Monday, 12th May 2025

ಬ್ರೆಜಿಲ್‌ ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಚಲನಚಿತ್ರ ಪ್ರದರ್ಶನ..!

ರಿಯೊ ಡಿ ಜನೈರೊ: ಎಲೆಕ್ಟ್ರಾನಿಕ್ ಡಿಸ್ಪ್ಲೇಗಳು ಜಾಹೀರಾತುಗಳು ಮತ್ತು ವಿಮಾನದ ಮಾಹಿತಿಯ ಬದಲಿಗೆ ಅಶ್ಲೀಲ ಚಲನಚಿತ್ರ ಪ್ರದರ್ಶಿಸಿದ್ದು ಬ್ರೆಜಿಲ್‌ನ ರಿಯೊ ಡಿ ಜನೈರೊ ದಲ್ಲಿನ ವಿಮಾನ ನಿಲ್ದಾಣದಲ್ಲಿ ಮುಜುಗರದ ಪರಿಸ್ಥಿತಿ ನಿರ್ಮಾಣ ವಾಯಿತು.

ನಿಲ್ದಾಣ ಪ್ರಾಧಿಕಾರ ಇನ್‌ಫ್ರಾರೋ ಈ ವಿಷಯವನ್ನು ಫೆಡರಲ್ ಪೋಲೀಸ್‌ಗೆ ವರದಿ ಮಾಡಿದೆ. ಸ್ಯಾಂಟೋಸ್ ಡುಮಾಂಟ್ ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಪ್ರದರ್ಶನವು ಹಲವಾರು ಪ್ರಯಾಣಿಕರನ್ನು ಮುಜುಗರಗೊಳಪಡಿಸಿತು. ಅನೇಕ ಜನರು ಈ ಅನಿರೀಕ್ಷಿತ ಬೆಳವಣಿಗೆಯಿಂದ ದಿಗ್ಭ್ರಮೆಗೊಂಡರು. ಇತರರು ತಮ್ಮ ಮಕ್ಕಳನ್ನು ಈ ವೀಡಿಯೋ ವೀಕ್ಷಿಸದಂತೆ ರಕ್ಷಿಸುವಲ್ಲಿ ನಿರತರಾಗಿದ್ದರು.

ಮಾಹಿತಿ ಸೇವೆಗಳನ್ನು ಮತ್ತೊಂದು ಕಂಪನಿಗೆ ಹೊರಗುತ್ತಿಗೆ ನೀಡಲಾಗಿದ್ದು, ಅದಕ್ಕೂ ಸೂಚನೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಸ್ಯೆಯನ್ನು ಪರಿಶೀಲಿಸಲು, ಪ್ರದರ್ಶನ ಮಾಡಿದ ಸ್ಕ್ರೀನ್‌ಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ಆಫ್ ಮಾಡಿದೆ ಎಂದು ಅದು ಹೇಳಿದೆ.