ಫ್ರಾನ್ಸ್: ಇಡೀ ಜಗತ್ತೇ ಹೊಸವರ್ಷದ ಹೊಸ್ತಿಲಲ್ಲಿದೆ. ಸಂಭ್ರಮದಿಂದ ಹೊಸವರ್ಷವನ್ನು ಬರಮಾಡಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ನಾಸ್ಟ್ರಾಡಾಮಸ್(Nostradamus) ಭವಿಷ್ಯವಾಣಿಯೊಂದು ಇದೀಗ ಜಗತ್ತಿಗೆ ಶಾಕ್ ಕೊಟ್ಟಿದೆ. 2025ರ ವರ್ಷ ಜಗತ್ತಿಗೆ ಹೇಗೆ ಇರುತ್ತದೆ ಮತ್ತು 2025ರಲ್ಲಿ ಯಾವ ಅಹಿತಕರ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ನಾಸ್ಟ್ರಾಡಾಮಸ್(Nostradamus) ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. 2025ರಲ್ಲಿ ಮತ್ತೆ ಪ್ಲೇಗ್(Plague)ನಂತಹ ರೋಗ ಜಗತ್ತನ್ನು ಬಾಧಿಸುತ್ತದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಭೂಮಿಯೊಂದಿಗೆ ಕ್ಷುದ್ರಗ್ರಹದ (Asteroid) ಘರ್ಷಣೆಯಾಗಲಿದ್ದು, ಅಪಾಯಕಾರಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಸಾವಿರಾರು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ(Nostradamus Prediction).
ಪ್ರಸಿದ್ಧ ಫ್ರೆಂಚ್(French) ಭವಿಷ್ಯಕಾರ ನಾಸ್ಟ್ರಾಡಾಮಸ್ ತಮ್ಮ ನಿಖರ ಭವಿಷ್ಯವಾಣಿಗಳಿಂದ ಖ್ಯಾತಿಯಾಗಿದ್ದಾರೆ. ಜರ್ಮನಿಯಲ್ಲಿ ಹಿಟ್ಲರ್ನ ಉದಯದಿಂದ ಹಿಡಿದು ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಹತ್ಯೆಯವರೆಗೂ ಅವರು ನುಡಿದ ಹಲವು ಭವಿಷ್ಯ ಅಕ್ಷರಶಃ ಸತ್ಯವಾಗಿದೆ. ಹಾಗಾಗಿ ನಾಸ್ಟ್ರಾಡಾಮಸ್ ಭವಿಷ್ಯ ಎಂದರೆ ಜಗತ್ತಿನ ಜನರು ಹೆದರುತ್ತಾರೆ. 2024 ಮುಗಿಯುತ್ತಿದ್ದಂತೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ಬಹು ಚರ್ಚಿತ ವಿಷಯವಾಗಿದ್ದು, ಹೊಸ ವರ್ಷದಲ್ಲಿ ಅಂದರೆ 2025ರಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳ ಬಗ್ಗೆ ಅವರು ಬಹು ಹಿಂದೆಯೇ ಹೇಳಿರುವುದರಿಂದ ಜನರು ಈಗ ಭಯಭೀತರಾಗಿದ್ದಾರೆ.
ಪ್ಲೇಗ್ ಮತ್ತು ಯುದ್ಧ
ಹೊಸ ವರ್ಷದಲ್ಲಿ ಭಯಾನಕ ಯುದ್ಧಗಳು ನಡೆಯಲಿವೆ. ಇಂಗ್ಲೆಂಡ್ ದೇಶವು ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಚೀನ ಪ್ಲೇಗ್ನಂತಹ ರೋಗವು ಜಗತ್ತನ್ನು ಏಕಾಏಕಿ ಬಾಧಿಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಅವರು ನುಡಿದಿದ್ದ COVID-19 ಸಾಂಕ್ರಾಮಿಕ ಭವಿಷ್ಯವು ನಿಜವಾಗಿರುವುದರಿಂದ ಈ ಭವಿಷ್ಯವೂ ನಿಜವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಜನರು ಆತಂಕಗೊಂಡಿದ್ದಾರೆ.
ಭೂಮಿಗೆ ಕ್ಷುದ್ರಗ್ರಹ ಘರ್ಷಣೆ?
ನಾಸ್ಟ್ರಾಡಾಮಸ್ ನುಡಿದಿರುವ ಹೊಸ ವರ್ಷದ ಭವಿಷ್ಯದಿಂದ ಅಷ್ಟಾಗಿ ನಷ್ಟವಾಗುವುದಿಲ್ಲವಾದರೂ, 2025 ರ ವರ್ಷದಲ್ಲಿ ಭೂಮಿಯೊಂದಿಗೆ ಕ್ಷುದ್ರಗ್ರಹ ಘರ್ಷಣೆಯಾಗಲಿದ್ದು, ಗ್ರಹವು ತೀರಾ ಅಪಾಯಕಾರಿ ಸಾಮೀಪ್ಯದಲ್ಲಿ ಬರಬಹುದು ಎನ್ನುವ ಭವಿಷ್ಯವಾಣಿ ಭಯಗೊಳಿಸಿದೆ. ತಜ್ಞರು ಹೇಳುವಂತೆ ಭವಿಷ್ಯವು ಭೂಮಿಯಿಂದ ಜೀವಿಗಳ ನಾಶವನ್ನು ಸೂಚಿಸುತ್ತದೆಯಾದರೂ, ಕ್ಷುದ್ರಗ್ರಹಗಳು ಗ್ರಹದ ಹತ್ತಿರ ಬರುವುದು ಹೊಸ ವಿದ್ಯಮಾನವೇನಲ್ಲ. ಪ್ರತಿ ವರ್ಷ ನೂರಾರು ಕ್ಷುದ್ರಗ್ರಹಗಳು ಭೂಮಿಯನ್ನು ದಾಟುತ್ತವೆ ಮತ್ತು ಅವುಗಳಲ್ಲಿ ಹೆಚ್ಚಿನವು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತವೆ ಹಾಗಾಗಿ ಭಯಪಡುವುದು ಬೇಡ ಎಂದು ಹೇಳಿದ್ದಾರೆ.
ಇನ್ನು ಮತ್ತೊರ್ವ ಪ್ರಸಿದ್ಧ ಭವಿಷ್ಯಕಾರ ಬಾಬಾ ವಂಗಾ ಅವರು ಕೂಡ ಇದೇ ರೀತಿಯಲ್ಲಿ ಭವಿಷ್ಯವಾಣಿ ನುಡಿದಿದ್ದಾರೆ. ರಾಜಮನೆತನಗಳ ಸರ್ವನಾಶ, ಭೀಕರ ಕಾಯಿಲೆ ಸೇರಿ ಜಗತ್ತಿನ ಬಹುತೇಕ ವಿಚಾರಗಳ ಬಗ್ಗೆ ಬಹಳಷ್ಟು ಹಿಂದೆಯೇ ಕರಾರುವಾಕ್ಕಾಗಿ ಭವಿಷ್ಯ ನುಡಿದಿದ್ದಾರೆ. ಯುರೋಪ್ನಲ್ಲಿ 2025ರಲ್ಲಿ ಭೀಕರ ಯುದ್ಧ ನಡೆಯುವುದನ್ನು ಜಗತ್ತು ಕಾಣುತ್ತದೆ ಎಂದು ಭವಿಷ್ಯ ಹೇಳಿದ್ದಾರೆ. ಬಾಬಾ ವಂಗಾ ನುಡಿದ ಭವಿಷ್ಯದ ಪ್ರಕಾರ, ರಷ್ಯಾ-ಉಕ್ರೇನ್ ಯುದ್ಧದ ಹೊರತಾಗಿ ಹೊಸದಾಗಿ 2 ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಲಿದೆ. ಇದು ಅಪಾರ ಪ್ರಮಾಣದ ಹಾನಿ ಹಾಗೂ ಮನುಷ್ಯರು ಸಾವನ್ನಪ್ಪಲಿದ್ದಾರೆ ಎನ್ನಲಾಗಿದೆ.
ಈ ನಡುವೆ ನಾಸ್ಟ್ರಾಡಾಮಸ್ ಕೂಡ ಇಂಥದ್ದೇ ಭವಿಷ್ಯ ನುಡಿದಿರುವುದರಿಂದ, 2025ರಲ್ಲಿ ಯುರೋಪ್ನಲ್ಲಿ ಅತೀ ಭೀಕರ ಯುದ್ಧ ನಡೆಯಲಿದ್ದು, ಶತ್ರುಗಳಿಗಿಂತಲೂ ಕ್ರೂರವಾದ ಪ್ಲೇಗ್ನಂತಹ ಮಹಾಮಾರಿ ಮರುಕಳಿಸಲಿದೆ ಎನ್ನುವ ಮೂಲಕ ಜನರಲ್ಲಿ ಭಯ ಹುಟ್ಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Narendra Modi: ಜಾಗತಿಕ ಸಮಸ್ಯೆಗಳಿಗೆ ಯುದ್ಧ ಭೂಮಿಯಿಂದ ಪರಿಹಾರ ದೊರೆಯದು; ನರೇಂದ್ರ ಮೋದಿ