Saturday, 10th May 2025

Human Washing Machine: ನಮ್ಮನ್ನು ಸ್ನಾನ ಮಾಡಿಸಲು ಬರಲಿದೆ ಸೂಪರ್‌ ಯಂತ್ರ!

Human Washing Machine

ನಮ್ಮ ದೇಹ, ಮನಸ್ಸನ್ನು ಉಲ್ಲಾಸಗೊಳಿಸಲು ನಾವು ನಿತ್ಯ ಸ್ನಾನ ಮಾಡುತ್ತೇವೆ. ಕೆಲವರಿಗೆ ಇದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಬೇಸರದ ಕಾರ್ಯವಾಗಿದೆ! ಈಗಾಗಲೇ ಸ್ನಾನಕ್ಕಾಗಿ ಸಾಕಷ್ಟು ಅನುಕೂಲಕರ ಸೌಲಭ್ಯವನ್ನು ನಾವು ಮಾಡಿಕೊಂಡಿದ್ದೇವೆ. ಆದರೆ ಇನ್ನು ಚಿಂತಿಸಬೇಕಿಲ್ಲ. ಬಾತ್ ಟಬ್ ನಲ್ಲಿ ಹೋಗಿ ಕುಳಿತರೆ ಸಾಕು ಯಂತ್ರವೇ (Human Washing Machine) ನಮ್ಮನ್ನು ಸ್ನಾನ ಮಾಡಿಸುತ್ತದೆ!

ಪುರಾತನ ಕಾಲದಲ್ಲಿ ರಾಜ ರಾಣಿಯರನ್ನು ಸ್ನಾನ ಮಾಡಿಸಲೆಂದೇ ಅನೇಕ ದಾಸ ದಾಸಿಯರು ಇದ್ದರು. ಇದರ ಅನುಭವ, ಖುಷಿ ಪಡೆಯಲು ನಾವೇನು ರಾಜ, ರಾಣಿಯರು ಆಗಬೇಕಿಲ್ಲ. ಯಾಕೆಂದರೆ ಈ ಯಂತ್ರವನ್ನು ತಂದರೆ ಸಾಕು. ಇದು ನಮ್ಮನ್ನು ಸಂಪೂರ್ಣ ಸ್ನಾನ ಮಾಡಿಸಿ ಬಿಡುತ್ತದೆ.

ಜಪಾನ್‌ನ ಎಂಜಿನಿಯರ್‌ಗಳು (Japanese Engineers) ‘ಹ್ಯೂಮನ್ ವಾಷಿಂಗ್ ಮೆಷಿನ್ ಆಫ್ ದಿ ಫ್ಯುಚರ್ ‘ ಅಥವಾ ‘ಮಿರೈ ನಿಂಗೆನ್ ಸೆಂಟಕುಕಿ’ (Mirai Ningen Sentakuki) ಅನ್ನು ಅನಾವರಣಗೊಳಿಸಿದ್ದಾರೆ ಇದು ಸಂಪೂರ್ಣ ದೇಹ ಮತ್ತು ಮನಸ್ಸನ್ನು ಸ್ವಚ್ಛಗೊಳಿಸುತ್ತದೆ. ಇದಕ್ಕಾಗಿ ಎಐ ತಂತ್ರಜ್ಞಾನವನ್ನು ಅಳವಡಿಸಲಾಡಿದೆ. ಜೊತೆಗೆ ಹೈಟೆಕ್ ವಾಟರ್ ಜೆಟ್ ಗಳನ್ನು ಸಂಯೋಜಿಸಲಾಗಿದೆ ಎನ್ನುತ್ತಾರೆ ಸಂಶೋಧಕರು.

Human Washing Machine

ಜಪಾನಿನ ಶವರ್ ಹೆಡ್ ಕಂಪನಿ ಒಸಾಕಾದ ಸೈನ್ಸ್ ಕಂ ಇದನ್ನು ಆವಿಷ್ಕಾರ ಮಾಡಿದೆ. ಇದು ಮಾನವನನ್ನು ತೊಳೆಯಲು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಫೈಟರ್ ಜೆಟ್‌ನ ಪಾಡ್ ಅಥವಾ ಕಾಕ್‌ಪಿಟ್‌ನಂತೆ ಕಾಣುವ ಫ್ಯೂಚರಿಸ್ಟಿಕ್ ಯಂತ್ರವನ್ನು ಶೀಘ್ರದಲ್ಲೇ ಜಪಾನ್‌ನ ಒಸಾಕಾ ಕನ್ಸೈ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗುವುದು. ಇಲ್ಲಿ 1,000 ಅತಿಥಿಗಳು ಇದರ ಪರೀಕ್ಷೆ ನಡೆಸಲಿದ್ದಾರೆ ಎಂದು ಕಂಪನಿ ಹೇಳಿದೆ.

ಯಂತ್ರ ಹೇಗೆ ಕೆಲಸ ಮಾಡುತ್ತದೆ?

ಈ ಬಾತ್ ಟಬ್‌ನಲ್ಲಿ ಹೋಗಿ ಕುಳಿತರೆ ಮೊದಲು ಸ್ನಾನಕ್ಕೆ ಸೂಕ್ತವಾಗುವಷ್ಟು ಬೆಚ್ಚಗಿನ ನೀರಿನಿಂದ ಟಬ್ ತುಂಬಲು ಪ್ರಾರಂಭವಾಗುತ್ತದೆ. ಬಳಿಕ ಸಣ್ಣ ಗಾಳಿಯ ಗುಳ್ಳೆಗಳು ಶಕ್ತಿಯುತ ಒತ್ತಡದ ತರಂಗವನ್ನು ಉಂಟುಮಾಡುತ್ತವೆ. ಅದು ಚರ್ಮದ ಮೇಲಿರುವ ಕೊಳೆಯನ್ನು ತೆಗೆದುಹಾಕುತ್ತದೆ.

Human Washing Machine

ಟಬ್‌ನಲ್ಲಿರುವ ವಿಶೇಷ ವ್ಯವಸ್ಥೆಗಳು ಸೂಕ್ತವಾದ ತಾಪಮಾನವನ್ನು ಕಾಪಾಡಿಕೊಳ್ಳುತ್ತದೆ. ಇದರ ಮಾಹಿತಿಯನ್ನು ಒದಗಿಸುತ್ತವೆ. ಅಲ್ಲದೇ ಈ ಯಂತ್ರವು ದೇಹವನ್ನು ಮಾತ್ರವಲ್ಲ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮನಸ್ಸನ್ನು ತೊಳೆಯುತ್ತದೆ. ಇದು ಮಾನವನ ಮನಸ್ಸನ್ನು ಶಾಂತಗೊಳಿಸಿ ಒತ್ತಡದಿಂದ ಮುಕ್ತಗೊಳಿಸುತ್ತದೆ. ಸ್ನಾನದ ಪ್ರಕ್ರಿಯೆ ಇದರಲ್ಲಿ ತ್ವರಿತವಾಗಿ ನಡೆಯುತ್ತದೆ. ಮಾತ್ರವಲ್ಲದೆ ಇದು ದೈಹಿಕ ಮತ್ತು ಮಾನಸಿಕ ಮಾನವನಿಗೆ ಉಲ್ಲಾಸವನ್ನು ನೀಡುತ್ತದೆ ಎನ್ನುತ್ತಾರೆ ಸಂಶೋಧಕರು.

Human Washing Machine

50 ವರ್ಷಗಳ ಹಿಂದೆಯೇ ನಿರ್ಮಾಣ

ಹ್ಯೂಮನ್ ವಾಷಿಂಗ್ ಮೆಷಿನ್‌ನ ಮೊದಲ ಯಂತ್ರವನ್ನು 50 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತು. ಇದನ್ನು ಮೊದಲ ಬಾರಿಗೆ 1970ರಲ್ಲಿ ಸ್ಯಾನ್ಯೊ ಎಲೆಕ್ಟ್ರಿಕ್ ಕಂ. ಪ್ಯಾನಾಸೋನಿಕ್ ಹೋಲ್ಡಿಂಗ್ಸ್ ಕಾರ್ಪೊರೇಷನ್ ನಿರ್ಮಿಸಿತ್ತು. ಜಪಾನ್ ವರ್ಲ್ಡ್ ಎಕ್ಸ್‌ಪೊಸಿಷನ್‌ನಲ್ಲಿ ಪ್ರದರ್ಶಿಸಲಾಗಿತ್ತು. ಇದು ಬಿಸಿ ನೀರು, ಸೂಕ್ಷ್ಮ ಬಬಲ್ ಗಳು, ಪ್ಲಾಸ್ಟಿಕ್ ಮಸಾಜ್ ಬಾಲ್‌ಗಳನ್ನು ಒಳಗೊಂಡಿತ್ತು. ಆದರೆ ಇದು ಕೆಲವೊಂದು ಕಾರಣಗಳಿಂದ ಮಾರುಕಟ್ಟೆಗೆ ಬರಲಿಲ್ಲ.

Model Ravena Hanniely: ಮತ್ತೊಮ್ಮೆ ವರ್ಜಿನ್‌ ಆಗೋಕೆ ಈ ರೂಪದರ್ಶಿ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತೇ?

ಈಗ ಹೊಸದಾಗಿ ಅನಾವರಣಗೊಳಿಸಲಾದ ಹ್ಯೂಮನ್ ವಾಷಿಂಗ್ ಮೆಷಿನ್ ವಿಶ್ವದ ಗಮನ ಸೆಳೆದಿದೆ. ಇದು ಸಾರ್ವಜನಿಕ ಖರೀದಿಗೆ ಯಾವಾಗ ಲಭ್ಯವಾಗಬಹುದು, ಅದಕ್ಕೆ ಎಷ್ಟು ವೆಚ್ಚವಾಗಬಹುದು ಎಂಬುದನ್ನು ಇನ್ನು ಕಂಪೆನಿ ದೃಢಪಡಿಸಿಲ್ಲ.