Monday, 12th May 2025

‘ಪಬ್‌ಜಿ’ ಪ್ರಭಾವ: ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ  ‘ಪಬ್‌ಜಿ’ ಪ್ರಭಾವದಿಂದ 14 ವರ್ಷದ ಬಾಲಕ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ್ದಾನೆ.

45 ವರ್ಷ ವಯಸ್ಸಿನ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್, ಅವರ 22 ವರ್ಷದ ಮಗ ತೈಮೂರ್ ಹಾಗೂ 17 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೃತದೇಹಗಳು ಲಾಹೋರ್‌ನ ಕನ್ಹಾ ಪ್ರದೇಶದಲ್ಲಿ ಪತ್ತೆಯಾಗಿದ್ದವು.

ನಹೀದ್ ಮುಬಾರಕ್ ಅವರ 14 ವರ್ಷದ ಪುತ್ರ ಬದುಕಿದ್ದಾನೆ. ಆತನೇ ಕೊಲೆಗಾರ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.

ಪಬ್‌ಜಿ ವ್ಯಸನಿಯಾಗಿದ್ದ ಬಾಲಕ ಆನ್‌ಲೈನ್ ಗೇಮ್‌ ಪ್ರಭಾವದಿಂದ ತಾಯಿ ಮತ್ತು ಸಹೋದರ, ಸಹೋದರಿಯರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿ ದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್‌ಲೈನ್ ಗೇಮ್‌ನಲ್ಲಿ ಕಳೆಯುತ್ತಿದ್ದುದರಿಂದ ಮಾನಸಿಕ ಸಮಸ್ಯೆ ಉಂಟಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಹೀದ್ ವಿವಾಹ ವಿಚ್ಛೇದನ ಪಡೆದ ಮಹಿಳೆಯಾಗಿದ್ದು, ಮಗನನ್ನು ಆಗಾಗ್ಗೆ ಗದರುತ್ತಿದ್ದರು. ಘಟನೆ ನಡೆದ ದಿನ ಕೂಡ ಮಗನನ್ನು ಗದರಿದ್ದರು.