Saturday, 10th May 2025

Viral Video: ಸಿಂಗಲ್‌ ರೋಮಿಯೋಗಳಿಗೆ ಗುಡ್‌ನ್ಯೂಸ್‌! ಲವ್‌, ರೊಮ್ಯಾನ್ಸ್‌ಗಾಗಿಯೇ ಬಂದವ್ಳೆ ʻರೋಬೋ ಗರ್ಲ್‌ʼ

ಸಿಂಗಲ್ ರೋಮಿಯೋಗಳಿಗೊಂದು (Romeo) ಗುಡ್ ನ್ಯೂಸ್! ಇನ್ನು ನೀವು ನಿಮ್ಮ ಪಾರ್ಟನರ್ ಹುಡುಕಲು ಕಷ್ಟ ಪಡ್ಬೇಕಿಲ್ಲ, ಸ್ಟೈಲಿಶ್ ಲುಕ್ ಮಾಡ್ಕೊಂಡು, ಪಾಶ್ ಬೈಕುಗಳನ್ನೇರಿ ರೋಡ್ ಸುತ್ತಬೇಕಿಲ್ಲ. ಇದೀಗ ನಿಮ್ಮಂತವರಿಗಾಗಿಯೇ ಬಂದಿದ್ದಾಳೆ ಅರಿಯಾ..! (Aria) ಗಾಬರಿಯಾಗ್ಬೇಡಿ, ಇವಳು ರೋಬೋ ಗರ್ಲ್, (Robo Girl) ತಮಗೊಂದು ಪರ್ಮೆಕ್ಟ್ ಸಂಗಾತಿಗಳನ್ನು ಹುಡುಕುತ್ತಿರುವವರಿಗಾಗಿ ಸ್ಪೆಷಲ್ ಆಗಿ ಆರ್ಡರ್ ಕೊಟ್ಟು ಮಾಡಿಸಿದ ಹಾಗೆ ಮೂಡಿಬಂದಿರುವ ಈ ‘ರೋಬೋ ಗರ್ಲ್’ನ ವೈರಲ್ ವಿಡಿಯೋ ಸುದ್ದಿಯೇ (Viral Video) ಇವತ್ತಿನ ಸ್ಪೆಷಲ್ ನ್ಯೂಸ್.

ಅಮೆರಿಕನ್ ಫರ್ಮ್ ರಿಯಲ್ ಬೋಟಿಕ್ಸ್ (American firm Realbotix) ಎಂಬ ಟೆಕ್ ಕಂಪೆನಿಯೊಂದು ಎಐ (AI) ರೊಬೋಟ್ ಗರ್ಲ್ ಫ್ರೆಂಡ್ ನ್ನು ಲಾಂಚ್ ಮಾಡಿದ್ದು ಇದಕ್ಕೆ ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈ ಎಐ ರೋಬೋ ಗರ್ಲ್ ಫ್ರೆಂಡ್ ಸಿಕ್ಕಾಪಟ್ಟೆ ಕ್ವಾಸ್ಟ್ಲೀ, 150,000 ಡಾಲರ್ ‍ಅಂದ್ರೆ ನಮ್ಮ ಭಾರತೀಯ ರೂಪಾಯಿಗಳಲ್ಲಿ ಹೇಳೋದಾದ್ರೆ, ಅಂದಾಜು 1.5 ಕೋಟಿ ರೂಪಾಯಿಗಳು! ಸಿಕ್ಕಾಪಟ್ಟೆ ಕ್ವಾಸ್ಟ್ಲೀ ಆಯ್ತಲ್ಲಾ..!

ಈ ರೋಬೋಟ್ ‘ಮುಖ ಭಾವನೆ’ಗಳನ್ನು ವ್ಯಕ್ತಪಡಿಸುತ್ತದೆ ಹಾಗೂ ‘ನೈಜ ಮಾನವ ಗುಣ ಲಕ್ಷಣ’ಗಳನ್ನು ಹೊಂದಿದೆ ಎಂದು ಸಿ.ಎನ್.ಇ.ಟಿ. ವರದಿ ಮಾಡಿದೆ.

‘ಅರಿಯಾಳನ್ನು ಭೇಟಿಯಾಗಿ. ಮಹಿಳಾ ಸಂಗಾತಿ ರೋಬೋಟ್’ ಎಂದು ಎಕ್ಸ್ ಬಳಕೆದಾರರೊಬ್ಬರು ಅರಿಯಾಳ ವಿಡಿಯೋವನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಇದನ್ನು ಅಮೆರಿಕನ್ ಫಿಲ್ಮ್ ರಿಯಲ್ ಬೋಟಿಕ್ಸ್ ಎಂಬ ಸಂಸ್ಥೆ ಸಿಇಎಸ್ 2025ನಲ್ಲಿ ಲಾಂಚ್ ಮಾಡಿದೆ.

ಹಾಗಾದ್ರೆ ಅರಿಯಾ ಇತರೇ ರೋಬೋಟ್ ಗಳಿಗಿಂತ ಹೇಗೆ ಭಿನ್ನ?

‘ಸಾಮಾಜಿಕ ಬುದ್ದಿವಂತಿಕೆ, ಮನುಷ್ಯರಂತೆ ವಿಷಯಗಳನ್ನು ವಿಭಾಗಿಸುವ ಸಾಮರ್ಥ್ಯ ಹಾಗು ಮನುಷ್ಯರಲ್ಲಿರುವಂತೆ ನೈಜ ಲಕ್ಷಣಗಳನ್ನು ಇದು ಹೊಂದಿದೆ ಎಂದು ಇದನ್ನು ತಯಾರಿಸಿದ ಕಂಪೆನಿ ಹೇಳಿಕೊಂಡಿದೆ. ಅರಿಯಾ ಎಐ ರೊಬೋಟ್ ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, ಇದರ ಕುತ್ತಿಗೆಯಿಂದ, ಬಾಯಿ ಮತ್ತು ಕಣ್ಣುಗಳ ಚಲನೆಗಾಗಿ ಒಟ್ಟು 17 ಮೋಟಾರ್ ಗಳನ್ನು ಅಳವಡಿಸಲಾಗಿದೆ. ಬಳಕೆದಾರರು ಅರಿಯಾಳ ಮುಖ, ಹೇರ್ ಸ್ಟೈಲ್ ಮತ್ತು ಮೈಬಣ್ಣವನ್ನೂ ಸಹ ಬದಲಾಯಿಸಬಹುದಾಗಿದೆ.

ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಶೀತಗಾಳಿ, ಇನ್ನೂ ಐದು ದಿನ ಜನತೆ ಗಡಗಡ

ಈ ರೋಬೋಟ್ ನಲ್ಲಿ ಆರ್.ಎಫ್.ಐ.ಡಿ. ಟ್ಯಾಗ್ ಅಳವಡಿಸಲಾಗಿದೆ. ಇದರಿಂದ ಅದು ಬೇರೆ ಮುಖಭಾವಗಳನ್ನು ಹೊಂದಿರುವಾಗ ಮತ್ತು ಅದರ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವಾಗ ಗುರುತಿಸಲು ಸಾಧ್ಯವಾಗುತ್ತದೆ. ಈ ಎಐ ಗರ್ಲ್ ಫ್ರೆಂಡ್ ರೋಬೋಟ್ ಅರಿಯಾ ಬಗ್ಗೆ ನೆಟ್ಟಿಗರು ಏನು ಹೇಳ್ತಾರೆ ನೋಡೋಣ ಬನ್ನಿ.. “ಮಾತುಗಳಿಗೆ ನಿಲುಕದ ವಿಚಾರವಿದು, ಆದರೆ ಇದು ತಂತ್ರಜ್ಞಾನದ ಭವಿಷ್ಯ ಎಂದು ನನಗನ್ನಿಸುತ್ತದೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಸಮಾಜಕ್ಕೆ ಸಹಾಯ ಬೇಕಾಗಿದೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ‘ಓ ದೇವ್ರೆ, ಇದು ವಿಚಿತ್ರವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ವೈಬ್ ಕ್ರಿಯೇಟ್ ಮಾಡಿದೆ’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *