Saturday, 17th May 2025

ಡೆಸ್ಮಂಡ್ ಟುಟು ನಿಧನಕ್ಕೆ ಮೋದಿ ತೀವ್ರ ಸಂತಾಪ

#DesmondTuTu

ಜೋಹಾನ್ಸ್’ಬರ್ಗ್: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ದ ಹೋರಾಡಿದ್ದ ಡೆಸ್ಮಂಡ್ ಟುಟು ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಟ್ವೀಟ್‌ ಮೂಲಕ ಸಂತಾಪ ವ್ಯಕ್ತ ಪಡಿಸಿದ ಪ್ರಧಾನಿ ಮೋದಿ, ‘ಅವರು ಜಾಗತಿಕವಾಗಿ ಅಸಂಖ್ಯಾತ ಜನರಿಗೆ ಮಾರ್ಗದರ್ಶಿ ಬೆಳಕಾಗಿದ್ದರು. ಮಾನವ ಘನತೆ ಮತ್ತು ಸಮಾನತೆಗೆ ಅವರು ನೀಡಿದ ಒತ್ತು ಅವಿಸ್ಮರಣೀಯ’ ಎಂದಿದ್ದಾರೆ.

ದಣಿವರಿಯದ ಕಾರ್ಯಕರ್ತ ಡೆಸ್ಮಂಡ್ ಟುಟು, ತಮ್ಮ ದೇಶದಲ್ಲಿ ಬಿಳಿ ಅಲ್ಪಸಂಖ್ಯಾತರ ಆಳ್ವಿಕೆ ಯನ್ನು ಎದುರಿಸಿದ್ದಕ್ಕಾಗಿ 1984 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ.