬೆಕ್ಕಿನ ಜೀವ ಉಳಿಸಿದ್ದಾಳೆ.

ಇದನ್ನೂ ಓದಿ:ವಿಮಾನದೊಳಗೆ ಮೈಮರೆತು ಸರಸವಾಡಿದ ದಂಪತಿ; ಖಾಸಗಿ ವಿಡಿಯೊ ಲೀಕ್

ನಂತರ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಹಂಚಿಕೊಳ್ಳಲಾಗಿದೆ. ಹುಡುಗಿಯ ಈ ಕಾರ್ಯ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. “ಇದು ನನ್ನನ್ನು ಭಾವುಕನನ್ನಾಗಿ ಮಾಡಿತು. ಅವಳು ದೇವತೆಗೆ ಸಮಾನ” ಎಂದು ಕಾಮೆಂಟ್ ವಿಭಾಗದಲ್ಲಿ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು “ಅವಳನ್ನು ಆಶೀರ್ವದಿಸಿ. ಅವಳು ಬೆಳೆದು ಭವಿಷ್ಯದಲ್ಲಿ ಹೆಚ್ಚಿನ ಪ್ರಾಣಿಗಳಿಗೆ ಸಹಾಯ ಮಾಡಬಹುದೆಂದು ನಾನು ಭಾವಿಸುತ್ತೇನೆ” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇರ್ ಮಾಡಿದ ಒಂದು ದಿನದೊಳಗೆ, ಈ ಕ್ಲಿಪ್ 90,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.