ಲಂಡನ್: ಕ್ಯಾಬ್ ಹೆಯ್ಲಿಂಗ್ ಅಪ್ಲಿಕೇಶನ್‍ಗಳು ಸಾಮಾನ್ಯವಾಗಿ ರೇಟಿಂಗ್ ವ್ಯವಸ್ಥೆಯನ್ನು ಹೊಂದಿರುತ್ತವೆ. ಪ್ರಯಾಣಿಕರು ಮತ್ತು ಚಾಲಕರು ಇಬ್ಬರೂ ತಮ್ಮ ಅನುಭವಗಳನ್ನು ಪರಸ್ಪರ ರೇಟಿಂಗ್ ಮೂಲಕ ವ್ಯಕ್ತಪಡಿಸಲು ಇದು ಅನುವು ಮಾಡಿಕೊಡುತ್ತದೆ. ಪ್ರಯಾಣಿಕರು ತಮ್ಮ ಚಾಲಕನ ಬಗ್ಗೆ ಕಾಮೆಂಟ್‍ಗಳನ್ನು ಕೂಡ ಮಾಡಬಹುದು. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈಗ ಉಬರ್ ಚಾಲಕನಿಗೆ ಗ್ರಾಹಕರೊಬ್ಬರು ನೀಡಲಾದ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಮೊಹಮ್ಮದ್ ಎಂಬ ಉಬರ್ ಚಾಲಕ ವಿಚಿತ್ರ ಕಾಮೆಂಟ್‌ನಿಂದಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಎಂಟು ವರ್ಷಗಳ ಡ್ರೈವಿಂಗ್‌ನಲ್ಲಿ ಇವರು 10,138 ಟ್ರಿಪ್ ನಡೆಸಿದ್ದು, 5ರಲ್ಲಿ 4.96 ರೇಟಿಂಗ್ ಪಡೆದುಕೊಂಡಿದ್ದಾರೆ ಎಂದು ಸ್ಕ್ರೀನ್ ಗ್ರಾಬ್ ತೋರಿಸಿದೆ. ಅವರು ತಮ್ಮ ಅತ್ಯುತ್ತಮ ಸೇವೆ, ಉತ್ತಮ ಸಂಭಾಷಣಾ ಕೌಶಲ್ಯ ಮತ್ತು ಉತ್ತಮ ಸಂಗೀತಕ್ಕಾಗಿ ಪ್ರಯಾಣಿಕರಿಂದ ಅಭಿನಂದನೆಗಳನ್ನು ಪಡೆದಿದ್ದಾರೆ. ಆದರೆ ಅದರಲ್ಲಿ ಗ್ರಾಹಕರೊಬ್ಬರು ನೀಡಿದ ಒಂದು ಕಾಮೆಂಟ್ ಈಗ ನೆಟ್ಟಿಗರ ಗಮನ ಸೆಳೆದಿದೆ.
Mohammed moving kinda crazy pic.twitter.com/mgez4vByzL
— s (@s20_a_) December 9, 2024
“ಗ್ರೇಟ್ ಕಿಸ್ಸರ್” ಎಂದು ಎಂಟು ವರ್ಷಗಳ ಹಿಂದೆ ಕಾಮೆಂಟ್‌ನಲ್ಲಿ ಬರೆಯಲಾಗಿದೆ. ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ಮೊಹಮ್ಮದ್ ಒಂದು ರೀತಿಯ ಕ್ರೇಜ್ ಹೊಂದಿದ್ದಾನೆ” ಎಂದು ಎಕ್ಸ್‌ನಲ್ಲಿ ವೈರಲ್ ಪೋಸ್ಟ್‌ನ ಶೀರ್ಷಿಕೆಯನ್ನು ಬರೆಯಲಾಗಿದೆ.
“ನಾನು ಟ್ರಿಪ್‌ಗಳ ರೇಟಿಂಗ್‍ಗಳನ್ನು ನೋಡುತ್ತಿದ್ದೆ ಮತ್ತು ‘ಉತ್ತಮ ಕೆಲಸ!’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ನಾನೇ ಈ ಕಾಮೆಂಟ್ ಅನ್ನು ಮೊಹಮ್ಮದ್‍ಗಾಗಿ ಮಾಡಿದ್ದೇನೆ, ಉಬರ್ ಡ್ರೈವರ್ ಅನ್ನು ಟ್ರೋಲ್ ಮಾಡುವುದು ನನಗೆ ಇಷ್ಟ” ಎಂದು ಮತ್ತೊಬ್ಬ ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಡೆಂಟಿಸ್ಟ್‌ಗಿಂತಲೂ ಫಾಸ್ಟ್ ಈ ಗಿಳಿ! ಒಂದೇ ಸೆಕೆಂಡ್‌ನಲ್ಲಿ ಹುಳುಕು ಹಲ್ಲಿನಿಂದ ಮುಕ್ತಿ ಸಖತ್ ವೈರಲ್ ಆಗ್ತಿದೆ ಈ ವಿಡಿಯೊ
“ಮೊಹಮ್ಮದ್ ಇದು ಈಗ ಇಂಗ್ಲೆಂಡ್‌ನಲ್ಲಿ ಅತ್ಯಂತ ಜನಪ್ರಿಯ ಹುಡುಗರ ಹೆಸರು ಎಂಬುದರಲ್ಲಿ ಆಶ್ಚರ್ಯವಿಲ್ಲ” ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ. ಇತ್ತೀಚಿನ ಸಮೀಕ್ಷೆಯನ್ನು ಉಲ್ಲೇಖಿಸಿ, ಮೊಹಮ್ಮದ್ ಎಂಬ ಹೆಸರು ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಗಂಡು ಮಕ್ಕಳಿಗೆ ಇಡುವ ಅತ್ಯಂತ ಜನಪ್ರಿಯ ಹೆಸರು ಎಂದು ತಿಳಿದುಬಂದಿದೆ.