Thursday, 15th May 2025

ಸಿದ್ದಿಕಿ ಸೇರಿ ನಾಲ್ವರು ಭಾರತೀಯ ಛಾಯಾಗ್ರಾಹಕರು ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನ

ನ್ಯೂಯಾರ್ಕ್: ಅಫ್ಗಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದ ದಾನಿಶ್‌ ಸಿದ್ದಿಕಿ ಸೇರಿ ನಾಲ್ವರು ಭಾರತೀಯ ಛಾಯಾಗ್ರಾಹಕರು 2022ನೇ ಸಾಲಿನ ‘ಪುಲಿಟ್ಜರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಫೀಚರ್ ಫೋಟೊಗ್ರಫಿ’ ವಿಭಾಗದಲ್ಲಿ ಇವರಿಗೆ ಪ್ರಶಸ್ತಿ ದೊರೆತಿದೆ. ಅದ್ನಾನ್ ಅಬಿದಿ, ಸನಾ ಇರ್ಷಾದ್ ಮಟ್ಟೂ ಹಾಗೂ ಅಮಿತ್ ದವೆ ಅವರು ಪ್ರಶಸ್ತಿಗೆ ಭಾಜನರಾದ ಇತರ ಭಾರತೀಯ ಛಾಯಾಗ್ರಾಹಕರು.

 

‘ಭಾರತದಲ್ಲಿ ಕೋವಿಡ್‌ಗೆ ಸಂಬಂಧಿಸಿ ಇವರು ತೆಗೆದ ಚಿತ್ರಗಳು ಅನ್ಯೋನ್ಯತೆ ಮತ್ತು ವಿನಾಶವನ್ನು ಸಮತೋಲನದಿಂದ ಬಿಂಬಿಸಿವೆ. ಇದಕ್ಕಾಗಿ ಪ್ರಶಸ್ತಿ ನೀಡಲಾಗಿದೆ’ ಎಂದು ಹೇಳಲಾಗಿದೆ.

ಅಫ್ಗಾನಿಸ್ತಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಸಿದ್ದಿಕಿ 2021ರ ಜುಲೈಯಲ್ಲಿ ಹತ್ಯೆಯಾಗಿದ್ದರು. ಇವರಿಗೆ 2018ರಲ್ಲಿಯೂ ‘ಪುಲಿಟ್ಜರ್’ ದೊರೆತಿತ್ತು.