Wednesday, 14th May 2025

ಅಮೆರಿಕದ ಸಹ ಅಟಾರ್ನಿ ಜನರಲ್‌ ಆಗಿ ವನಿತಾ ಗುಪ್ತ ನೇಮಕ

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕದ ನಾಗರಿಕ ಹಕ್ಕುಗಳ ವಕೀಲೆ ವನಿತಾ ಗುಪ್ತ ಅವರು ಅಮೆರಿಕದ ಸಹ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದಾರೆ.

ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ರಿಪಬ್ಲಿಕನ್ ಸೆನೆಟ್‌ ಸದಸ್ಯೆ ಲಿಸಾ ಮಾರ್ಕೋವ್‌ಸ್ಕಿ ಅವರು ತಮ್ಮ ಪಕ್ಷದ ನಿಲುವಿನಿಂದ ಹೊರ ಬಂದು ವನಿತಾ ಗುಪ್ತ (46) ಅವರಿಗೆ ಮತ ಚಲಾಯಿಸಿದರು. ಹೀಗಾಗಿ 51-49 ಮತಗಳ ಅಂತರದಿಂದ ಅವರು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು. ಉಭಯ ಪಕ್ಷಗಳೂ ತಲಾ 50 ಸ್ಥಾನಗಳನ್ನು ಹೊಂದಿವೆ. ಮತದಾನ ವೇಳೆ ಟೈ ಆದರೆ ಮತ ಚಲಾಯಿ ಸುವ ಸಲುವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಸಹ ಸೆನೆಟ್‌ನಲ್ಲಿ ಹಾಜರಿದ್ದರು.

ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್‌ ಹುದ್ದೆ ಬಹಳ ಪ್ರತಿಷ್ಠಿತವಾಗಿದ್ದು, ಸಹ ಅಟಾರ್ನಿ ಜನರಲ್‌ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂರನೇ ಅತಿ ಪ್ರಮುಖ ಹುದ್ದೆಯಾಗಿದೆ. 2014-17ರಲ್ಲಿ ಬರಾಕ್‌ ಒಬಾಮಾ ಅವಧಿಯಲ್ಲಿ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿದ್ದರು.

Leave a Reply

Your email address will not be published. Required fields are marked *