Saturday, 10th May 2025

Viral Video: ಕ್ರಿಸ್ಮಸ್‌ ಪಾರ್ಟಿಗೆ ತನ್ನ ಎದೆಹಾಲನ್ನು ತಾನೇ ಕುಡಿದು, ಸ್ನೇಹಿತರಿಗೂ ಕೊಟ್ಟ ಮಹಿಳೆ! ಸಖತ್‌ ವೈರಲಾಗ್ತಿದೆ ಈ ವಿಡಿಯೊ

Australian Woman viral vedio

ಆಸ್ಟ್ರೇಲಿಯಾ: ಕ್ರಿಸ್ಮಸ್‌ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ಎದೆಹಾಲನ್ನು ತಾನೇ ಕುಡಿದು ತನ್ನ ಸ್ನೇಹಿತರಿಗೂ ಕುಡಿಸಿದ ವಿಲಕ್ಷಣ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ(Viral Video). ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್‌  ತನ್ನ ಸ್ನೇಹಿತರ ಜೊತೆ ಟ್ರಿಪ್‌  ತೆರಳಿದ್ದು  ಸಮುದ್ರದಲ್ಲಿ ದೋಣಿ ವಿಹಾರ ಮಾಡುವ ಸಂದರ್ಭದಲ್ಲಿ ಆಕೆ ತನ್ನ  ಎದೆಹಾಲನ್ನು ತಾನೇ ಕುಡಿದು ಸ್ನೇಹಿತರಿಗೂ  ಕುಡಿಯಲು ಕೊಟ್ಟಿದ್ದಾಳೆ. ಇವರ ಇಬ್ಬರು ಗೆಳತಿಯರು ಎದೆಹಾಲನ್ನು ಕುಡಿದಿದ್ದು  ಇಬ್ಬರೂ ವಾವ್ಹ್ ಎನ್ನುವ  ಶಾಕಿಂಗ್‌ ರಿಯಾಕ್ಷನ್‌ ಕೊಟ್ಟಿದ್ದಾರೆ.ಈ ವಿಡಿಯೋ ಸದ್ಯ ಅಚ್ಚರಿ ಹುಟ್ಟಿಸುವಂತೆ ಮಾಡಿದೆ.

ಯಾವುದು ಈ ವೀಡಿಯೋ

ಆಸ್ಟ್ರೇಲಿಯಾದ (ಸಾರ) ಮಹಿಳೆಯೊಬ್ಬರು ಬೋಟ್ ಪಾರ್ಟಿಯಲ್ಲಿ ಭಾಗಿಯಾಗಿದ್ದು ಈ ವೇಳೆ ಬೋಟ್ ನಲ್ಲಿ ತೆರಳುವಾಗಲೇ ತನ್ನ ಎದೆಹಾಲನ್ನು ಪಂಪ್ ಮಾಡಿ ಕಂಟೈನರ್ ಮೂಲಕ ಸಂಗ್ರಹಿಸುತ್ತಿರುತ್ತಾಳೆ. ಬಳಿಕ ಫೀಡಿಂಗ್  ಬಾಟಲಿಗೆ ಹಾಕಿ ತಾನು ಕುಡಿದು, ಸ್ನೇಹಿತರಿಗೆ ಕುಡಿಯಲು ಕೊಟ್ಟಿದ್ದಾಳೆ. ಇವರ ಇಬ್ಬರು ಗೆಳತಿಯರು ಎದೆಹಾಲನ್ನು ಕುಡಿದಿದ್ದು ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿ ಇದ್ದ ಮಹಿಳೆಯರು ಇತರ ಸಂಬಂಧಿಕರು ಇದನ್ನು ಕಂಡು ಆಶ್ಚರ್ಯರಾಗಿದ್ದಾರೆ.

ಎಲ್ಲೆಡೆ ವೈರಲ್

ಬೋಟ್ ಪಾರ್ಟಿ ವೇಳೆ ಮಹಿಳೆ ತನ್ನ ಎದೆಹಾಲನ್ನು ತಾನೇ ಸ್ವೀಕರಿಸಿ ಈ ಅನುಭವ ಚೆನ್ನಾಗಿದೆ ಎಂದು ತನಗೆ ಆದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದಾದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಅಪ್ಲೋಡ್ ಮಾಡಿ  ಹಂಚಿಕೊಂಡಿದ್ದು, ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊ ಫುಲ್ ವೈರಲ್ ಆಗಿದ್ದು ಇದಕ್ಕೆ ಇನ್‌ಸ್ಟಾದಲ್ಲಿ 25,000 ಕ್ಕೂ ಅಧಿಕ ಲೈಕ್ ಗಳನ್ನು ಪಡೆಯುವ ಜೊತೆಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಕೆಲವು ತಾಯಂದಿರು ತಾವು ಕೂಡ ತಮ್ಮದೇ ಎದೆಹಾಲನ್ನು ಸೇವಿಸಿದ್ದ  ಅನುಭವ ಹಂಚಿಕೊಂಡಿದ್ದಾರೆ.‌ ಇನ್ನೂ ಕೆಲವು ನೆಟ್ಟಿಗರು ಇಂತಹ ಸ್ನೇಹಿತರು ಇರಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವು ಇನ್ ಸ್ಟಾ ಬಳಕೆದಾರರು ತಾಯಿಯ ಎದೆಹಾಲಿನ ಪ್ರಾಮುಖ್ಯತೆ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಆಧುನಿಕ ವಿಧಾನ

ತಾಯಿಯ ಹಾಲು ಅಮೃತ್ತಕ್ಕೆ ಸಮವಾದ್ದದ್ದು ಎಂಬ ಮಾತಿದೆ. ವಿದೇಶದಲ್ಲಿ ಎದೆಹಾಲನ್ನು ಡೊನೆಟ್ ಮಾಡುವ ವಿಚಾರ ನಿಮಗೂ ಕೂಡ ತಿಳಿದಿರಬಹುದು. ತಾಯಿಯ ಎದೆಹಾಲನ್ನು ಶೇಖರಣೆ ಮಾಡಲು ಕೆಲವು ಹೊಸ  ತಂತ್ರಾಂಶವನ್ನು ಸಂಶೋಧಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ಮಗುವಿಗೆ ಫೀಡ್ ಮಾಡಲು ಸಾಧ್ಯವಿಲ್ಲದಿದ್ದಾಗ ಈ ಆಧುನಿಕ ವಿಧಾನದಿಂದ ಎದೆಹಾಲು ಸಂಗ್ರಹ ಮಾಡುವ ಕ್ರಮ ಬಹಳ ಅನುಕೂಲ ಆಗಲಿದೆ. ಅದರಲ್ಲೂ ವಿದೇಶದಲ್ಲಿ  ಈ ರೀತಿ ತಾಯಿಯ  ಎದೆಹಾಲಿನ ಸಂಗ್ರಹಿಸುವ ಕ್ರಮ ಪ್ರಚಲಿತದಲ್ಲಿದೆ .

ಈ ಸುದ್ದಿಯನ್ನೂ ಓದಿ: Viral News : ಕನ್ನಡ ಬರುವುದಿಲ್ಲವೇ? ಪರವಾಗಿಲ್ಲ ದೆಹಲಿಗೆ ಬನ್ನಿ… ಕನ್ನಡಿಗರನ್ನು ಕೆಣಕಿದ ಕಾರ್ಸ್‌ 24 ಸಿಇಓ- ಟ್ವೀಟ್‌ ಭಾರೀ ವೈರಲ್‌