Saturday, 10th May 2025

ಕ್ರೀಡಾ ಪೆವಿಲಿಯನ್‌ನಲ್ಲಿ ಹಿಂದೂ ದೇವಾಲಯ ಯೋಜನೆಗೆ ಅನುಮೋದನೆ

ಲಂಡನ್: ಪಾಳುಬಿದ್ದ ಕ್ರೀಡಾ ಪೆವಿಲಿಯನ್‌ನಲ್ಲಿ ಕೊಠಡಿಗಳನ್ನು ಹಿಂದೂ ದೇವಾ ಲಯವನ್ನಾಗಿ ಪರಿವರ್ತಿಸುವ ಯೋಜನೆಗೆ ಮಧ್ಯ ದಕ್ಷಿಣ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಸಿಟಿ ಕೌನ್ಸಿಲ್​ ಅನುಮೋದನೆ ನೀಡಿದೆ.

ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಂತರಿಕ ವಿನ್ಯಾಸದ ಯೋಜನೆಗಳನ್ನು ಸಲ್ಲಿಸುವುದು ಬಾಕಿಯಿದೆ. ಈ ಹೊಸ ರಚನೆಯ ದೇವಾಲಯದ ಕಟ್ಟಡದಲ್ಲಿ ಪೂಜಾ ಸ್ಥಳಕ್ಕೆ ಮತ್ತು ಸಮುದಾಯ ಕೂಟಗಳಿಗಾಗಿ ಎರಡು ಸಭಾಂಗಣಗಳನ್ನು ನಿರ್ಮಿಸ ಲಾಗುತ್ತದೆ.

ಕೋರ್ಟ್ ಪ್ಲೇಸ್ ಫಾರ್ಮ್‌ನಲ್ಲಿ ದೇವಾಲಯ ಕೇಂದ್ರ ನಿರ್ಮಿಸಲು ಉತ್ಸುಕನಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಹೆಮ್ಮೆಯಾಗುತ್ತಿದೆ ಎಂದು ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್‌ನ ಸಂಸ್ಥಾಪಕ ಸಂತಸ ವ್ಯಕ್ತಪಡಿಸಿದ್ದಾರೆ.

ಆಕ್ಸ್‌ಫರ್ಡ್ ಹಿಂದೂ ಟೆಂಪಲ್ ಪ್ರಾಜೆಕ್ಟ್ ತಂಡದವರು 15 ವರ್ಷಗಳಿಂದ ಹಿಂದು ದೇವಾ ಲಯಕ್ಕಾಗಿ ಸೂಕ್ತ ಕಟ್ಟಡಕ್ಕಾಗಿ ಹುಡುಕುತ್ತಿದ್ದರು. ಜೊತೆಗೆ ಸಹಾಯ ಮಾಡುವಂತೆ ಮಂಡಳಿಗೆ ಮನವಿ ಮಾಡಿದ್ದರು.

Leave a Reply

Your email address will not be published. Required fields are marked *