ಸುನ್ನಿ ಸಮುದಾಯದ ಉಗ್ರರು ಹೈಸ್ಕೂಲ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ಪ್ರದೇಶದಲ್ಲಿ ಒಟ್ಟು ಮೂರು ಬಾಂಬ್ ಸ್ಫೋಟಗೊಂಡಿದ್ದು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಕಾಬೂಲ್ ಕಮಾಂಡರ್ ವಕ್ತಾರ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಸುತ್ತಮುತ್ತ ಶಿಯಾ ಹಝಾರಾ ಸಮುದಾಯದವರು ವಾಸಿಸುತ್ತಿದ್ದು, ಸಂಪ್ರದಾಯವಾದಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿ ಕೊಂಡು ಸುನ್ನಿ ಉಗ್ರರ ಸಂಘಟನೆ ದಾಳಿ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.