Sunday, 11th May 2025

ಬ್ರಿಟನ್‌ ಸಚಿವ ಸಂಪುಟ: ಸುವೆಲ್ಲಾ ಗೃಹ ಸಚಿವೆ, ರಿಷಿ ಬೆಂಬಲಿಗರಿಗೆ ಸ್ಥಾನವಿಲ್ಲ

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿ ಲಿಜ್‌ ಟ್ರಸ್‌ ಅವರು ತಮ್ಮ ಸಚಿವ ಸಂಪುಟಕ್ಕೆ ಸಚಿವರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ನಿರೀಕ್ಷೆ ಯಂತೆಯೇ ಭಾರತೀಯ ಮೂಲದ ಸುವೆಲ್ಲಾ ಬ್ರೇವರ್‌ಮನ್‌ ಅವರನ್ನು ಗೃಹ ಸಚಿವರನ್ನಾಗಿ ನಿಯೋ ಜಿಸಿದ್ದಾರೆ.

ಇನ್ನೊಬ್ಬ ಭಾರತೀಯ ಅಲೋಕ್ ಶರ್ಮಾ ಅವರನ್ನು ಪರಿಸರ ಕಾರ್ಯಕ್ರಮ ಗಳ ಹೊಣೆಗಾರಿಕೆಯಾದ ಸಿಒಪಿ26 ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ತಮಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ರಿಷಿ ಸುನಕ್‌ ಅವರನ್ನು ಬೆಂಬಲಿಸಿದ್ದ ಯಾರೊಬ್ಬ ರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ಸಂಸದರ ಪೈಕಿ ಮಾಜಿ ಕಾನೂನು ಸಚಿವ ಡೊಮಿನಿಕ್‌ ರಾಬ್, ಸಾರಿಗೆ ಸಚಿವ ಗ್ರಾಂಟ್ ಶಾಪ್ಸ್‌, ಆರೋಗ್ಯ ಸಚಿವ ಸ್ಟೀವ್ ಬರ್ಕ್ಲೇ ಸೇರಿದ್ದಾರೆ.

ಶ್ರೀಲಂಕಾ ಮೂಲದ ರಾನಿಲ್ ಜಯವರ್ಧನೆ ಅವರನ್ನು ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವರನ್ನಾಗಿ ನೇಮಿಸಿದ್ದಾರೆ. ಬೆನ್‌ ವಾಲೇಸ್‌ ಅವರನ್ನು ರಕ್ಷಣಾ ಸಚಿವರನ್ನಾಗಿ ಮಾಡಲಾಗಿದೆ.

ಘಾನಾ ಮೂಲದ ಕ್ವಾಸಿ ಕ್ವಾರ್ಟೆಂಗ್‌ ಅವರನ್ನು ಬ್ರಿಟನ್‌ನ ಪ್ರಥಮ ಕಪ್ಪು ವರ್ಣೀಯ ಹಣಕಾಸು ಸಚಿವರನ್ನಾಗಿ ನೇಮಿಸ ಲಾಗಿದ್ದರೆ, ಸಿಯಾರಾ ಲಿಯೋನ್‌ ಮೂಲದ ಜೇಮ್ಸ್ ಕ್ಲೆವರ್ಲೆ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡಲಾಗಿದೆ. ಲಿಜ್‌ ಅವರಿಗೆ ಅತ್ಯಂತ ನಿಕಟರಾಗಿದ್ದ ತೆರೇಸ್‌ ಕೊಫೇ ಅವರನ್ನು ಉಪಪ್ರಧಾನಿ, ಆರೋಗ್ಯ ಸಚಿವರನ್ನಾಗಿ ಹಾಗೂ ವೆಂಡಿ ಮಾರ್ಟನ್ ಅವರನ್ನು ಸಂಸದೀಯ ಸಚಿವೆ ಮತ್ತು ಪ್ರಥಮ ಮಹಿಳಾ ಮುಖ್ಯ ಸಚೇತಕರಾಗಿ ನೇಮಿಸಲಾಗಿದೆ.