ನವ ದೆಹಲಿ: ಚೆನ್ನಾಗಿ ಕಾಣಬೇಕು ಎನ್ನುವ ಆಸೆಯಿಂದ ಹೆಚ್ಚಿನ ಮಹಿಳೆಯರು ಸೌಂದರ್ಯ ವರ್ದಕಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಅನೇಕ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಬಹು ವೆಚ್ಚದ ಚಿಕಿತ್ಸೆಗೂ ಮುಂದಾಗುತ್ತಾರೆ. ಇದೀಗ ಮಹಿಳೆಯೊಬ್ಬಳು ತನ್ನ ತುಟಿಗಳ ಅಂದವನ್ನು ಹೆಚ್ಚಿಸಲು 52 ಲಕ್ಷ ರೂ. ಖರ್ಚು ಮಾಡಿರುವ ಸುದ್ದಿ ಬಹಳಷ್ಟು ವೈರಲ್ ಆಗುತ್ತಿದೆ (Viral News).
ಈ ಮಹಿಳೆಯೂ ತಾನು ಎಲ್ಲರಿಗಿಂತಲೂ ಆಕರ್ಷಕವಾಗಿ ಕಾಣಬೇಕು ಎಂಬ ಆಸೆಯಿಂದ ತುಟಿಯ ಗಾತ್ರ ಹೆಚ್ಚಿಸಲು ಅಪಾರ ಹಣ ಖರ್ಚು ಮಾಡಿದ್ದಾಳೆ. ಫೆಟಿಶ್ ಬಾರ್ಬಿ ಎನ್ನುವ ಮಹಿಳೆ ಆಸ್ಟ್ರಿಯಾ ನಿವಾಸಿಯಾಗಿದ್ದು ಬಹು ದೊಡ್ಡ ತುಟಿ ಪಡೆಯುವ ಉದ್ದೇಶದಿಂದ ಲಿಪ್ ಫಿಲ್ಲರ್‌ಗಳ ಮೂಲಕ ತನ್ನ ತುಟಿಗಳನ್ನು ಬಹಳಷ್ಟು ದಪ್ಪವಾಗಿಸಿದ್ದಾಳೆ. ಈಕೆಯ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಫೆಟಿಶ್ ಬಾರ್ಬಿ ಎಂದು ಕರೆಯಲ್ಪಡುವ ಈಕೆ 30 ವರ್ಷದ ಮಾಡೆಲ್. ಈಕೆ 18 ವರ್ಷ ವಯಸ್ಸಿನಿಂದಲೂ ಆಗಾಗ ಬೊಟೊಕ್ಸ್ ಮತ್ತು ಫಿಲ್ಲರ್ ಚಿಕಿತ್ಸೆ ಮಾಡಿಸುವುದನ್ನು ಒಪ್ಪಿಕೊಂಡಿದ್ದಾಳೆ. ತನ್ನ ಈ ನೋಟವನ್ನು ಕಾಪಾಡಿಕೊಳ್ಳಲು ಪ್ರತಿ ಮೂರು ತಿಂಗಳಿಗೊಮ್ಮೆ ಫಿಲ್ಲರ್‌ಗಳನ್ನು ಪಡೆಯಬೇಕು. ಇದಕ್ಕಾಗಿ ಈಕೆ ಸುಮಾರು 52 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.
ಇದೀಗ ಆಕೆಯ ತುಟಿ ವಿಕಾರ ರೂಪ ಪಡೆದಿದ್ದು ಫೆಟಿಶ್ ಬಾರ್ಬಿ ತನ್ನ ಕೆನ್ನೆ, ಗಲ್ಲ, ಮೂಗಿಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಇದಲ್ಲದೇ ಚರ್ಮದ ಸುಕ್ಕುಗಳನ್ನು ತೊಡೆದುಹಾಕಲು ಮುಖಕ್ಕೆ ಬೊಟೊಕ್ಸ್ ಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದಾಳೆ ಎಂದು ಆಕೆಯೆ ಹೇಳಿಕೊಂಡಿದ್ದಾಳೆ.
ಇದನ್ನು ಓದಿ:2024 Flashback: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು