Sunday, 11th May 2025

ನೇಪಾಳದಲ್ಲಿ ಒಮಿಕ್ರಾನ್ ವೈರಸ್‌: ಎರಡು ಹೊಸ ಪ್ರಕರಣ ಪತ್ತೆ

ಕಾಠ್ಮಂಡು : ನೇಪಾಳದಲ್ಲಿ ಒಮಿಕ್ರಾನ್ ವೈರಸ್‌ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಈ ಆಪಾಯಕಾರಿ ವೈರಸ್ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ನ.19 ರಂದು ದೃಢೀಕೃತ ಒಮಿಕ್ರಾನ್ ರೂಪಾಂತರ ಹೊಂದಿರುವ ದೇಶದಿಂದ ನೇಪಾಳವನ್ನ ಪ್ರವೇಶಿಸಿದ್ದ 66 ವರ್ಷದ ವಿದೇಶಿ ವ್ಯಕ್ತಿ ಮತ್ತು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ 71 ವರ್ಷದ ಇನ್ನೊಬ್ಬ ವ್ಯಕ್ತಿಗೆ ಭಾನುವಾರ ಒಮಿಕ್ರಾನ್ ಪಾಸಿಟಿವ್ ಆಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಅವರೊಂದಿಗೆ ಸಂಪರ್ಕ ಹೊಂದಿದ್ದ ಇತರ 66 ಜನರನ್ನ ಪತ್ತೆ ಹಚ್ಚಲಾಗಿದ್ದು, ಎಲ್ಲರ ವರದಿ ನೆಗೆಟಿವ್‌ ಆಗಿದೆ’ ಎಂದಿದೆ.

ವೈರಸ್ ನ ಒಮೈಕ್ರಾನ್ ರೂಪಾಂತರದ ಬಗ್ಗೆ ಭಯದಿಂದ ನೇಪಾಳ ಇತ್ತೀಚೆಗೆ ಎಂಟು ಆಫ್ರಿಕನ್ ದೇಶಗಳು ಮತ್ತು ಹಾಂಗ್ ಕಾಂಗ್ ನ ಪ್ರಯಾಣಿಕರನ್ನು ನಿಷೇಧಿಸಿದೆ.