Tuesday, 13th May 2025

ಸಿಡ್ನಿಯಲ್ಲಿ 4 ತಿಂಗಳ ಸುದೀರ್ಘ ಲಾಕ್‌ಡೌನ್ ಅಂತ್ಯ

ಸಿಡ್ನಿ: ಡೆಲ್ಟಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿ ವಿಧಿಸಲಾಗಿದ್ದ, 4 ತಿಂಗಳ ಸುದೀರ್ಘ ಲಾಕ್‌ ಡೌನ್ ಕೊನೆಗೂ ಅಂತ್ಯಗೊಂಡಿದೆ.

ಸಿಡ್ನಿಯಲ್ಲಿ ಮಾರ್ಚ್ ತಿಂಗಳಲ್ಲಿ ಡೆಲ್ಟಾ ರೂಪಾಂತರಿ ಪ್ರಕರಣಗಳ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಲಾಕ್‌ ಡೌನ್ ಘೋಷಿಸಲಾಗಿತ್ತು.

16 ವರ್ಷ ಮೇಲ್ಪಟ್ಟ ಶೇ.70 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಲಸಿಕೆ ಪ್ರಮಾಣಪತ್ರ ತೋರಿಸಿದರೆ ಮಿಡ್‌ ನೈಟ್ ಪಬ್, ರೆಸ್ಟೋರೆಂಟ್‌ ಹಾಗೂ ಕೆಫೆಗಳಿಗೆ ತೆರಳಲು ಅವಕಾಶ ನೀಡಲಾಗುತ್ತದೆ. ಸಿಡ್ನಿಯಲ್ಲಿ ಲಾಕ್ ಡೌನ್ ಹೇರಲಾದ ಬೆನ್ನಲ್ಲೇ ಮೆಲ್ಬರ್ನ್ ನಗರದಲ್ಲೂ ಕೂಡ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಮೆಲ್ಬರ್ನ್ ನಗರದ 1.2 ಕೋಟಿ ಜನರಿಗೆ ಮನೆ ಬಿಟ್ಟು ಹೊರಬರದಂತೆ ಆದೇಶ ಹೊರಡಿಸಲಾಗಿದೆ.

ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಆಸ್ಟ್ರೇಲಿಯಾ ’ಕೋವಿಡ್ ಶೂನ್ಯ ನೀತಿ’ಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದೆ.

 

Leave a Reply

Your email address will not be published. Required fields are marked *