Wednesday, 14th May 2025

ದುಷ್ಕರ್ಮಿಗಳಿಂದ ವೈದ್ಯರ ಮೇಲೆ ಗುಂಡು ಹಾರಿಸಿ ಹತ್ಯೆ

ಕರಾಚಿ: ಪಾಕಿಸ್ತಾನದಲ್ಲಿ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹಿಂದೂ ವೈದ್ಯರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದೆ.

ಕರಾಚಿ ಮುನ್ಸಿಪಲ್ ಕಾರ್ಪೊರೇಶನ್‌ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ.ಬೀರ್ಬಲ್ ಜೆನಾನಿ ಅವರನ್ನು ಲಿಯಾರಿ ಎಕ್ಸ್‌ಪ್ರೆಸ್‌ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ದಾಳಿಯಲ್ಲಿ ಆತನ ಸಹಾಯಕ ಕುರಾತ್-ಉಲ್-ಐನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಕರಾಚಿ ಮುನ್ಸಿಪಲ್ ಕಾರ್ಪೊರೇಶನ್‌ನ ಮಾಜಿ ನಿರ್ದೇಶಕ ಮತ್ತು ನೇತ್ರಶಾಸ್ತ್ರಜ್ಞರನ್ನು ಹತ್ಯೆ ಮಾಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರೊಬ್ಬರನ್ನು ಟಾರ್ಗೆಟ್ ಮಾಡಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಬಯಲಿಗೆ ಬಂದಿದೆ.

ಈ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಈ ತಿಂಗಳ ಆರಂಭ ದಲ್ಲಿ, ಪಾಕಿಸ್ತಾನದ ಹೈದರಾಬಾದ್‌ನಲ್ಲಿ ವೈದ್ಯರಾಗಿದ್ದ ಧರಮ್ ದೇವ್ ರಾಠಿ ಅವರನ್ನು ಅವರ ಡ್ರೈವರ್‌ನಿಂದ ಅವರ ಮನೆಯೊಳಗೆ ಕೊಲೆ ಮಾಡಿಸಲಾಗಿತ್ತು. ಚಾಲಕ ಚಾಕುವಿನಿಂದ ವೈದ್ಯರ ಕತ್ತು ಸೀಳಿದ್ದ ಎಂದು ಪೊಲೀಸರು ತಿಳಿಸಿದ್ದರು.