Wednesday, 14th May 2025

ಹಾಲಿವುಡ್ ಹಿರಿಯ ನಿರ್ದೇಶಕ ಪೀಟರ್ ಬೋಗ್ಡಾನೋವಿಚ್ ಇನ್ನಿಲ್ಲ

peter bogdanovich

ಲಾಸ್ ಏಂಜಲೀಸ್: ಹಾಲಿವುಡ್‌ನ ಸ್ವರ್ಣಯುಗದ ಚಾಂಪಿಯನ್ ಎಂದು ಕರೆಯಲ್ಪಡುವ ಪೀಟರ್ ಬೋಗ್ಡಾನೋವಿಚ್( 82 )ನಿಧನರಾಗಿದ್ದಾರೆ.

ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಯಿಂದ ಮರಣ ಹೊಂದಿದ್ದಾರೆ ಎಂದು ಅವರ ಪುತ್ರಿ ಅಂಟೊನಿಯಾ ಬೊಗ್ದನೋವಿಚ್ ತಿಳಿಸಿದ್ದಾರೆ.

ಪೀಟರ್ ಬೊಗ್ಡಾನೋವಿಚ್ ಆಸ್ಕರ್ ಪ್ರಶಸ್ತಿ ನಾಮಾಂಕಿತರೂ ಸಹ ಆಗಿದ್ದರು. ಹಳೆಹಾಲಿವುಡ್ ಮತ್ತು ಹೊಸ ಹಾಲಿವುಡ್ ಚಿತ್ರಗಳ ಸೇತುವೆಯಾಗಿ ಕೆಲಸ ಮಾಡಿದ್ದ ಚಿತ್ರ ನಿರ್ದೇಶಕ ಇವರಾಗಿದ್ದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ದ ಲಾಸ್ಟ್ ಪಿಕ್ಚರ್ ಶೋ, ವಾಟ್ಸಪ್ ಡಾಕ್ಟರ್, ಪೇಪರ್ ಮೂನ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದುç . ಅದೇ ರೀತಿ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.