Saturday, 10th May 2025

Trump-Netanyahu: ನೆತನ್ಯಾಹು – ಟ್ರಂಪ್‌ ಫೋನ್‌ ಕಾಲ್‌ ಮೂಲಕ ಮಾತುಕತೆ; ಗಾಜಾ ಯುದ್ಧ, ಸಿರಿಯಾ ಬಗ್ಗೆ ಚರ್ಚೆ

Benjamin Netanyahu

ಜೆರುಸಲೆಂ: ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಹಾಗೂ ನೂತನ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗೆ ಶನಿವಾರ ಸಂಜೆ ಫೋನ್‌ ಕರೆ(Trump-Netanyahu) ಮೂಲಕ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಫೋನ್‌ನಲ್ಲಿ ಗಾಜಾದಲ್ಲಿನ ಯುದ್ಧ ಮತ್ತು ಸಿರಿಯಾದ ಮೇಲೆ ಇಸ್ರೇಲ್‌ ನಿಲುವು ಕುರಿತು ಚರ್ಚಿಸಿದ್ದಾರೆ.

ಇದು ಸ್ನೇಹಪರ ಮಾತುಕತೆಯಾಗಿದೆ ಇಸ್ರೇಲ್‌ ಪ್ರಧಾನಿ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಅವರು ಗಾಜಾದಲ್ಲಿ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ವಿಜಯದ ಅಗತ್ಯತೆ ಮತ್ತು ಸಿರಿಯಾದ ಬಗ್ಗೆ ಅದರ ನಿಲುವಿನ ಬಗ್ಗೆ ಮಾತನಾಡಿದರು . ಯುದ್ಧಪೀಡಿತ ಗಾಜಾದಲ್ಲಿರುವ ಯುದ್ಧಕೈದಿಗಳ ಬಿಡುಗಡೆ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಬೆಂಜಮಿನ್ ನೆತನ್ಯಾಹು ನನ್ನ ಸ್ನೇಹಿತ, ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಫೋನ್‌ ಕರೆ ಮೂಲಕ ಮಾತನಾಡಿದ್ದೇನೆ. ಇಸ್ರೇಲ್‌ನ ವಿಜಯವನ್ನು ಪೂರ್ಣಗೊಳಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೇವೆ ಮತ್ತು ನಮ್ಮ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ನಾವು ಮಾಡುತ್ತಿರುವ ಪ್ರಯತ್ನಗಳ ಬಗ್ಗೆಯೂ ನಾವು ಸುದೀರ್ಘವಾಗಿ ಮಾತನಾಡಿದ್ದೇವೆ. ಎಂದು ಹೇಳಿದ್ದಾರೆ.

ಗಾಜಾ ಒತ್ತೆಯಾಳುಗಳ ಬಗ್ಗೆ ಮಾತನಾಡಿದ ಪ್ರಧಾನಿ ಗಾಜಾದಲ್ಲಿರುವ ನಮ್ಮವರನ್ನು ಮರಳಿ ದೇಶಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಿರಿಯಾದ ಸಂಘರ್ಷದಲ್ಲಿ ಆಸಕ್ತಿ ಇಲ್ಲ

ಇದೇ ವೇಳೆ ಸಿರಿಯಾದ ಬಗ್ಗೆ ಮತ್ತೊಂದು ದೇಶದ ಸಂಘರ್ಷದಲ್ಲಿ ಇಸ್ರೇಲ್‌ಗೆ ಯಾವುದೇ ಆಸಕ್ತಿಯಿಲ್ಲ. ಆದರೆ ನಮ್ಮ ನೆಲದ ಆಂತರಿಕ ಭದ್ರತೆಯ ವಿಷಯಕ್ಕೆ ಬಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಸಿರಿಯಾದ ಆಂತರಿಕ ವ್ಯವಹಾರಗಳಲ್ಲಿ ಇಸ್ರೇಲ್ ಮಧ್ಯಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಆದರೆ ಪ್ರಸ್ತುತ ಆಡಳಿತವು ಇರಾನ್‌ಗೆ ಸಿರಿಯಾದಲ್ಲಿ ತನ್ನನ್ನು ಮರುಸ್ಥಾಪಿಸಲು ಅಥವಾ ಹೆಜ್ಬೊಲ್ಲಾಗೆ ಶಸ್ತ್ರಾಸ್ತ್ರಗಳನ್ನು ವರ್ಗಾಯಿಸಲು ಅನುಮತಿಸಿದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Israel Airstrike: ಇರಾನ್‌ ಮೇಲೆ ಇಸ್ರೇಲ್‌ ಎರಡನೇ ಏರ್‌ಸ್ಟ್ರೈಕ್‌; ಇಲ್ಲಿದೆ ಭೀಕರ ದಾಳಿಯ ವಿಡಿಯೋ