Wednesday, 14th May 2025

ಫಿಲಿಪ್ಪೀನ್ಸ್‌ನಲ್ಲಿ ಸಾಕ್ಷರತೆಯ ಪ್ರಮಾಣ ಶೇ 97ಕ್ಕೆ ಏರಿಕೆ

ಮನಿಲಾ: ದೇಶದ ಸುಸ್ಥಿರ ಅಭಿವೃದ್ಧಿಗೆ ಸಾಕ್ಷರತೆ ನಿರ್ಣಾಯಕ. ಉತ್ತಮ ಶಿಕ್ಷಣ ಪಡೆದ ಮಕ್ಕಳು ಜಾಗತಿಕ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕ ಕೊಡುಗೆ ನೀಡುತ್ತಾರೆ.

ಫಿಲಿಪ್ಪೀನ್ಸ್‌ನಲ್ಲಿ ಸಾಕ್ಷರತೆಯ ಪ್ರಮಾಣವು ಶೇಕಡಾ 97ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ 1.2% ಸುಧಾರಿಸಿದೆ ಎಂದು ಅಲ್ಲಿನ ಅಂಕಿಅಂಶ ನೀಡಿದೆ.

2020ರ ಜನಸಂಖ್ಯೆ ಮತ್ತು ವಸತಿ ಗಣತಿ ಸಮೀಕ್ಷೆಯ ಫಲಿತಾಂಶಗಳನ್ನು ಉಲ್ಲೇಖಿಸಿ ಫಿಲಿಪ್ಪೀನ್ಸ್‌ ಅಂಕಿಅಂಶ ಪ್ರಾಧಿಕಾರ ನೀಡಿದ ಮಾಹಿತಿಯಂತೆ, ಐದು ವರ್ಷಕ್ಕಿಂತ ಮೇಲ್ಪಟ್ಟ 97.6 ಮಿಲಿಯನ್ ಫಿಲಿಪ್ಪೀನ್ಸ್‌ ಜನರಲ್ಲಿ 94.6 ಮಿಲಿಯನ್ ಸಾಕ್ಷರಸ್ಥರಾಗಿ ದ್ದಾರೆ. ಅವರು ದೇಶದ ಯಾವುದೇ ಭಾಷೆ ಅಥವಾ ಉಪಭಾಷೆಗಳಲ್ಲಿ ಸರಳ ಸಂದೇಶ ವನ್ನು ಓದುವುದು ಮತ್ತು ಬರೆಯ ಬಲ್ಲರು ಎಂದು ತಿಳಿಸಿದೆ.

ಮೆಟ್ರೋ ಮನಿಲಾ ಪ್ರದೇಶವು 98.9% ಅತ್ಯಧಿಕ ಸಾಕ್ಷರತೆ ದರ ಹೊಂದಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಮಿಂಡನಾ ಒಹಾದ್‌ನಲ್ಲಿನ ಬ್ಯಾಂಗ್‌ಸಮೊರೊ ಸ್ವಾಯತ್ತ ಪ್ರದೇಶವು 86.4 ಪ್ರತಿಶತದಷ್ಟು ಕಡಿಮೆ ಸಾಕ್ಷರತೆಯ ದರ ಹೊಂದಿದೆ. ಹಾಗೆಯೇ, 2020ರಲ್ಲಿ ಸಾಕ್ಷರತೆಯ ಪ್ರಮಾಣವು ಮಹಿಳೆಯರಲ್ಲಿ (ಶೇಕಡಾ 97.1) ಸ್ವಲ್ಪ ಹೆಚ್ಚಾಗಿದೆ, ಪುರುಷರ ಸಾಕ್ಷರತೆ ಶೇಕಡಾ (96.8) ಇದೆ. 2015 ರಲ್ಲಿದ್ದ ಸ್ಥಿತಿಯೇ ಈಗಲೂ ಮುಂದಿವರೆದಿದೆ ಎಂದು ಡೇಟಾದಿಂದ ತಿಳಿಯ ಬಹುದು.

2011ರ ಜನಗಣತಿಯ ಪ್ರಕಾರ, ಭಾರತದ ಸಾಕ್ಷರತೆಯ ಪ್ರಮಾಣ ಶೇಕಡಾ 74.04ರಷ್ಟಿತ್ತು. ಅಗ್ರ ಐದು ಸಾಕ್ಷರತೆ ಹೊಂದಿದ ರಾಜ್ಯಗಳೆಂದರೆ ಕೇರಳ (ಶೇ. 93.91), ಲಕ್ಷದ್ವೀಪ (ಶೇ. 92.28), ಮಿಜೋರಾಂ (ಶೇ. 91.5), ತ್ರಿಪುರ (ಶೇ. 87.75) ಮತ್ತು ಗೋವಾ (ಶೇ. 87.40). ಹಾಗೆಯೇ, ಭಾರತವು 313 ಮಿಲಿಯನ್ ಅನಕ್ಷಸ್ಥರನ್ನು ಹೊಂದಿದ್ದು, ಅವರಲ್ಲಿ ಶೇ. 59ರಷ್ಟು ಮಹಿಳೆಯರಿದ್ದಾರೆ.

Leave a Reply

Your email address will not be published. Required fields are marked *