Sunday, 11th May 2025

Israel Airstrike: ಇಸ್ರೇಲ್‌ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ? ಫ್ರಾನ್ಸ್‌ ಅಧ್ಯಕ್ಷನ ವಿರುದ್ಧ ನೆತನ್ಯಾಹು ಕೆಂಡಾಮಂಡಲ

Israel strikes

ಬೈರುತ್‌: ಲೆಬನಾನ್‌ ಮೇಲೆ ಇಸ್ರೇಲಿ ಸೇನೆಯ ಭೀಕರ ದಾಳಿ(Israel Airstrike)ಗೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಖಂಡನೆ ವ್ಯಕ್ತಪಡಿಸಿದ್ದು, ಇಸ್ರೇಲ್‌ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ಕೆರಳಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು(Benjamin Netanyahu) ಮ್ಯಾಕ್ರನ್‌ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ರನ್, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿದೆ. ಯುದ್ಧವು ದ್ವೇಷಕ್ಕೆ ಕಾರಣವಾಗುತ್ತದೆ. ಹೀಗಾಗಿ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿದ್ದೇವೆ. ಗಾಜಾದ ನಂತೆ ಇದೀಗ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ನಡೆಸುತ್ತಿರುವುದು ವಿಷಾದನೀಯ ಎಂದಿದ್ದಾರೆ.

ನೆತಾನ್ಯಾಹು ತಿರುಗೇಟು

ಇನ್ನು ಮ್ಯಾಕ್ರನ್‌ ಹೇಳಿಕೆಯಿಂದ ಕೆರಳಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಟಾಂಗ್‌ ಕೊಟ್ಟಿದ್ದಾರೆ. ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಮ್ಯಾಕ್ರನ್ ಕರೆ ನೀಡುತ್ತಿರುವುದು ನಾಚಿಕೆಗೇಡು ಎಂದು ಹೇಳಿದರು.
“ಇರಾನ್ ನೇತೃತ್ವದ ಅನಾಗರಿಕತೆಯ ಶಕ್ತಿಗಳ ವಿರುದ್ಧ ಇಸ್ರೇಲ್ ಹೋರಾಡುತ್ತಿರುವಾಗ, ಎಲ್ಲಾ ನಾಗರಿಕ ದೇಶಗಳು ಇಸ್ರೇಲ್‌ ಪರವಾಗಿ ದೃಢವಾಗಿ ನಿಲ್ಲಬೇಕು ಎಂದಿದ್ದಾರೆ.

ಇನ್ನೂ ಅಧ್ಯಕ್ಷ ಮ್ಯಾಕ್ರನ್ ಮತ್ತು ಇತರ ಕೆಲವು ಪಾಶ್ಚಿಮಾತ್ಯ ನಾಯಕರು ಈಗ ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ ನೀಡುತ್ತಿದ್ದಾರೆ. ಇದು ನಾಚಿಗೇಡಿನ ಸಂಗತಿ. ಇರಾನ್‌ ಹೆಜ್ಬುಲ್ಲಾ, ಹೌತಿಗಳ ಮೇಲೆ, ಹಮಾಸ್ ಮತ್ತು ಅದರ ಇತರ ಉಗ್ರ ಸಂಘಟನೆಗಳ ಮೇಲೆ ಶಸ್ತ್ರಾಸ್ತ್ರ ನಿರ್ಬಂಧವನ್ನು ಹೇರುತ್ತಿದೆಯೇ? ಖಂಡಿತ ಇಲ್ಲ. ಭಯೋತ್ಪಾದನೆಗೆ ಬೆಂಬಲವಾಗಿ ನಿಂತಿದೆ. ಆದರೆ ಈ ಭಯೋತ್ಪಾದನೆಯನ್ನು ವಿರೋಧಿಸುವ ದೇಶಗಳು ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ ನೀಡುತ್ತವೆ. ಎಂತಹ ನಾಚಿಕೆಗೇಡಿನ ಸಂಗತಿ ಎಂದು ನೆತನ್ಯಾಹು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಇಸ್ರೇಲ್‌ ಶತ್ರುಗಳ ವಿರುದ್ಧ ಏಳು ರಂಗಗಳಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನನ್ನ ಬಳಿ ಸಂದೇಶವಿದೆ. ಇಂದು, ಇಸ್ರೇಲ್‌ ತನ್ನ ಶತ್ರುಗಳ ವಿರುದ್ಧ ಏಳು ರಂಗಗಳಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಅಕ್ಟೋಬರ್ 7 ರಂದು ನಮ್ಮ ಜನರನ್ನು ಕೊಂದ, ಅತ್ಯಾಚಾರ, ಶಿರಚ್ಛೇದ ಮತ್ತು ಸುಟ್ಟು ಹಾಕಿದ ಹಮಾಸ್ ವಿರುದ್ಧ ನಾವು ಗಾಜಾದಲ್ಲಿ ಹೋರಾಡುತ್ತಿದ್ದೇವೆ ಎಂದು ಅವರು ಖಡಕ್‌ ಆಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Airstrike: ಮತ್ತೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ಟಾಪ್‌ ಲೀಡರ್‌ ಉಡೀಸ್‌