Monday, 12th May 2025

ಧರ್ಮನಿಂದನೆ ಆರೋಪ: ಇಬ್ಬರ ಬಂಧನ

ಲಾಹೋರ್: ಸಾಮಾಜಿಕ ಮಾಧ್ಯಮದಲ್ಲಿ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಇಬ್ಬರನ್ನು ಬಂಧಿಸಲಾಗಿದ್ದು, ಇವರಿಗೆ ಜೀವಾವಧಿ ಶಿಕ್ಷೆಯಾಗಿದೆ.

ಸೋಮವಾರ ಮುಹಮ್ಮದ್ ಉಸಾಮಾ ಶಫೀಕ್ ಮತ್ತು ಮೈಸಮ್ ಅಬ್ಬಾಸ್ ಅವರನ್ನು ಫೇಸ್ಬುಕ್ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಮತ್ತು ಪವಿತ್ರ ಕುರಾನ್ ಅನ್ನು ಅಪವಿತ್ರಗೊಳಿಸಿ ದ್ದಾರೆ ಎಂಬ ದೂರಿನ ಮೇಲೆ ಬಂಧಿಸಿದ್ದಾರೆ.

ಇಬ್ಬರೂ ಶಂಕಿತರು ಕುರಾನ್ ಶ್ಲೋಕಗಳೊಂದಿಗೆ ಆಕ್ಷೇಪಾರ್ಹ ವೀಡಿಯೊಗಳನ್ನು ಫೇಸ್‍ಬುಕ್‍ನಲ್ಲಿ ಅಪ್‍ ಲೋಡ್ ಮಾಡಿದ್ದಾರೆ ಮತ್ತು ಅದನ್ನು ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ ಎಂದು ಎಫ್‍ಐಎ ಅಧಿಕಾರಿ ಗಳಿ ತಿಳಿಸಿದ್ದಾರೆ. ಇಬ್ಬರು ಶಂಕಿತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕಾಗಿ ಜೈಲಿಗೆ ಕಳುಹಿಸಲಾಗಿದೆ.

ಉಸಾಮಾ ಲಾಹೋರ್‍ನವರಾಗಿದ್ದು, ಮೈಸಮ್ ಪಂಜಾಬ್ ಮಂಡಿ ಬಹೌದ್ದೀನ್ ಜಿಲ್ಲೆಯವರು. ಇಬ್ಬರು ಪರಸ್ಪರ ಸ್ನೇಹಿತರಾಗಿದ್ದಾರೆ.