ರುವಾಂಡಾ: ಎಂಪಾಕ್ಸ್ ಮತ್ತು ಒರೊಪೌಚೆ (mpox and Oropouche) ಜ್ವರದೊಂದಿಗೆ ಮಾರ್ಬರ್ಗ್ (Marburg Virus) ಅಥವಾ ಬ್ಲೀಡಿಂಗ್ ಐ (bleeding eye) ವೈರಲ್ ಹರಡುವಿಕೆ ಬಗ್ಗೆ 17 ದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಮಾರ್ಬರ್ಗ್ ಅನ್ನು ‘ಬ್ಲೀಡಿಂಗ್ ಐ’ ವೈರಸ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಅದು ಅದರ ರೋಗ ಲಕ್ಷಣವಾಗಿದೆ. ಈ ಸೋಂಕಿಗೆ ಈಗಾಗಲೇ ರುವಾಂಡಾದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ನೂರಾರು ಮಂದಿಗೆ ಈ ಸೋಂಕು ತಗುಲಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಬ್ಲೀಡಿಂಗ್ ಐಸ್ ಎಂದರೇನು?
ಮಾರ್ಬರ್ಗ್ ವೈರಸ್ ನಿಂದ ಬರುವ ಈ ಕಾಯಿಲೆ ವೈರಲ್ ಹೆಮರಾಜಿಕ್ ಜ್ವರವನ್ನು ಉಂಟು ಮಾಡುತ್ತದೆ. ಇದು ಕೆಲವೊಮ್ಮೆ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಎಬೋಲಾ ಜಾತಿಗೆ ಸೇರಿದ್ದು, ಬಾವಲಿಗಳುಗಳಿಂದ ಹುಟ್ಟಿಕೊಂಡಿದೆ. ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳಾದ ರಕ್ತ, ಲಾಲಾರಸ ಅಥವಾ ಮೂತ್ರದೊಂದಿಗೆ ನೇರ ಸಂಪರ್ಕದ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.

ಲಕ್ಷಣಗಳು
ಸೋಂಕಿತ ವ್ಯಕ್ತಿಗಳಲ್ಲಿ ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ವಾಂತಿ ಮತ್ತು ಅತಿಸಾರ ಉಂಟಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ ಇದು ಆಂತರಿಕ ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಆಘಾತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಸಾವು ಕೂಡ ಉಂಟಾಗಬಹುದು.
ವೈದ್ಯಕೀಯ ಆರೈಕೆಯ ಗುಣಮಟ್ಟವನ್ನು ಅವಲಂಬಿಸಿ ಮರಣ ಪ್ರಮಾಣ ಶೇ. 24ರಿಂದ 88ರವರೆಗೆ ಇದೆ.
ರುವಾಂಡದಲ್ಲಿ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ಈ ವೈರಸ್ ಪತ್ತೆಯಾಗಿತ್ತು. ರೋಗಲಕ್ಷಣಗಳು ಮತ್ತು ಪ್ರಸರಣ ಎರಡರಲ್ಲೂ ಎಬೋಲಾಗೆ ಹೋಲುವ ಇದು ಏಕಾಏಕಿ ಉಲ್ಬಣವಾಗುವುದನ್ನು ತಡೆಯಲು ಕಟ್ಟುನಿಟ್ಟಾದ ನಿಯಂತ್ರಣ ಕ್ರಮ ಅಗತ್ಯವಾಗಿದೆ.
ಜ್ವರ, ಶೀತ, ತೀವ್ರ ತಲೆನೋವು, ಕೆಮ್ಮು, ಸ್ನಾಯು ಅಥವಾ ಕೀಲು ನೋವು, ನೋಯುತ್ತಿರುವ ಗಂಟಲು ಮತ್ತು ದದ್ದುಗಳಂತಹ ‘ಬ್ಲೀಡಿಂಗ್ ಐ’ ವೈರಸ್‌ನ ಲಕ್ಷಣಗಳು ಎಬೋಲಾವನ್ನು ಹೋಲುತ್ತವೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಪ್ರಕಾರ ತೀವ್ರ ತರದ ರೋಗಲಕ್ಷಣವಿದ್ದರೆ ರೋಗಿಗಳಲ್ಲಿ ಹೊಟ್ಟೆ ಅಥವಾ ಎದೆ ನೋವು, ವಾಂತಿ, ಅತಿಸಾರ, ತಲೆತಿರುಗುವಿಕೆ, ತೂಕ ನಷ್ಟ, ರಕ್ತಸಿಕ್ತ ಮಲ, ವಾಂತಿ, ಮೂಗು, ಕಣ್ಣು, ಬಾಯಿ ಅಥವಾ ಯೋನಿಯಿಂದ ರಕ್ತಸ್ರಾವ ಉಂಟಾಗುತ್ತದೆ.
Viral Video: ರಾಮಾಯಣ ನಾಟಕ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಹಂದಿಯನ್ನು ಕೊಂದು ಹಸಿ ಮಾಂಸ ತಿಂದ ನಟ! ವಿಡಿಯೊ ಇದೆ
ಮಾರ್ಬರ್ಗ್ ವೈರಸ್ ಗೆ ಚಿಕಿತ್ಸೆ
ಮಾರ್ಬರ್ಗ್ ವೈರಸ್‌ಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ರೋಗಲಕ್ಷಣ ನಿರ್ವಹಣೆಯಿಂದ ರೋಗವನ್ನು ನಿಯಂತ್ರಿಸಲು ಸಾಧ್ಯ. ಇದಕ್ಕೆ ಲಸಿಕೆ ಹುಡುಕುವ ಪ್ರಯತ್ನ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಸಾಮಾಜಿಕ ಅಂತರ, ಪ್ರತ್ಯೇಕವಾಗಿ ವಾಸಿಸುವುದು, ನೈರ್ಮಲ್ಯ ಅಭ್ಯಾಸಗಳಿಂದ ವೈರಸ್ ಹರಡುವಿಕೆಯನ್ನು ತಡೆಯಬಹುದು.